ಭಾನುವಾರ, ಆಗಸ್ಟ್ 1, 2021
26 °C

ಕೋವಿಡ್‌-19: ರಾಮನಗರದಲ್ಲಿ ಮತ್ತೆ ಎರಡು ಪ್ರಕರಣ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಜಿಲ್ಲೆಯಲ್ಲಿ ಗುರುವಾರ ಇಬ್ಬರಲ್ಲಿ ಕೋವಿಡ್-19   ಸೋಂಕು ಇರುವುದು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. 

ಸೋಮವಾರ ಸೋಂಕು ಪತ್ತೆಯಾಗಿದ್ದ ರೋಗಿ ಸಂಖ್ಯೆ 3313  ವ್ಯಕ್ತಿಯ 23 ವರ್ಷದ ಪುತ್ರನಿಗೆ ಸೋಂಕು ತಗುಲಿದೆ. ಇವರು ರಾಮನಗರದವರಾಗಿದ್ದಾರೆ. ಚನ್ನಪಟ್ಟಣ ತಾಲ್ಲೂಕಿನ 28 ವರ್ಷದ ವ್ಯಕ್ತಿಯಲ್ಲೂ ಗುರುವಾರ ಸೋಂಕು ಪತ್ತೆಯಾಗಿದೆ.

ಆದರೆ ರಾಜ್ಯ ಆರೋಗ್ಯ ಇಲಾಖೆ ಗುರುವಾರ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಈ ಇಬ್ಬರು ಸೋಂಕಿತರ ವಿವರ ಇಲ್ಲ. ಜಿಲ್ಲಾಡಳಿತ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ ಇಬ್ಬರ ಸಂಖ್ಯೆ ನಮೂದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು