ರಾಮನಗರ: ನಗರಸಭೆ ನಿರ್ಗಮಿತ ಆಯುಕ್ತೆ ಶುಭಾ ಅವರ ಬೇಜವಾಬ್ದಾರಿತನದಿಂದ ರಾಧಾ ಎಂಬುವರಿಗೆ ಉದ್ಯೋಗ ಕೈ ತಪ್ಪಿದೆ ಎಂದು ಸಾಮಾಜಿಕ ಕಾರ್ಯಕರ್ತ ಗೋವಿಂದರಾಜು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

"ರಾಮನಗರದ 3ನೇ ವಾರ್ಡಿನ ನಿವಾಸಿ ರಾಧಾ ಅವರನ್ನು ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಜಿಲ್ಲಾಡಳಿತ ಆಯ್ಕೆ ಮಾಡಿತ್ತು. ಆದರೆ ಕೆಲವರು ದುರುದ್ದೇಶದಿಂದ ಅವರ 4ನೇ ವಾರ್ಡಿಗೆ ಸೇರಿದ್ದಾರೆ ಎಂದು ದೂರು ನೀಡಿದ್ದರು. ಈ ಕುರಿತು ವರದಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ನಗರಸಭೆ ವ್ಯಾಪ್ತಿಗೆ ಬರುವ ಕಾರಣ ಪೌರಾಯುಕ್ತೆ ಶುಭಾ ಸ್ಥಳ ಪರಿಶೀಲನೆ ಮಾಡಬೇಕಿತ್ತು. ಆದರೆ ಅವರು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಆಧರಿಸಿ ತಪ್ಪು ವರದಿ ನೀಡಿದ್ದರು. ಆದರೆ ಅವರು ವಾರ್ಡ್ ಮತದಾರರ ಪಟ್ಟಿ ಪರಿಶೀಲಿಸಿದ್ದರೆ ಇಲ್ಲವೇ ವಾಸ ದೃಢೀಕರಣ ಪತ್ರ ಪರಿಶೀಲಿಸಿದ್ದರೆ ಅವರು ಮೂರನೇ ವಾರ್ಡಿನಲ್ಲೇ ಇರುವುದು ಖಾತ್ರಿಯಾಗುತ್ತಿತ್ತು. ಈ ಕುರಿತು ಶುಭಾ ಅವರ ಗಮನಕ್ಕೂ ತರಲಾಗಿತ್ತು. ಆದರೆ ಶುಭಾ ಅವರು ರಾಧಾ ಅವರಿಗೆ ಬೆದರಿಕೆ ಹಾಕಿ ಕಳುಹಿಸಿದ್ದರು ಎಂದು ದೂರಿದರು.

ಸಮಸ್ಯೆ ಬಗೆಹರಿಸಿಕೊಡುವಂತೆ ಆಗ್ರಹಿಸಿ, ಜಿಲ್ಲಾಧಿಕಾರಿ, ಚುನಾವಣಾ ಆಯೋಗ ಸೇರಿದಂತೆ ಹಲವರಿಗೆ ಪತ್ರ ಬರೆಯಲಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಸೇವಾದಳದ ಅಧ್ಯಕ್ಷೆ ಆಶಾ, ಇತರೆ ಸಂಘಟನೆಗಳ ಪದಾಧಿಕಾರಿಗಳಾದ ಫರ್ವೀಜ್, ಸಲೀಂಪಾಷ, ಗಂಗಾಧರ್, ಸಂತೋಷ್, ಕೃಷ್ಣಪ್ಪ, ರಾಧಾ, ಗೌರೀಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.