ಶಾಲೆಗಳನ್ನು ಮುಚ್ಚಬಾರದು ‘ತಾಲ್ಲೂಕಿನ 7 ಗ್ರಾಮಗಳ ಶಾಲೆಗಳನ್ನು ಹೊಂಗನೂರು ಕೆಪಿಎಸ್ ಶಾಲೆಗೆ ವಿಲೀನ ಮಾಡುವ ನೆಪದಲ್ಲಿ ಈ ಶಾಲೆಗಳನ್ನು ಮುಚ್ಚಲು ಸರ್ಕಾರ ಹುನ್ನಾರ ನಡೆಸುತ್ತಿದೆ. ಯಾವುದೇ ಶಾಲೆಯಾದರೂ ಕಡಿಮೆ ದಾಖಲಾತಿ ಇದ್ದರೂ ಅದನ್ನು ಮುಚ್ಚಬಾರದು ಎನ್ನುವ ನಿಯಮ ಇದೆ. ಆದರೆ ಈ ಶಾಲೆಗಳಲ್ಲಿ 50ಕ್ಕೂ ಹೆಚ್ಚು ದಾಖಲಾತಿ ಇದ್ದರೂ ಮುಚ್ಚುವ ಸಂಚು ನಡೆಯುತ್ತಿದೆ. ಇದನ್ನು ನಾವು ವಿರೋಧಿಸುತ್ತೇವೆ.
ರೋಹಿತ್ ಜಿಲ್ಲಾ ಸಂಚಾಲಕ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ
ಸರ್ಕಾರಿ ಶಾಲೆಗಳನ್ನು ಉಳಿಸಿ ‘ನಮ್ಮ ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳು 50ಕ್ಕೂ ಹೆಚ್ಚು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿವೆ. ಈ ಶಾಲೆಗಳನ್ನು ಈಗ ಮುಚ್ಚಿದರೆ ಮತ್ತೆ ಗ್ರಾಮಕ್ಕೆ ಶಾಲೆಗಳನ್ನು ತರಲು ಸಾಧ್ಯವಾಗುವುದಿಲ್ಲ. ಇವು ಶಾಶ್ವತವಾಗಿ ಮುಚ್ಚಿದಂತೆಯೇ ಸರಿ. ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಈ ಶಾಲೆಗಳನ್ನು ಮುಚ್ಚುವ ಕಾರ್ಯ ಕೈಬಿಡಬೇಕು. ಈ ಶಾಲೆಗಳನ್ನು ಉಳಿಸಿ ಗ್ರಾಮಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು’.
ಮಂಜುನಾಥ್ ಪೋಷಕ ಸಂತೆ ಮೊಗೇನಹಳ್ಳಿ
ಗುಣಮಟ್ಟದ ಶಿಕ್ಷಣ ಆದ್ಯತೆಯಾಗಲಿ ಸರ್ಕಾರದ ಆದೇಶದಂತೆ ಹೊಂಗನೂರು ಕೆಪಿಎಸ್ ಶಾಲೆಗೆ ಈ ವ್ಯಾಪ್ತಿಯ 7 ಶಾಲೆಗಳನ್ನು ವಿಲೀನ ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ಸೌಲಭ್ಯ ಸಿಗುವಂತೆ ಮಾಡುವುದು ಶಿಕ್ಷಣ ಇಲಾಖೆ ಉದ್ದೇಶ. ವಿದ್ಯಾರ್ಥಿಗಳು ಹಾಗೂ ಪೋಷಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು.