ಚನ್ನಪಟ್ಟಣ: ಮೈಸೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಬಾಣಗಹಳ್ಳಿ ಗ್ರಾಮದ ನವ್ಯಸಂಗಮ ಸಾಂಸ್ಕೃತಿಕ ಟ್ರಸ್ಟ್ನ ಗಾಯಕರ ಗೀತಗಾಯನ ಕಾರ್ಯಕ್ರಮ ನಡೆಯಿತು.

ಮೈಸೂರಿನ ನಾದಬ್ರಹ್ಮ ಸಭಾ ವೇದಿಕೆಯಲ್ಲಿ ಮೈಸೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ (ಅ.6) ರಾತ್ರಿ ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಅಧ್ಯಕ್ಷ ಎಸ್. ಜಯಸಿಂಹ ನೇತೃತ್ವದಲ್ಲಿ ಗಾಯಕರು ಕಾರ್ಯಕ್ರಮ ನಡೆಸಿಕೊಟ್ಟರು.

ಆರ್.ಕೆ. ಸ್ವಾಮಿ, ಮತ್ತಿಕುಂಟೆ ಕೃಷ್ಣಯ್ಯ, ನಾಗಶಿಲ್ಪ, ಬೆಂಗಳೂರು ದೀಪಿಕಾ, ಪ್ರಭಾಕರ್ ಹಾರೋಕೊಪ್ಪ, ಕುಸುಮಾ ಮೈಸೂರು, ಮಹೇಶ್ ಮೌರ್ಯ ಅಪ್ಪಗೆರೆ, ಪ್ರಕಾಶ್ ಬಾಣಂತಹಳ್ಳಿ(ಗಾಯನ), ಶ್ರೀನಿವಾಸ್ ಕಿರುಗುಂದ (ಕೀಬೋರ್ಡ್), ಪ್ರಕಾಶ್ ನಂಜನಗೂಡು ಹಾಗೂ ಕುಮಾರ್ ಮೈಸೂರು (ತಬಲ) ಭಾಗವಹಿಸಿದ್ದರು.

ಬಾಣಗಹಳ್ಳಿ ಗ್ರಾಮದ ತತ್ವಪದ ಹಾಡುಗಾರ್ತಿ ನಿಂಗಮ್ಮ ಅವರ ಮೊಮ್ಮಗ ಎಸ್.ಜಯಸಿಂಹ ನವ್ಯಸಂಗಮ ಸಾಂಸ್ಕೃತಿಕ ಟ್ರಸ್ಟ್ ಜಾನಪದ ತಂಡವನ್ನು ಕಟ್ಟಿ ದೆಹಲಿ, ಮುಂಬೈ ಸೇರಿದಂತೆ ಹೊರ ರಾಜ್ಯಗಳಲ್ಲಿ, ಹೊರ ದೇಶಗಳಲ್ಲಿ ಗೀತಗಾಯನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.