ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮನಗರ ಶಿಕ್ಷಕ ಕ್ಷೇತ್ರದ ಉಪ ಚುನಾವಣೆ: ಶೇ 95.77 ಮತದಾನ

2,532 ಶಿಕ್ಷಕ ಮತದಾರರ ಪೈಕಿ 2,452 ಮಂದಿ ಹಕ್ಕು ಚಲಾವಣೆ
Published 16 ಫೆಬ್ರುವರಿ 2024, 16:10 IST
Last Updated 16 ಫೆಬ್ರುವರಿ 2024, 16:10 IST
ಅಕ್ಷರ ಗಾತ್ರ

ರಾಮನಗರ: ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಶುಕ್ರವಾರ ನಡೆದ ಮತದಾನದಲ್ಲಿ ಜಿಲ್ಲೆಯಲ್ಲಿ ಶೇ 95.77ರಷ್ಟು ಮತದಾನವಾಗಿದೆ. ಜಿಲ್ಲೆಯಲ್ಲಿರುವ 2,532 ಶಿಕ್ಷಕ ಮತದಾರರ ಪೈಕಿ 2,452 ಮಂದಿ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ.

ಬೆಳಿಗ್ಗೆಯಿಂದಲೇ ಮತದಾನ ಕೇಂದ್ರಗಳಲ್ಲಿ ಮತದಾನದ ಬಿರುಸಾಗಿ ನಡೆಯಿತು. ಶಿಕ್ಷಕರು ಮತಗಟ್ಟೆಗಳತ್ತ ಧಾವಿಸಿ ಹೋಗುತ್ತಿದ್ದ ದೃಶ್ಯ ಕಂಡುಬಂತು. ಕೇಂದ್ರಗಳಿಂದ ಅನತಿ ದೂರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರವಾಗಿದ್ದ ಪಕ್ಷದ ಮುಖಂಡರು, ಕಾರ್ಯಕರ್ತರು ಮತದಾರರ ಗುರುತಿನ ಚೀಟಿ ನೋಡಿ ಮತದಾರರ ಪಟ್ಟಿಯಲ್ಲಿ ಗುರುತು ಮಾಡುತ್ತಿದ್ದ ದೃಶ್ಯ ಕಂಡುಬಂತು.

ಮೈತ್ರಿ ಅಭ್ಯರ್ಥಿ ಎ.ಪಿ. ರಂಗನಾಥ್ ಅವರ ಪರವಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಮನಗರದ ಮತದಾನ ಕೇಂದ್ರದತ್ತ ಭೇಟಿ ನೀಡಿ, ಮತದಾನವನ್ನು ಗಮನಿಸಿದರು. ಈ ವೇಳೆ, ಪಕ್ಷದ ಸ್ಥಳೀಯ ಮುಖಂಡರು ಅವರನ್ನು ಭೇಟಿ ಮಾಡಿದರು. ರಂಗನಾಥ್ ಅವರ ಪತ್ನಿ ನಂದಿನಿ ಅವರು ಸಹ ಮತದಾನ ಕೇಂದ್ರದ ಬಳಿ ಪಕ್ಷದ ಮುಖಂಡರನ್ನು ಭೇಟಿಯಾದರು.

ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಅವರು ಸಹ ಇಲ್ಲಿನ ಮಿನಿ ವಿಧಾನಸೌಧದ ಬಳಿ ಸ್ಥಾಪಿಸಿದ್ದ ಮತದಾನ ಕೇಂದ್ರಕ್ಕೆ ಭೇಟಿ ನೀಡಿ, ಮತದಾನ ಪ್ರಕ್ರಿಯೆಯನ್ನು ಗಮನಿಸಿದರು. ಸಿಬ್ಬಂದಿಯಿಂದ ಮತದಾನದ ಶೇಕಡಾವಾರು ಮಾಹಿತಿ ಪರಿಶೀಲಿಸಿದರು. ಬೆಳಿಗ್ಗೆಯಿಂದ ಸಂಜೆವರೆಗೆ ಎಲ್ಲಾ ಕಡೆ ಹುರುಪಿನಿಂದ
ಮತದಾನ ಜರುಗಿತು. ಎಲ್ಲಾ ಕಡೆ ಬಹುತೇಕ ಶಾಂತಿಯುತವಾಗಿ ಮತದಾನ ಜರುಗಿತು. ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.

ರಾಮನಗರದ ಮಿನಿ ವಿಧಾನಸೌಧದಲ್ಲಿ ತೆರೆದಿದ್ದ ಮತದಾನ ಕೇಂದ್ರದಲ್ಲಿ ಹಕ್ಕು ಚಲಾಯಿಸಿದ ಶಿಕ್ಷಕಿಯೊಬ್ಬರು ಬೆರಳಿಗೆ ಹಚ್ಚಿದ ಶಾಯಿಯನ್ನು ತೋರಿಸಿದರು
ರಾಮನಗರದ ಮಿನಿ ವಿಧಾನಸೌಧದಲ್ಲಿ ತೆರೆದಿದ್ದ ಮತದಾನ ಕೇಂದ್ರದಲ್ಲಿ ಹಕ್ಕು ಚಲಾಯಿಸಿದ ಶಿಕ್ಷಕಿಯೊಬ್ಬರು ಬೆರಳಿಗೆ ಹಚ್ಚಿದ ಶಾಯಿಯನ್ನು ತೋರಿಸಿದರು
ರಾಮನಗರದ ಮಿನಿ ವಿಧಾನಸೌಧದಲ್ಲಿ ತೆರೆದಿದ್ದ ಮತದಾನ ಕೇಂದ್ರದ ಬಳಿ ನೆರೆದಿದ್ದ ಕಾಂಗ್ರೆಸ್ ಮುಖಂಡರು
ರಾಮನಗರದ ಮಿನಿ ವಿಧಾನಸೌಧದಲ್ಲಿ ತೆರೆದಿದ್ದ ಮತದಾನ ಕೇಂದ್ರದ ಬಳಿ ನೆರೆದಿದ್ದ ಕಾಂಗ್ರೆಸ್ ಮುಖಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT