ಮಾಗಡಿ: ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಇತಿಹಾಸ ತಿಳಿಯಲು ಪ್ರತಿಮೆ ಉಳಿಸಿ ಸಂರಕ್ಷಿಸುವಂತೆ ಶಾಲಾ ಮಕ್ಕಳು ಪ್ರತಿಮೆ ಸ್ಥಳಾಂತರ ವಿರೋಧಿಸಿದರು.

ಪಟ್ಟಣದ ಕೆಂಪೇಗೌಡ ಪ್ರತಿಮೆ ವೀಕ್ಷಣೆ ಹಾಗೂ ಇತಿಹಾಸ ತಿಳಿಯಲು ಪ್ರವಾಸಕ್ಕೆಂದು ಆಗಮಿಸಿದ ವಿವಿಧ ಶಾಲಾ ಮಕ್ಕಳು ಕೆಂಪೇಗೌಡರ ಪ್ರತಿಮೆ ಮುಂದೆ ಘೋಷಣೆ ಬರಹದ ಪಟ ಹಿಡಿದು ‘ನಮ್ಮೆಲ್ಲರಿಗೂ ಆದರ್ಶವಾಗಿರುವ ಪ್ರತಿಮೆ ಸ್ಥಳಾಂತರ ಬೇಡ. ಇತಿಹಾಸದ ತಿಳಿಯಲು ಪ್ರತಿಮೆ ಇಲ್ಲೇ ಉಳಿಯಬೇಕು. ಪ್ರತಿಮೆಗೆ ನೆರಳಾಗಿರುವ ಮರಗಿಡಗಳನ್ನು ಸಂರಕ್ಷಿಸಬೇಕು. ಪರಿಸರ ಉಳಿಸಿ’ ಎಂದು ಘೋಷಣೆ ಕೂಗಿದರು.

ಗುರುಕುಲದ ದರ್ಶನ್ ಮಾತನಾಡಿ, ನಾಡಪ್ರಭು ಕೆಂಪೇಗೌಡ ಕೋಟೆ, ಗುಡಿ–ಗೋಪುರ, ಕೆರೆಗಳನ್ನು ನಿರ್ಮಿಸಿದ್ದಾರೆ. ಅವರ ಪ್ರತಿಮೆ ಸ್ಥಳಾಂತರ ವಿಷಯ ತಿಳಿದು ಮನಸ್ಸಿಗೆ ಬೇಸರವಾಯಿತು ಎಂದರು.

ಕೆಂಪೇಗೌಡ ಅಭಿವೃದ್ಧಿ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ ಮಾತನಾಡಿ, ಶಾಲಾ ಮಕ್ಕಳು ಪ್ರತಿಮೆ ಇಲ್ಲೇ ಉಳಿಯಬೇಕು ಘೋಷಣೆ ಕೂಗಿದ್ದಾರೆ. ಇದರಲ್ಲಿ ಯಾರ ಪಾತ್ರವೂ ಇಲ್ಲ ಎಂದರು.

ಶಾಲಾ ಮಕ್ಕಳು ಪ್ರತಿಭಟನೆಯಲ್ಲಿ ಭಾಗವಹಿಸುವಂತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಕೃಷ್ಣಮೂರ್ತಿ, ‘ಮಕ್ಕಳು ದೇವರಿಗೆ ಸಮಾನ. ಅವರ ಹೃದಯದಲ್ಲಿ ಕೆಂಪೇಗೌಡರಿದ್ದಾರೆ. ಸರ್ಕಾರ, ಶಿಕ್ಷಕರು ಯಾರೂ ಸಹ ಮಕ್ಕಳನ್ನು ಪ್ರಶ್ನಿಸುವಂತಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಮಾಡಬಾಳ್ ಸಿ.ಜಯರಾಂ, ಕೆಂಪೇಗೌಡ, ಮೋಹನ್, ವೆಂಕಟೇಶ್, ಆನಂದ್, ಜಯಣ್ಣ ಬುಡಾನ್ ಸಾಬ್, ನಾಗರಾಜು, ಶಿವಣ್ಣ, ಶಿವಲಿಂಗಯ್ಯ, ಕುಮಾರ್, ಶಂಕರಪ್ಪ, ನಾರಾಯಣ ಹಾಗೂ ವಿವಿಧ ಶಾಲಾ ಶಿಕ್ಷಕ, ಶಿಕ್ಷಕಿಯರು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.