ಚನ್ನಪಟ್ಟಣ ನಗರದ ಕುವೆಂಪು ನಗರ ಮೂರನೇ ಅಡ್ಡರಸ್ತೆಯ ಬಳಿ ಹೆದ್ದಾರಿಗೆ ಹೊಂದಿಕೊಂಡಂತೆ ತೆಗೆದಿರುವ ಆಳವಾದ ಗುಂಡಿ
ಚನ್ನಪಟ್ಟಣ ನಗರದ ಕುಡಿನೀರುಕಟ್ಟೆ ಬಳಿ ಪೈಪ್ ಲೈನ್ ಮುಗಿದಿರುವ ನಂತರವೂ ಮುಚ್ಚದೆ ಹಾಗೆಯೆ ಬಿಟ್ಟಿರುವ ಗುಂಡಿ
ಅನಿಲ ಪೂರೈಕೆಗಾಗಿ ನಡೆಯುತ್ತಿರುವ ಪೈಪ್‌ಲೈನ್ ಕಾಮಗಾರಿಯ ಗುಂಡಿಗಳನ್ನು ಸರಿಯಾಗಿ ಮುಚ್ಚದೆ ಹಾಗೆಯೆ ಬಿಡಲಾಗಿದೆ. ಕೆಲವೆಡೆ ಮುಚ್ಚಿದ್ದರೂ ಸಮರ್ಪಕವಾಗಿ ಕೆಲಸ ನಡೆದಿಲ್ಲ. ಡಾಂಬರು ಸಹ ಹಾಕಿಲ್ಲ. ಗುಂಡಿಯನ್ನು ಸಮರ್ಪಕವಾಗಿ ಮುಚ್ಚದಿರುವ ಕಡೆಗಳಲ್ಲಿ ವಾಹನ ಸವಾರರು ರಸ್ತೆಯ ಸ್ಥಿತಿಯನ್ನು ಅರಿಯದೆ ಹೋಗಿ ಅಪಘಾತಕ್ಕಿಡಾಗಿದ್ದಾರೆ.
– ಅಮಿತ್ ಕುಮಾರ್ ಸ್ಥಳೀಯ ನಿವಾಸಿ ಚನ್ನಪಟ್ಟಣ
ಅಭಿವೃದ್ಧಿಯ ಹೆಸರಿನಲ್ಲಿ ಅಂದವಾಗಿದ್ದ ಬೆಂಗಳೂರು– ಮೈಸೂರು ರಸ್ತೆಯ ಎಡಭಾಗವನ್ನು ಅಗೆದು ಹಾಳು ಮಾಡಿ ಅಂದಗೆಡಿಸಲಾಗಿದೆ. ಗುಂಡಿ ತೆಗೆದು ಮುಚ್ಚಿ ಅಲ್ಲಿ ಡಾಂಬರು ಹಾಕಿದರೂ ಅದು ತೇಪೆ ಹಾಕಿದಂತೆ. ದೂರಾಲೋಚನೆ ಇಲ್ಲದೆ ಮಾಡುವ ಇಂತಹ ಕಾಮಗಾರಿಗಳಿಂದ ಎಲ್ಲರಿಗೂ ತೊಂದರೆ. ಇದನ್ನು ಸಂಬಂಧಪಟ್ಟವರು ಅರ್ಥ ಮಾಡಿಕೊಳ್ಳಬೇಕು.