ರಾಮನಗರ: ನಗರದ ಛತ್ರದ ಬೀದಿಯಲ್ಲಿ ಶ್ರೀ ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಮತ್ತು ಅರಳೀಕಟ್ಟೆ ಗೆಳೆಯರ ಬಳಗ 41ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಿದ್ದ ಮುದ್ಗಲ್ ಪುರಾಣ ಪ್ರಸಿದ್ಧ ಉಚ್ಛಿಷ್ಟ ಗಣಪತಿಗೆ ಭಾನುವಾರ ಸಂಭ್ರಮದ ವಿದಾಯ ಹೇಳಿ ವಿಸರ್ಜನೆ ಮಾಡಲಾಯಿತು.

ವಿಸರ್ಜನಾ ಮೆರವಣಿಗೆಗೆ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ರಾಮನಗರ ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣ ಹಾಗೂ ಇತರ ಗಣ್ಯರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶೇಷಾದ್ರಿ, ಸ್ವಾತಂತ್ರ್ಯ ಪೂರ್ವದಲ್ಲಿ ಮನೆ ಮನೆಗೆ ಸೀಮಿತವಾಗಿದ್ದ ಗಣೇಶಮೂರ್ತಿ ಪ್ರತಿಷ್ಠಾಪನೆಯನ್ನು ಬಾಲಗಂಗಾಧರ ತಿಲಕ ಅವರು ಜನರನ್ನು ಒಗ್ಗೂಡಿಸುವ ಸಲುವಾಗಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತಂದರು. ಅಂದಿನಿಂದಲೂ ಸಾರ್ವಜನಿಕ ಗಣೇಶೋತ್ಸವಗಳು ವಿಜೃಂಭಣೆಯಿಂದ ನಡೆಯುತ್ತಿವೆ ಎಂದರು.

ಗಣೇಶೋತ್ಸವ ಸರ್ವರನ್ನೂ ಒಗ್ಗೂಡಿಸಿ ಸ್ನೇಹ, ಬಾಂಧವ್ಯ ಬೆಸೆಯುತ್ತದೆ. ವಿವಿಧ ಕಾರ್ಯಕ್ರಮಗಳು ಸಮಾಜದಲ್ಲಿ ಸಾಮರಸ್ಯ ಸಾರುತ್ತವೆ. ಯುವಕರಲ್ಲಿ ಒಗ್ಗಟ್ಟು ಮೂಡಿಸುತ್ತದೆ. ರಾಮನಗರದಲ್ಲಿ ಕೂಡ ಹಿಂದಿನಿಂದಲೂ ಎಲ್ಲರೂ ಒಗ್ಗಟ್ಟಾಗಿ ಸಾರ್ವಜನಿಕವಾಗಿ ಗಣೇಶ ಹಬ್ಬ ಆಚರಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.

ಅರ್ಕಾವತಿ ವಿದ್ಯಾಗಣಪತಿ ಯುವ ಸೇವಾ ಸಂಘ ಮತ್ತು ಅರಳೀಕಟ್ಟೆ ಗೆಳೆಯರ ಬಳಗವು ಕಳೆದ 41 ವರ್ಷಗಳಿಂದಲೂ ಪುರಾಣ ಕಥೆಗಳಿಗೆ ಪೂರಕವಾಗಿ ವಿಶೇಷವಾದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುತ್ತಾ ಬಂದಿವೆ. ಇದು ಸಮಿತಿಯವರ ಸಾಮಾಜಿಕ ಧಾರ್ಮಿಕ ಭಾವನೆ ತೋರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಛತ್ರದ ಬೀದಿಯ ಆಸ್ಥಾನ ಮಂಟಪದಿಂದ ಹೊರಟ ಗಣಪತಿ ಮೆರವಣಿಗೆಯು ಅಗ್ರಹಾರ, ಕಾಯಿಸೊಪ್ಪಿನ ಬೀದಿ, ನಗರಸಭೆ ರಸ್ತೆ, ಶೆಟ್ಟಹಳ್ಳಿ ಬೀದಿ, ಕಾಮನಗುಡಿ ಸರ್ಕಲ್, ಎಂ.ಜಿ. ರಸ್ತೆ, ಮಂಡಿಪೇಟೆ, ಬಾಲಗೇರಿ, ಹಳೆ ಬಸ್ ನಿಲ್ದಾಣ, ಮಾಗಡಿ ರಸ್ತೆ ಮತ್ತು ಐಜೂರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಮೆರವಣಿಗೆಯಲ್ಲಿ ಮಂಗಳ ವಾದ್ಯ, ಕೇರಳದ ಚಂಡೆ, ಪೂಜಾ ಕುಣಿತ, ವೀರಗಾಸೆ ಅಘೋರಿ, ತಮಟೆ ಕಲಾವಿದರು, ಜನಪದ ಕಲಾ ಮೇಳಗಳು ಮೆರವಣಿಗೆಗೆ ಮೆರಗು ತಂದವವು. ರಾತ್ರಿ ರಂಗರಾಯರದೊಡ್ಡಿ ಕೆರೆ ಬಳಿಯ ಸಿರಿಗೌರಿ ಕಲ್ಯಾಣಿಯಲ್ಲಿ ಗಣಪತಿ ವಿಸರ್ಜನೆ ಮಾಡಲಾಯಿತು.

ರಾಮನಗರ ಪುರ ಠಾಣೆ ಎಸ್ಐ ತನ್ವೀರ್ ಹುಸೇನ್, ಸಂಚಾರ ಠಾಣೆ ಎಸ್ಐ ಅಲ್ಲಾವುದ್ದೀನ್, ಗಣೇಶ್ ಜುವೆಲ್ಲರ್ಸ್ ಮಾಲೀಕ ಲಕ್ಷ್ಮಣ್, ಟಿಇಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿ ಸುರೇಶ್, ಸಂಘದ ಅಧ್ಯಕ್ಷ ಪಿ.ವೈ. ರವಿಂದ್ರ ಹೇರ್ಳೆ, ಕಾರ್ಯದರ್ಶಿ ಉಮಾ ಮಹದೇವಪ್ಪ, ಪದಾಧಿಕಾರಿಗಳು ಹಾಗೂ ಅರಳೀಕಟ್ಟೆ ಗೆಳೆಯರ ಬಳಗದ ಪದಾಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.