ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರೋಹಳ್ಳಿ | ತುಂಡಾದ ಜಿಪ್‌ಲೈನ್‌ ತಂತಿ ಬಿದ್ದು ಮಹಿಳೆ ಸಾವು

ರಜೆ ಕಳೆಯಲು ಸ್ನೇಹಿತರ ಜತೆ ಬೆಟ್ಟಹಳ್ಳಿ ಗ್ರಾಮದ ರೆಸಾರ್ಟ್‌ಗೆ ತೆರಳಿದ್ದ ಮಹಿಳೆ
Published 20 ಮೇ 2024, 0:09 IST
Last Updated 20 ಮೇ 2024, 0:09 IST
ಅಕ್ಷರ ಗಾತ್ರ

ಹಾರೋಹಳ್ಳಿ: ತಾಲ್ಲೂಕಿನ ಬೆಟ್ಟಹಳ್ಳಿ ಗ್ರಾಮದ ಜಂಗಲ್ ಟ್ರಯಲ್ಸ್ ರೆಸಾರ್ಟ್‌ನಲ್ಲಿ ಭಾನುವಾರ ಬೆಳಗ್ಗೆ ಜಿಪ್‌ಲೈನ್ ಆಡುವಾಗ ತಂತಿ ತುಂಡಾದ ಕಾರಣ 20 ಅಡಿ ಎತ್ತರಿಂದ ಬಿದ್ದು ಮಹಿಳೆಯೊಬ್ಬರು ಸಾವಿಗೀಡಾಗಿದ್ದು, ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ.

ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ರಂಜನಿ (35) ಮೃತ ಮಹಿಳೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಬೆಂಗಳೂರಿನ ಜೆ.ಪಿ. ನಗರದ ಮಿಲನ ನರ್ಸಿಂಗ್ ಹೋಮ್‌ನಲ್ಲಿ ಅವರು ಕೆಲಸ ಮಾಡುತ್ತಿದ್ದರು. ರೆಸಾರ್ಟ್ ವ್ಯವಸ್ಥಾಪಕ ಕನಕಪುರದ ಪುಟ್ಟಮಾದು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಭಾನುವಾರದ ರಜೆ ಕಳೆಯಲು ರಂಜನಿ ತಮ್ಮ 18 ಸಹೋದ್ಯೋಗಿಗಳೊಂದಿಗೆ ಜಂಗಲ್ ಟ್ರಯಲ್ಸ್ ರೆಸಾರ್ಟ್‌ಗೆ ಬಂದಿದ್ದರು. ರೆಸಾರ್ಟ್‌ನಲ್ಲಿ ಜಿಪ್‌ಲೈನ್ ಆಡುವಾಗ ತಂತಿ ತುಂಡರಿಸಿ ಕೆಳಗೆ ಬಿದ್ದರು. ತಕ್ಷಣ ಸ್ನೇಹಿತರು ಅವರನ್ನು ದಯಾನಂದ ಸಾಗರ ಆಸ್ಪತ್ರೆಗೆ ಸಾಗಿಸಿದರು. ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ರೆಸಾರ್ಟ್ ಮಾಲೀಕರು ಸುರಕ್ಷಾ ನಿಯಮ ಪಾಲಿಸಿಲ್ಲ. ಅಜಾಗರೂಕತೆ, ನಿರ್ಲಕ್ಷ್ಯ ವಹಿಸಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿ ರಂಜನಿ ಅವರ ಸ್ನೇಹಿತೆ ನಿರ್ಮಲಾ ಹಾರೋಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹಾರೋಹಳ್ಳಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜಿಪ್‌ಲೈನ್ ಹಗ್ಗ ಸರಿಯಿಲ್ಲವೆಂದು ಈ ಹಿಂದೆಯೂ ಹಲವು ಬಾರಿ ರೆಸಾರ್ಟ್‌ಗೆ ಬಂದವರು ದೂರಿದ್ದರು ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT