ಕಾರ್ಯಕ್ರಮದ ಮೆರವಣಿಗೆಯನ್ನು ಸರಿಯಾಗಿ ಆಯೋಜಿಸಿಲ್ಲ ಎಂದು ಮೈದಾನದಲ್ಲಿ ಕುರುಬ ಸಮುದಾಯದ ನಾರಾಯಣಪ್ಪ ಸೇರಿದಂತೆ ವಿವಿಧ ಮುಖಂಡರು ಜಿಲ್ಲಾಡಳಿತ ವಿರುದ್ಧ ಜೂನಿಯರ್ ಕಾಲೇಜು ಮೈದಾನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು
ಕನಕದಾಸರ ಚಿತ್ರದ ಮೆರವಣಿಗೆಗೆ ತಯಾರಾಗಿ ನಿಂತಿದ್ದ ಬೆಳ್ಳಿ ರಥ
ಮೆರವಣಿಗೆಯಲ್ಲಿ ಗಮನ ಸೆಳೆದ ಜಾನಪದ ಕಲಾತಂಡಗಳು

ಕನಕದಾಸ ಜಯಂತಿಯಲ್ಲಿ ಎಲ್ಲರನ್ನೂ ಒಳಗೊಳ್ಳದೆ ಜಾತಿ ಜಯಂತಿ ಮಾಡಲಾಗಿದೆ. ಕಾರ್ಯಕ್ರಮವನ್ನು ಸರಿಯಾಗಿ ಆಯೋಜಿಸಿಲ್ಲ. ನಮ್ಮವರೇ ಮುಖ್ಯಮಂತ್ರಿ ಇದ್ದರೂ ಸಮುದಾಯದ ಬಗ್ಗೆ ಇಷ್ಟೊಂದು ತಾತ್ಸಾರವೇಕೆ ?
– ರೇಣುಕಾ ಪ್ರಸಾದ್ ಅಧ್ಯಕ್ಷ ರಾಮನಗರ ತಾಲ್ಲೂಕು ಕುರುಬರ ಸಂಘ
ಕನಕದಾಸರ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಜೊತೆಗೆ ಸಮಾಜದಲ್ಲಿ ಹೆಚ್ಚು ಪಸರಿಸಬೇಕು. ಕನಕದಾಸರ ಬದುಕು ವಿಚಾರಧಾರೆ ಹಾಗೂ ಕೊಡುಗೆ ಬಗ್ಗೆ ಎಲ್ಲರಲ್ಲೂ ಜಾಗೃತಿ ಮೂಡಿಸಬೇಕು
– ಜಿ.ಎನ್. ನಟರಾಜ್ ಅಧ್ಯಕ್ಷ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ