ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲೇ ಪಾಠ: ಪರೀಕ್ಷೆಗೂ ಸಿದ್ಧತೆ

ಕಾಲೇಜು ಪುನರಾರಂಭದ ಅನಿಶ್ಚಿತತೆ: ಮೊಬೈಲ್‌ನಲ್ಲೇ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
Last Updated 24 ಮೇ 2020, 15:05 IST
ಅಕ್ಷರ ಗಾತ್ರ

ರಾಮನಗರ: ಲಾಕ್‌ಡೌನ್ ಕಾರಣಕ್ಕೆ ಯಾವಾಗ ಶಾಲೆ-ಕಾಲೇಜು ತೆರೆಯುವುದೋ ಎಂಬ ಅನಿಶ್ಚಿತತೆ ನಡುವೆಯೇ ಶಿಕ್ಷಣ ಸಂಸ್ಥೆಗಳು ಆನ್‌ಲೈನ್‌ ಪಾಠಕ್ಕೆ ಮೊರೆ ಹೋಗಿವೆ. ಕೆಲವರು ಈ ಮೂಲಕವೇ ಪರೀಕ್ಷೆಗೂ ಸಿದ್ಧತೆ ನಡೆಸಿದ್ದಾರೆ.

ಶಾಲೆ-ಕಾಲೇಜುಗಳ ಬಾಗಿಲು ಮುಚ್ಚಿ ಎರಡು ತಿಂಗಳೇ ಕಳೆದಿದೆ. ಆದರೆ ಪರೀಕ್ಷೆ ಮುಂದೂಡುವ ಹಾಗಿಲ್ಲ. ಹೀಗಾಗಿ ಪ್ರಮುಖ ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳಿಗೆ ಮೊಬೈಲ್‌ ಮೂಲಕವೇ ಪಾಠ ಹೇಳಿಕೊಡುವ ಪರಿಪಾಠ ನಿತ್ಯ ನಿರಂತರವಾಗಿ ನಡೆದಿದೆ. ಬೆಂಗಳೂರು, ಮೈಸೂರು ವಿಶ್ವವಿದ್ಯಾಲಯಗಳಂತ ಪ್ರತಿಷ್ಠಿತ ವಿಶ್ವವಿದ್ಯಾಲಯಗಳು ಈ ಕಾರ್ಯ ಮಾಡುತ್ತಿವೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಧೀನದಲ್ಲಿ ಇರುವ ನೂರಾರು ಎಂಜಿನಿಯರಿಂಗ್‌ ಕಾಲೇಜುಗಳೂ ಆಲ್‌ಲೈನ್‌ ಪಾಠಕ್ಕೆ ಮೊರೆ ಹೋಗಿವೆ.

ಜೂಮ್ ತಂತ್ರಾಂಶ ಬಳಕೆ: ಹೆಚ್ಚಿನ ಅಧ್ಯಾಪಕರು ಜೂಮ್‌ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷ ಣ ನೀಡುತ್ತಿದ್ದಾರೆ. ಇದರಿಂದ ಏಕಕಾಲದಲ್ಲಿ 40 ರಿಂದ 50 ಮಕ್ಕಳಿಗೆ ಪಾಠ ಬೋಧಿಸಬಹುದು. ಅದರಂತೆ ದಿನಕ್ಕೆ ಎರಡು-ಮೂರು ಬ್ಯಾಚ್‌ ಮಾಡಿಕೊಂಡು ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ಅಧ್ಯಾಪಕರು ತಂತ್ರಜ್ಞಾನ ಬಳಸಿಕೊಂಡು ಲಾಕ್‌ ಡೌನ್‌ ಸಮಯವನ್ನು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾಠಗಳನ್ನು ಮುಗಿಸಿಕೊಡುವ ಮೂಲಕ ವಿದ್ಯಾರ್ಥಿಗಳ ಪರೀಕ್ಷಾ ಭಯವನ್ನು ಹೋಗಲಾಡಿಸುವ ಕೆಲಸ ಮಾಡುತ್ತಿದ್ದಾರೆ.

’ಯುಜಿಸಿ ಎಲ್‌ಎಂಎಸ್‌(ಲರ್ನಿಂಗ್‌ ಮ್ಯಾನೆಜ್‌ಮೆಂಟ್‌ ಸಿಸ್ಟಂ) ಜಾರಿಗೆ ತಂದಿದೆ. ಇದರ ಮುಖ್ಯ ಉದ್ದೇಶವೇ ಆನ್‌ಲೈನ್‌ ಶಿಕ್ಷ ಣ ನೀಡುವುದು. ಸದ್ಯ ನಾನು 10 ದಿನದಿಂದ ಮಕ್ಕಳಿಗೆ ಗೂಗಲ್‌ ಕ್ಲಾಸ್‌ ರೂಂ ಶಿಕ್ಷ ಣ ನೀಡುತ್ತಿದ್ದೇನೆ. ವಿದ್ಯಾರ್ಥಿಗಳು ಖುಷಿಯಿಂದಲೇ ಮನೆಯಿಂದಲೇ ಪಾಠ ಕೇಳುತ್ತಿದ್ದಾರೆ’ ಎನ್ನುತ್ತಾರೆ ಉಪನ್ಯಾಸಕ ಮನೋಜ್‌ ಕುಮಾರ್‌.
ಮಿತ ಖರ್ಚು: ಆನೆ ಲೈನ್‌ ಶಿಕ್ಷ ಣ ಸುಲಭ. ಪ್ಲೇ ಸ್ಟೋರ್‌ ನಿಂದ ಆ್ಯಪ್‌ ಡೌನ್‌ಲೋಡ್ ಮಾಡಿಕೊಂಡರೆ ಸಾಕು. ವಿದ್ಯಾರ್ಥಿಗಳಿಗೆ ನಿತ್ಯ 400 ರಿಂದ 500 ಎಂಬಿ ಮೊಬೈಲ್‌ ಡಾಟಾ ಖಾಲಿಯಾಗುತ್ತದೆ. ಆನ್‌ಲೈನ್‌ ಸಿನಿಮಾ ನೋಡುವುದಕ್ಕಿಂತ ಇದು ಎಷ್ಟೋ ವಾಸಿ ಎಂಬುದು ವಿದ್ಯಾರ್ಥಿಗಳ ಅಭಿಮತ.

ನಿರಂತರವಾಗಿ ತರಗತಿ ನಡೆಯದಿದ್ದರೆ ಮಕ್ಕಳ ಶೈಕ್ಷ ಣಿಕ ಚಟುವಟಿಕೆ ಕುಂಠಿತವಾಗುತ್ತದೆ ಎಂಬ ಆತಂಕದಲ್ಲಿ ನಗರದ ಹಲವು ಕಾಲೇಜುಗಳಲ್ಲಿ ಗೂಗಲ್‌ ಕ್ಲಾಸ್‌ ರೂಂ ಪಾಠ ನಡೆಯುತ್ತಿದೆ. ಮಾಮೂಲಿ ತರಗತಿಯಂತೆಯೇ ಇಲ್ಲಿಯೂ ಅಸೈನ್ಮೆಂಟ್‌ ನೀಡಲಾಗುತ್ತದೆ. ಆನ್‌ಲೈನ್‌ನಲ್ಲೇ ಕಿರು ಪರೀಕ್ಷೆಗಳನ್ನು ಸಹ ಸಂಘಟಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT