ಮಾಗಡಿ: ತಾಲೂಕಿನಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಲ್ಯಾ ಗ್ರಾಮಕ್ಕೆ ಸಾಕಷ್ಟು ಇತಿಹಾಸ ಹೊಂದಿರುವ ಗ್ರಾಮವಾಗಿದ್ದು ದಕ್ಷಿಣ ಭಾರತದ ಸಾಂಸ್ಕೃತಿಕ ಕೇಂದ್ರ ಧಾರ್ಮಿಕ ಕೇಂದ್ರಗಳಿಂದ ಸಾಕಷ್ಟು ಪ್ರಸಿದ್ಧಿ ಹೊಂದಿದ್ದು ಕಲ್ಯಾ ಗ್ರಾಮಕ್ಕೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ ಸಾಕಷ್ಟು ಅಧ್ಯಯನಗಳ ಮೂಲಕ ಕಲ್ಯಾ ಮಾಗಡಿ ತಾಲೂಕಿಗೆ ಕಳಶ ಇದ್ದಂತೆ ಎಂದು ಬಣ್ಣಿಸಲಾಗಿದೆ.
ಇತಿಹಾಸ: ಕಲ್ಯಾ ಗ್ರಾಮದಲ್ಲಿ ಸಂಶೋಧನೆ ವೇಳೆ 12 ಶಾಸನಗಳು ಶಾಸನಗಳು ಪತ್ತೆಯಾಗಿದ್ದು ಒಂದು ಶಾಸನದಲ್ಲಿ ಸತಿ ನಾಡು ಎಂದು ಬರೆಯಲಾಗಿದೆ ವಿಜಯನಗರದ ವಿಠಲನಾಥ ಕಲ್ಯಾ ಕೆರೆಯನ್ನು ಕಟ್ಟಿಸಿದರು ಎಂಬ ಉಲ್ಲೇಖ ಬೆಟ್ಟದ ಮೇಲೆ ಬಂಡೆಯ ಮೇಲೆ ದಪ್ಪ ಅಕ್ಷರದಲ್ಲಿ ಕೆತ್ತಿಸಲಾಗಿದೆ ಹೀಗೆ ಹತ್ತು ಹಲವು ಕೌತುಕಗಳನ್ನು ಹೊಂದಿರುವ ಕಲ್ಯಾ ಗ್ರಾಮದ ಇತಿಹಾಸ ನೋಡಿದರೆ ಸಾಕಷ್ಟು ಧಾರ್ಮಿಕತೆ ಹೊಂದಿದ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆಂಧ್ರ ಮಹಾಕವಿಯ ಪುಣ್ಯಕ್ಷೇತ್ರವಾದ ಕಳಾವತಿ ಪಟ್ಟಣ: ಅರವತ್ತನಾಲ್ಕು ಶೀಲಗಳನ್ನು ಅನುಸರಿಸುತ್ತಿದ್ದ ಶಿವಶರಣ ಪಾಲ್ಕುರಿಕೆ ಸೋಮನಾಥ ಆಂಧ್ರ ಪ್ರದೇಶದ ಒಬ್ಬ ಮಹಾಕವಿ. ಐದು ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದ ಮಹಾ ವಿದ್ವಾಂಸನು ಆಂಧ್ರದಲ್ಲಿ ಹುಟ್ಟಿಬೆಳೆದ್ದಾದರು ಅವರ ಪಾಲಿನ ಪುಣ್ಯಕ್ಷೇತ್ರವಾಗಿದ್ದು ಮಾಗಡಿ ತಾಲೂಕಿನ ಕಳಾವತಿ ಪಟ್ಟಣ.
ಮಾಗಡಿ ಪಟ್ಟಣದಿಂದ ಕುಣಿಗಲ್ ಮಾರ್ಗವಾಗಿ ಕೇವಲ 5 ಕಿ.ಮೀ ದೂರದಲ್ಲಿರುವ ಕಲ್ಯಾ ಗ್ರಾಮವೇ ಅಂದಿನ ಕಳಾವತಿ ಪಟ್ಟಣ.ಕ್ರಿ.ಶ. 1193 ರಲ್ಲಿ ಆಂಧ್ರಪ್ರದೇಶದ ರಾಜಧಾನಿಯಾದ ಓರಂಗಲ್ಲಿನ ಕಾಕತೀಯ ರಾಜನಾದ ಪ್ರತಾಪರುದ್ರನ ಆಸ್ಥಾನದಲ್ಲಿ ಕವಿಯನ್ನಾಗಿ ಪಾಲ್ಕುರಿಕೆ ಸೋಮನಾಥನು ತೆಲುಗು, ಸಂಸ್ಕೃತಿ ಹಾಗೂ ಕನ್ನಡದಲ್ಲಿ ಅನೇಕ ಕಾವ್ಯಗಳನ್ನು ರಚಿಸಿ ಇಲ್ಲಿನ ಕಲ್ಯಾ ಬೆಟ್ಟದಲ್ಲಿ ತಾರಕಾಸುರನ ಮಕ್ಕಳು ತಪಸ್ಸು ಮಾಡಿ ವರಪಡೆದ ಕಲ್ಯಾದ ಕಲ್ಲೇಶ್ವರ ದೇವಾಲಯದ ಮುಂದೆ ಸಮಾಧಿಯಾನ್ನು ಹೊಂದಿದ ಮಹಾದೈವ ಪುರುಷ.
ವೀರಶೈವ ಧರ್ಮಕ್ಕೆ ಮಾರುಹೋದ ಕವಿ: ಬ್ರಾಹ್ಮಣನಾಗಿದ ಪಾಲ್ಕುರಿಕೆ ಸೋಮನಾಥರು ವೀರಶೈವರ ಆರಾಧ್ಯ ದೈವ ಬಸವಣ್ಣನ ಧರ್ಮಕ್ಕೆ ಮಾರು ಹೋಗಿ ವೀರಶೈವ ದೀಕ್ಷೆಯನ್ನು ಪಡೆದು ಉದಯಕಾಲ, ಪ್ರಾಥಃಕಾಲ, ಸಂಗಮಕಾಲ, ಮಧ್ಯಾಹ್ನ ಕಾಲ, ಪ್ರದೋಷ ಕಾಲ, ಏಕಾಂತ ಕಾಲ ಹೀಗೆ ಸದಾ ಶಿವಪೂಜೆ, ಶಿವಧ್ಯಾನ ಮಾಡುತ್ತಿದ ದೈವಸಂಭೂತ ಕನ್ನಡದಲ್ಲಿ ಚನ್ನಬಸವ ರಗಡೆ, ಶಿವಗಣ ಸಹಸ್ರ ನಾಮಾವಳಿ ಮುಂತಾದ 30 ಕೃತಿಗಳನ್ನು ಬರೆಯುವ ಮೂಲಕ ವೀರಶೈವ ಕವಿಯಾಗಿ ಪ್ರಸಿದ್ಧಿ ಹೊಂದಿದವರು.
ಕಳಾವತಿ ಪಟ್ಟಣದಲ್ಲಿ 64 ಆಚಾರಗಳನ್ನು ತಪ್ಪದೆ ನಡೆದುಕೊಂಡು ಹೋಗುತ್ತಿರುವ ಚನ್ನಮ್ಮ ಎಂಬ ಶಿವಶರಣೆಯ ಮಾಹಿತಿ ತಿಳಿದ ಪಾಲ್ಕುರಿಕೆ ಸೋಮನಾಥರು ತಮ್ಮ ಕುಟುಂಬ ಸದಸ್ಯರು ಹಾಗೂ ಶಿಷ್ಯರೊಡನೆ ಕಳಾವತಿ ಪಟ್ಟಣಕ್ಕೆ ಬಂದು ಸೇರುತ್ತಾರೆ.
ಇಲ್ಲಿನ ಬೆಟ್ಟ-ಗುಡ್ಡ, ಮರ-ಗಿಡ, ಕೆರೆ-ಕಟ್ಟೆಯ ಪ್ರಶಾಂತವಾದ ವಾತಾವರಣ ಕವಿಯ ಮನಸನ್ನು ಕಂಗೊಳಿಸಿ, ತಪಸ್ಸು ಮಾಡಲು, ಕವಿತೆ ಬರೆಯಲು ಯೋಗ್ಯ ತಾಣ ಎನಿಸಿದ ಮಹಾಕವಿಗೆ ಪಾದ ಪೂಜೆಯನ್ನು ಮಾಡುವ ಮೂಲಕ ತಮ್ಮ ಸ್ವಕ್ಷೇತ್ರದಲ್ಲಿರುವ ಇಷ್ಟಲಿಂಗದಲ್ಲಿ ಸರ್ವಶೀಲ ಶರಣೆ ಚನ್ನಮ್ಮನವರು ಮಹಾಕವಿಯನ್ನು ಸಂತೃಪ್ತಿ ಯಿಂದ ಆಹ್ವಾನಿಸುತ್ತಾರೆ. ಆಕೆಯ ಸರಳ, ಸೌಮ್ಯ, ಆಚಾರಕ್ಕೆ ಸೋತ ಮಹಾಕವಿಯು ಒಂದು ತಿಂಗಳ ಶಿವಪೂಜೆಯ ಆತಿಥ್ಯವನ್ನು ಸ್ವೀಕರಿಸಲು ಒಪ್ಪಿಗೆ ಸೂಚಿಸಿದ ಮಹಾಕವಿಗೆ ಕಣ್ವ ಮಹರ್ಷಿಗಳು ತಪ್ಪಸ್ಸು ಮಾಡಿತ್ತಿದ್ದ ಸ್ಥಳವಾದ ತಾಪಸಗವಿ, ತಾರಕಾಚಲ ಎಂದು ಕರೆಯಲ್ಪಡುತ್ತಿದ ಕಣ್ವಾ ನದಿಯ ಜನ್ಮಸ್ಥಳ, ಕಲ್ಲೇಶ್ವರ ದೇವಾಲಯವನ್ನು ಸರ್ವಶೀಲ ಚನ್ನಮ್ಮ ಪಾಲ್ಕುರಿಕೆ ಸೋಮನಾಥರಿಗೆ ಪರಿಚಯಿಸಿದರು. ಕಲ್ಲೇಶ್ವರ ದೇವಾಲಯದ ಮುಂದೆ ಕಂಬಳಕಾಯಿ ಅಜ್ಜಿಯ ವಿಗ್ರಹವನ್ನು ಕಂಡ ಪಾಲ್ಕುರಿ ಸೋಮನಾಥರ ಮನಸು ಪ್ರೇರೇಪಿಸಿತು.
ಕುಂಬಳಕಾಯಿ ಅಜ್ಜಿ ಕಥೆ: ಊರಿನ ಹಬ್ಬ ಆಚರಿಸಲು ಕುಂಬಳ ಕಾಯಿಯ ಬಲಿ ಕೊಡಬೇಕಾದ ಅವಶ್ಯಕತೆ ಇದ್ದು ಆ ಊರಿನ ಮಠದ ಸ್ವಾಮಿ ಹಾಗೂ ಊರಿನ ರಾಜನಿಗೆ ಬೇಕಾಗಿದ್ದ ಕುಂಬಲಕಾಯಿಯನ್ನು ಅಜ್ಜಿಯೊಬ್ಬಳ ಹೊತ್ತುಕೊಂಡು ಹೋಗುತ್ತಿದ ಒಂದೇ ಒಂದು ಕುಂಬಳಕಾಯಿಯನ್ನು ನೋಡಿದ ಎರಡು ಕಡೆಯವರಿಗೂ ಸಂತೋಷ ಪಡುತ್ತಾರೆ. ವ್ಯಾಪರ ಮಾಡಲು ಉತ್ಸಹ ತೊರಿದ ಎರಡು ಕಡೆಯವರಿಗೂ ವ್ಯಾಪರದ ಬಿಸಿ ಏರುತ್ತದೆ. ಸ್ವಾಮಿಗಳ ಶಿಷ್ಯರು ಹೆಚ್ಚಿನ ಹಣಕ್ಕೆ ಕಂಬಳಕಾಯಿ ವ್ಯಾಪರ ಮಾಡಿ ಮಠಕ್ಕೆ ತೆಗೆದುಕೊಂಡು ಹೋಗುತ್ತಾರೆ. ವಿಷಯ ತಿಳಿದ ರಾಜನು ಆ ಮಠವನ್ನು ಧ್ವಂಸ ಮಾಡುವಂತೆ ಆಜ್ಙಾಪಿಸುತ್ತಾನೆ. ಸೈನ್ಯ ಮಠದ ಕಡೆಗೆ ನುಗ್ಗುತ್ತಿದನ್ನು ಕಂಡ ಮಠದ ಸ್ವಾಮಿಗಳಿಗೆ ಕೋಪ ಬಂದು ಕೊಡಲೇ ಅವರು ತಮ್ಮ ಕಮಂಡಲದಿಂದ ನೀರು ತೆಗೆದುಕೊಂಡು "ಈ ನಿನ್ನ ರಾಜ್ಯವೆಲ್ಲಾ ನಾಶವಾಗಲೀ" ಎಂದು ಹೇಳಿ ಶಾಪವಿಟ್ಟ ಸ್ವಾಮಿಗಳು ಆ ಕುಂಬಳಕಾಯಿ ಅಜ್ಜಿಗೆ "ನೀನು ಕಲ್ಲಾಗು, ನೀನ ಪೂಜೆ ಸಲ್ಲದಿರಲಿ" ಎಂದು ಹೇಳಿ ಶಾಪವನ್ನು ಕೊಟ್ಟರು. ಆ ಶಾಪಕ್ಕೆ ಗೂರಿಯಾದ ಅಜ್ಜಿಯೆ ಕಲ್ಲೇಶ್ವರ ದೇವಾಲಯದ ಬುಡದಲ್ಲಿ ಕಲ್ಲಾಗಿ ಪೂಜೆಯಿಲ್ಲದೆ ಮಳೆ-ಗಾಳಿಗೆ ಸಿಲುಕಿ ನಿಂತಿದ್ದಾಳೆ ಎಂದು ಚನ್ನಮ್ಮ ಮಹಾಕವಿಗೆ ವಿವರಿಸುತ್ತಾರೆ.
ಸೋಮನಾಥರು ಆಂಧ್ರಕ್ಕೆ ತೆರಳಲು ಎತ್ತಿನ ಗಾಡಿಯನ್ನು ಸಿದ್ಧಮಾಡಿಕೊಂಡು ತಮ್ಮ ಶಿಷ್ಯರು, ಮಗ ಸೇರಿದಂತೆ ಎಲ್ಲರು ಗಾಡಿಯಲ್ಲಿ ಕುಳಿತುಕೊಂಡು ಹೊರಡವರು ಕೊಡಲೇ ಕಲ್ಲೇಶ್ವರ ದೇವಾಲಯದಿಂದ ಒಂದು ಆಶರೀರವಾಣಿ `ಸೋಮನಾಥ ನಿನಗಿನ್ನೂ ಸಂಸಾರದ ವ್ಯಾಮೋಹವೇ? ನೀನು ಕೈಲಾಸವನ್ನು ಸೇರುವ ದಿನ ದೂರವಿಲ್ಲ ನಿನ್ನ ಸಮಾಧಿಯೂ ಈ ಕಲ್ಲೇಶ್ವರ ದೇವಾಲಯದ ಮುಂದೆಯೇ ಆಗಬೇಕು ಇದಕ್ಕಾಗಿಯೇ ನೀನು ಇಲ್ಲಿಗೆ ಬಂದಿರುವೆ ಎಂದು ಹೇಳಿದ ಕೊಡಲೇ ಎತ್ತಿನಗಾಡಿಯಿಂದ ಕೆಳಗೆ ಇಳಿದು ಚನ್ನಮ್ಮನವರಿಗೆ ಸಾಷ್ಟಾಂಗವೆರಗಿದರು.
ಕಲ್ಲೇಶ್ವರ ದೇವಾಲಯದ ಮುಂದೆ ಸೋಮನಾಥ ಶರಣರಿಗೆ ಸಮಾಧಿ ಸಿದ್ಧವಾಯಿತು. ಶರಣೆ ಚನ್ನಮ್ಮನವರ ನೇತೃತ್ವದಲ್ಲಿ ಸಮಾಧಿ ಕಾರ್ಯ ನೆರವೇರಿತು. ಸೋಮನಾಥರ ಮಗ ಚತುರ್ಮುಖ ಬಸವೇಶ್ವರನು ಅಲ್ಲಿಯೇ ಉಳಿದುಕೊಂಡು ವೀರಶೈವ ಧರ್ಮಪ್ರಚಾರ ಮಾಡುತ್ತಾ ತಮ್ಮ ಸಂಪೂರ್ಣ ಜೀವನವನ್ನು ಕಲ್ಲೇಶ್ವರ ಪುಣ್ಯಕ್ಷೇತ್ರದಲ್ಲಿ ಕಳೆದು ಕೆಲವು ದಿನಗಳು ಗವಿಯಲ್ಲಿ ಅನುಷ್ಠಾನಗೈದು ಸರ್ವಶೀಲೆ ಚನ್ನಮ್ಮನವರು ಶಿವೈಕ್ಯರಾಗಿ ಅವರ ಸಮಾಧಿಯ ಮಂದೆಯೆ ಚತುರ್ಮುಖ ಬಸವಾರಾಧ್ಯರು ಸಮಾಧಿ ಹೊಂದಿದೆ.
ಜೈನ- ವೈಷ್ಣವ ಕಲಹ: ಕ್ರಿ.ಶ.1968ರಲ್ಲಿ ಜೈನ ಮತ್ತು ವೈಷ್ಣವ ನಡುವೆ ಕಲಹ ಉಂಟಾಗಿ ರಕ್ತಪಾತ ಘರ್ಷಣೆಯು ನಡೆದಿರುತ್ತದೆ ಈ ದೂರನ್ನು ವಿಜಯನಗರದ ಮೊದಲನೆಯ ಬುಕ್ಕರಾಯರಿಗೆ ತಿಳಿಸಿದಾಗ ಜೈನರು ಹಾಗೂ ವೈಷ್ಣವರ ಧಾರ್ಮಿಕ ನಾಯಕರನ್ನು ವಿಜಯನಗರಕ್ಕೆ ಕರೆಸಿ ಧರ್ಮದ ಹೆಸರಿನಲ್ಲಿ ಕಿತ್ತಾಡಬೇಡಿ ಎಂದು ಇಬ್ಬರೂ ನಾಯಕರುಗಳ ಕೈ ಕುಲುಕಿಸಿ ಬಾಗಿಲ ಹಣ ದಂಡ ಕೊಡುವಂತೆ ಒಂದು ಶಾಸನವನ್ನು ಕೂಡ ಬರೆಸಿ ಇದನ್ನು ಜಾರಿ ಮಾಡಲು ವಿಜಯನಗರದಿಂದ ವಿಠಲನಾಥ ಎಂಬ ಅಧಿಕಾರಿಯನ್ನು ನೇಮಕ ಮಾಡಲಾಗುತ್ತದೆ ವಿಠಲನಾಥ ಕಲ್ಯ ಕೆರೆಯನ್ನು ಕಟ್ಟಿಸಿದ್ದಾರೆ ಎಂಬ ಉಲ್ಲೇಖ ಕಲ್ಯ ಬೆಟ್ಟದ ಬಂಡೆಯ ಮೇಲೆ ಇದೇ ಹೀಗೆ ಈ ಗ್ರಾಮಕ್ಕೆ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು ಬೌದ್ಧರು, ಜೈನರು, ವೀರಶೈವರು ವಾಸವಾಗುವ ಮೂಲಕ ಕಲ್ಯಾ ಗ್ರಾಮ ಸಾಕಷ್ಟು ಇತಿಹಾಸ ಹೊಂದಿದ ಗ್ರಾಮ ಎಂಬುದೆ ಹೆಮ್ಮೆಯ ವಿಚಾರವಾಗಿದೆ.
ಕಲ್ಯಾ ಗ್ರಾಮ ದಕ್ಷಿಣ ಭಾರತದ ಸಾಂಸ್ಕೃತಿಕ ಎನ್ನುವುದರಲ್ಲಿ ಅನುಮಾನವಿಲ್ಲ ಸಾಕಷ್ಟು ಶಾಸನಗಳ ಮೂಲಕ ಕಲ್ಯಾ ಗ್ರಾಮದ ಬಗ್ಗೆ ಇತಿಹಾಸದ ಪರಿಚಯವಾಗಿದ್ದು ಒಂದೇ ಗ್ರಾಮದಲ್ಲಿ 12 ವಿಶೇಷ ಶಾಸನಗಳು ಪತ್ತೆಯಾಗಿದ್ದು ಸಂಶೋಧನೆ ಮೂಲಕ ಕಲ್ಯಾ ಐತಿಹಾಸಿಕ ಗ್ರಾಮ ಎನ್ನುವುದರಲ್ಲಿ ಅನುಮಾನವಿಲ್ಲ ಕಲ್ಯಾ ಗ್ರಾಮದಲ್ಲಿ ಸಿಕ್ಕಿರುವ ಶಾಸನಗಳು ಮುಂದಿನ ಪೀಳಿಗೆ ಉಳಿಯೋ ರೀತಿ ಸಂರಕ್ಷಣೆ ಮಾಡಬೇಕು.-ಡಾ.ಮುನಿರಾಜಪ್ಪ ಇತಿಹಾಸ ಸಂಶೋಧಕರು ನಿವೃತ್ತ ಪ್ರಾಧ್ಯಾಪಕರು ಮಾಗಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.