ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿಯುಸಿ–2 ಪರೀಕ್ಷೆ | ರಾಮನಗರ ಜಿಲ್ಲೆಗೆ ಶೇ 26.66 ಫಲಿತಾಂಶ

ವಿಜ್ಞಾನ ಗರಿಷ್ಠ, ವಾಣಿ‌ಜ್ಯದಲ್ಲಿ ಕನಿಷ್ಠ ಫಲಿತಾಂಶ; ಹೆಣ್ಣು ಮಕ್ಕಳೇ ಮುಂದೆ
Published 25 ಮೇ 2024, 5:17 IST
Last Updated 25 ಮೇ 2024, 5:17 IST
ಅಕ್ಷರ ಗಾತ್ರ

ರಾಮನಗರ: ದ್ವಿತೀಯ ಪಿಯುಸಿ ಪರೀಕ್ಷೆ–2ರ ಫಲಿತಾಂಶ ಬಂದಿದ್ದು, ಜಿಲ್ಲೆಯು ಶೇ 26.66ರಷ್ಟು ಫಲಿತಾಂಶ ಪಡೆದಿದೆ. ಪರೀಕ್ಷೆ ಎದುರಿಸಿದ 1,793 ವಿದ್ಯಾರ್ಥಿಗಳ ಪೈಕಿ 478 ಮಂದಿ ಪಾಸಾಗಿದ್ದಾರೆ. ಫಲಿತಾಂಶದ ಪೈಕಿ ಕಲಾ ವಿಷಯದಲ್ಲಿ ಶೇ 19.62, ವಿಜ್ಞಾನದಲ್ಲಿ ಶೇ 44.22 ಹಾಗೂ ವಾಣಿಜ್ಯ ವಿಷಯದಲ್ಲಿ ಶೇ 16.26 ಫಲಿತಾಂಶ ಬಂದಿದೆ.

ಪರೀಕ್ಷೆಗೆ ಹಾಜರಾಗಿದ್ದ 1,295 ಹೊಸ ವಿದ್ಯಾರ್ಥಿಗಳಲ್ಲಿ 408 ಮಂದಿ (ಶೇ 31.51) ಉತ್ತೀರ್ಣರಾಗಿದ್ದಾರೆ. ಪುನರಾವರ್ತಿತ 408 ಮಂದಿ ಪೈಕಿ 61 (ಶೇ 14.95) ಹಾಗೂ 90 ಖಾಸಗಿ ವಿದ್ಯಾರ್ಥಿಗಳ ಪೈಕಿ 9 (ಶೇ 10) ಮಂದಿ ಪಾಸಾಗಿದ್ದಾರೆ. ಲಿಂಗವಾರು ಫಲಿತಾಂಶವನ್ನು ನೋಡಿದಾಗ, ಹೆಣ್ಣು ಮಕ್ಕಳೇ ಮುಂದಿದ್ದಾರೆ.

ಕಲಾ ವಿಭಾಗದಲ್ಲಿ 232, ವಾಣಿಜ್ಯ 270 ಹಾಗೂ ವಿಜ್ಞಾನದಲ್ಲಿ 320 ವಿದ್ಯಾರ್ಥಿನಿಯರು ಒಳಗೊಂಡಂತೆ 862 ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 280 ಮಂದಿ ಪಾಸಾಗಿದ್ದಾರೆ. ಅದೇ ರೀತಿ ಗಂಡು ಮಕ್ಕಳಲ್ಲಿ ಕಲಾ ವಿಭಾಗದಲ್ಲಿ 349, ವಾಣಿಜ್ಯ 345 ಹಾಗೂ ವಿಜ್ಞಾನದಲ್ಲಿ 237 ಮಂದಿ ಸೇರಿ 931 ಮಂದಿ ‍ಪರೀಕ್ಷೆ ಎದುರಿಸಿದ್ದು,198 ಮಂದಿ ತೇರ್ಗಡೆಯಾಗಿದ್ದಾರೆ.

‍ಪರೀಕ್ಷೆಗೆ ಕನ್ನಡಕ್ಕಿಂತ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿಗಳೇ ಹೆಚ್ಚು ಹಾಜರಾಗಿದ್ದಾರೆ. ಇಂಗ್ಲಿಷ್‌ನಲ್ಲಿ ಪರೀಕ್ಷೆ ಎದುರಿಸಿದ 958 (ಕಲಾ–19, ವಾಣಿಜ್ಯ–342, ವಿಜ್ಞಾನ–597) ಮಂದಿ ಪೈಕಿ 325 ಮಂದಿ (ಕಲಾ–1, ವಾಣಿಜ್ಯ–60, ವಿಜ್ಞಾನ–264) ಪಾಸಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ 835 (ಕಲಾ–562, ವಾಣಿಜ್ಯ–273, ವಿಜ್ಞಾನ–0) ಜನ ಪರೀಕ್ಷೆ ಬರೆದಿದ್ದು, 153 (ಕಲಾ– 113, ವಾಣಿಜ್ಯ–40, ವಿಜ್ಞಾನ–0) ಜನ ಉತ್ತೀರ್ಣರಾಗಿದ್ದಾರೆ.

ಜಾತಿವಾರು ಫಲಿತಾಂಶ: ಪರೀಕ್ಷೆ ಎದುರಿಸಿದ 487 ಎಸ್.ಸಿ ವಿದ್ಯಾರ್ಥಿಗಳಲ್ಲಿ 114 (ಶೇ 23.41) ಮಂದಿ ತೇರ್ಗಡೆಯಾಗಿದ್ದಾರೆ. ಎಸ್.ಟಿ.ಯಲ್ಲಿ 31 ಮಂದಿ ಪೈಕಿ 5 (ಶೇ 16.13), ಗ್ರೂಪ್–1ರಲ್ಲಿ 81 ಮಂದಿ ಪೈಕಿ 18 (ಶೇ 22.22), 2ಎಯಲ್ಲಿ 281 ಮಂದಿಯಲ್ಲಿ 81 (ಶೇ 28.83), 2ಬಿಯಲ್ಲಿ 187 ಜನರ ಪೈಕಿ 40 (ಶೇ 21.39), 3ಎಯ 585 ಮಂದಿ ಪೈಕಿ 164 (ಶೇ 28.03), 3ಬಿಯಲ್ಲಿ 97 ಮಂದಿಯಲ್ಲಿ 39 (ಶೇ 40.21) ಹಾಗೂ ಸಾಮಾನ್ಯ ವರ್ಗದ 44 ಮಂದಿ ಪೈಕಿ 17 (ಶೇ 38.64) ಮಂದಿ ಪಾಸಾಗಿದ್ದಾರೆ.

ಫಲಿತಾಂಶದ ವಿವರ

ವಿದ್ಯಾರ್ಥಿಗಳ ಬಗೆ;ಹಾಜರು;ಉತ್ತೀರ್ಣ: ಶೇಕಡವಾರು

ಹೊಸ ವಿದ್ಯಾರ್ಥಿಗಳು;1,295;408;31.51

ಪುನರಾವರ್ತಿತ ವಿದ್ಯಾರ್ಥಿಗಳು;408;61;14.95

ಖಾಸಗಿ ವಿದ್ಯಾರ್ಥಿಗಳು;90;9;10

ಈ ಸಲದ ದ್ವಿತೀಯ ಪಿಯುಸಿ ಪರೀಕ್ಷೆ–2ರ ಫಲಿತಾಂಶದ ಮೂರು ವಿಭಾಗಗಳ ಪೈಕಿ ವಿಜ್ಞಾನ ವಿಷಯದಲ್ಲಿ ಗರಿಷ್ಠ ಶೇ 44.22ರಷ್ಟು ಫಲಿತಾಂಶ ಬಂದಿದೆ. ಲಿಂಗವಾರು ಫಲಿತಾಂಶ ನೋಡಿದಾಗ ಹೆಣ್ಣು ಮಕ್ಕಳೇ ಮುಂದಿದ್ದಾರೆ – ನಾಗಮ್ಮ ಎಂ.ಪಿ. ಉಪ ನಿರ್ದೇಶಕಿ ಪದವಿ ಪೂರ್ವ ಶಿಕ್ಷಣ ಇಲಾಖೆ ರಾಮನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT