ಕಾರ್ಯಕ್ರಮದಲ್ಲಿ ಚನ್ನಪಟ್ಟಣದ ತೇಜಸ್ ಗೌಡ ಅವರು ನೀಡಿದ ಯಕ್ಷಗಾನ ಪ್ರದರ್ಶನ ಗಮನ ಸೆಳೆಯಿತು
ರಾಜ ಪ್ರಭುತ್ವ ಬ್ರಿಟಿಷ್ ಪ್ರಭುತ್ವ ಹಾಗೂ ಪ್ರಜಾಪ್ರಭುತ್ವದಲ್ಲಿ ಉನ್ನತ ಅಧಿಕಾರಿಯಾಗಿ ಕೆಲಸ ಮಾಡಿದ ಎಚ್.ಎಲ್. ನಾಗೇಗೌಡರು ಜಾನಪದಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟರು. ಅವರು ಕಟ್ಟಿದ ಈ ಪರಿಷತ್ತು ಮಾಡಿರುವ ಕೆಲಸವನ್ನು ಬೇರಾವ ಸಂಸ್ಥೆಯು ಮಾಡಿಲ್ಲ
– ಡಾ. ಚಕ್ಕೆರೆ ಶಿವಶಂಕರ್ ಜಾನಪದ ವಿದ್ವಾಂಸ
ನಮ್ಮ ನಾಡಿನಲ್ಲಿ 21 ಜಾನಪದ ಮಹಾಕಾವ್ಯಗಳು ಪ್ರಕಟಗೊಂಡಿವೆ. ದೇಶದ ಬೇರಾವ ಭಾಷೆಯಲ್ಲೂ ಇಷ್ಟೊಂದು ಮಹಾಕಾವ್ಯಗಳಿಲ್ಲ. ರಾಜ್ಯದಲ್ಲಿ 160ಕ್ಕೂ ಹೆಚ್ಚು ಜಾನಪದ ಕಲೆಗಳಿವೆ. ಬೇರಾವ ದೇಶ ಹಾಗೂ ರಾಜ್ಯಗಳಲ್ಲೂ ಇಷ್ಟು ಕಲೆಗಳಿಲ್ಲ
– ಪ್ರೊ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷ ಕರ್ನಾಟಕ ಜಾನಪದ ಪರಿಷತ್ತು