ಭಾನುವಾರ, ಮಾರ್ಚ್ 26, 2023
31 °C

ರಾಮನಗರ: ಸೆಲ್ಫಿ ವಿಡಿಯೊ ಮಾಡಿಟ್ಟು ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಬೆಂಗಳೂರು ದಕ್ಷಿಣ ತಾಲ್ಲೂಕಿನ ಬನ್ನೇರುಘಟ್ಟ ರಸ್ತೆಯಲ್ಲಿ ಈಚೆಗೆ ಸಾಲಗಾರರ ಹಿಂಸೆ, ಬೆದರಿಕೆಗೆ ಬೇಸತ್ತು ವ್ಯಕ್ತಿಯೊಬ್ಬ ವಿಡಿಯೊ ಮಾಡಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಶಿವರಾಜು (33) ಎಂದು ಗುರುತಿಸಲಾಗಿದೆ. ಸಾಲದ ಜಾಮೀನು ಪತ್ರಕ್ಕೆ ಸಹಿ ಹಾಕಿದ್ದಕ್ಕೆ ಪ್ರತಿಯಾಗಿ ಸಾಲಗಾರರು ನೀಡಿದ ಮಾನಸಿಕ ಹಿಂಸೆ, ಬೆದರಿಕೆಗೆ ಬೇಸತ್ತು ತಾನು ಆತ್ಮಹತ್ಯೆ ದಾರಿ ಹಿಡಿದದ್ದಾಗಿ ಶಿವರಾಜು ವಿಡಿಯೊದಲ್ಲಿ ಹೇಳಿಕೊಂಡಿದ್ದಾರೆ.

ಶಿವರಾಜು ಮತ್ತು ಸ್ನೇಹಿತರು ಜೂಜಾಟಕ್ಕೆ ರೇಣುಕಾರಾಧ್ಯ ಎಂಬುವರಿಂದ ಮೀಟರ್ ಬಡ್ಡಿ ಲೆಕ್ಕದಲ್ಲಿ ₹30 ಸಾವಿರ ಸಾಲ ಪಡೆದಿದ್ದರು. ಬಡ್ಡಿ ಕಟ್ಟಿಲ್ಲ ಎಂಬ ಕಾರಣಕ್ಕೆ ಸಾಲ ಕೊಟ್ಟವರು ಶಿವರಾಜು ಅವರ ಬೈಕ್‌ ಎತ್ತಿಕೊಂಡು ಹೋಗಿದ್ದರು. ನಂತರವೂ ಹಣಕ್ಕಾಗಿ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿದೆ. ಧನು, ರೇಣುಕಾರಾಧ್ಯ, ವೆಂಕಟೇಶ್ ಎಂಬುವರ ವಿರುದ್ಧ ಕಗ್ಗಲೀಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು