ಮಾಗಡಿ: ಸಾಹಿತಿ ಎಚ್.ಎಸ್.ವೆಂಕಟೇಶ ಮೂರ್ತಿ ಹಾಗೂ ಪಂಚತಾರೆ ನಟಿ ಬಿ.ಸರೋಜಾದೇವಿ ಅವರಿಗೆ ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗೀತಾ ನಮನ ನಡೆಯಿತು.

ಪಟ್ಟಣದ ಸಮೃದ್ಧಿ ಗ್ರಾಮೀಣ ಸಂಸ್ಥೆ ಕಚೇರಿಯಲ್ಲಿ ಗೀತನ ನಮನ ಸಲ್ಲಿಸಿ ಮಾತನಾಡಿದ ತಾಲ್ಲೂಕು ಕಸಾಪ ಅಧ್ಯಕ್ಷ ತಿ.ನಾ.ಪದ್ಮನಾಭ, ನವೋದಯ ಸಾಹಿತ್ಯ ಎಚ್.ಎಸ್ ವೆಂಕಟೇಶಮೂರ್ತಿ ಅವರ ಕೊಡುಗೆ ಅಪಾರ. ಎಂಜಿನಿಯರ್ ಆಗಿದ್ದರೂ ಕೂಡ ಸಾಹಿತ್ಯ ಲೋಕದಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಇಂತಹ ಸಾಹಿತಿಯನ್ನು ಕಳೆದುಕೊಂಡ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ. ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ. ಚಲನಚಿತ್ರಕ್ಕೆ ಗೀತೆ ರಚನೆ ಮಾಡುವ ಮೂಲಕ ಎಲ್ಲರ ಮನ ಸೆಳೆದಿದ್ದರು ಎಂದರು.

ಗಾಯಕ ಕನ್ನಡ ಕುಮಾರ್ ಮಾತನಾಡಿ, ಕುವೆಂಪು ದ.ರಾ ಬೇಂದ್ರೆ ನಂತರ ಸಾಹಿತ್ಯ ಲೋಕದಲ್ಲಿ ತನ್ನದೇ ಹೆಸರನ್ನು ಭಾವಗೀತೆ ಮೂಲಕ ಹೊಸ ಯೋಗ ಆರಂಭಿಸಿದ್ದು ಎಚ್ಎಸ್ವಿ ಎಂದು ಅಭಿಪ್ರಾಯಪಟ್ಟರು.

ಪಂಚಭಾಷೆ ನಟಿಯಾಗಿ 60 ರಿಂದ 80 ದಶಕದಲ್ಲಿ 30 ದಶಕಗಳ ಕಾಲ ನಾಯಕಿ ನಟಿಯಾಗಿ ಹೆಸರು ಗಳಿಸಿದ ಏಕೈಕ ನಟಿ ಸರೋಜದೇವಿ. ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಯಲ್ಲಿ ಛಾಪು ಮೂಡಿಸಿದ ನಟಿ. ಮೇರು ನಟರಾದ ರಾಜ್ ಕುಮಾರ್, ಎಂಜಿಆರ್, ಶಿವಾಜಿ ಗಣೇಶ್, ಎನ್ಟಿಆರ್, ನಾಗೇಶ್ವರರಾವ್ ಅವರೊಂದಿಗೆ ನಟಿಸಿ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳಿಗೆ ಭಾಜನರಾದ ಮೇರು ಕಲಾವಿದೆ ಎಂದರು.

ಸಮೃದ್ಧಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ರಾಮಚಂದ್ರು ಮಾತನಾಡಿದರು.

ಗಾಯಕ ಮುರಳಿ ಹಾಗೂ ಕನ್ನಡ ಕುಮಾರ್ ಅವರು ಎಚ್.ಎಸ್.ವೆಂಕಟೇಶಮೂರ್ತಿ ಹಾಗೂ ಬಿ.ಸರೋಜಾ ದೇವಿ ಅವರು ನಟಿಸಿದ ಕನ್ನಡ ಚಿತ್ರಗೀತೆಗಳನ್ನು ಹಾಡುವ ಮೂಲಕ ಗೀತನ ಮನ ಸಲ್ಲಿಸಿದರು.

ತಿಪ್ಪಸಂದ್ರ ಕೆಪಿಎಸ್ ಶಾಲಾ ಮುಖ್ಯ ಶಿಕ್ಷಕ ರಾಜಣ್ಣ, ಶಿಕ್ಷಕ ಮುನಿಯಪ್ಪ, ಡಿ.ಗಂಗಾಧರ್, ನಾರಾಯಣ್, ತಿರುಮಲೆ ಶ್ರೀನಿವಾಸ್, ಚಕ್ರಬಾವಿ ಸುಧೀಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.