ಚನ್ನಪಟ್ಟಣ: ನಗರದಲ್ಲಿ 18 ವರ್ಷಗಳಿಂದ ಕುಂಟುತ್ತಾ ಸಾಗಿರುವ ನಗರ ಒಳಚರಂಡಿ ಯೋಜನೆ ಕಾಮಗಾರಿಗೆ(ಯುಜಿಡಿ) ಚುರುಕು ಮುಟ್ಟಿಸಲು ಸರ್ಕಾರ ಹಾಗೂ ನಗರಸಭೆ ಆಡಳಿತ ಮುಂದಾಗಿದೆ.

₹13.11 ಕೋಟಿ ಅಂದಾಜು ವೆಚ್ಚದಲ್ಲಿ 2007ರಲ್ಲಿ ನಗರದ ಯುಜಿಡಿ ಕಾಮಗಾರಿಗೆ ಮೊದಲು ಅಂಕಿತ ಹಾಕಲಾಗಿತ್ತು. ಆದರೆ ಅದು ಅಧಿಕೃತವಾಗಿ ಕಾರ್ಯಗತವಾಗಿದ್ದು 2015ರಲ್ಲಿ. ಆಗ ಕಾಮಗಾರಿ ಆರಂಭವಾದರೂ ದೊಡ್ಡಮಟ್ಟದಲ್ಲಿ ಬೆಳೆಯುತ್ತಿದ್ದ ಚನ್ನಪಟ್ಟಣಕ್ಕೆ ಅನುದಾನ ಸಾಲದೆ ಕಾಮಗಾರಿ ನನೆಗುದಿಗೆ ಬಿದ್ದಿತ್ತು.

ನಂತರ 2018ರಲ್ಲಿ ಮತ್ತೆ ಸುಮಾರು ₹94 ಕೋಟಿ ವೆಚ್ಚದಲ್ಲಿ ಎರಡನೇ ಹಂತದ ಒಳಚರಂಡಿ ಕಾಮಗಾರಿಗೆ ಅನುಮೋದನೆ ದೊರೆಯಿತು. ಆದರೂ ವೆಟ್ವೆಲ್ಗೆ ಜಾಗ ಗುರುತಿಸಲು ನಗರಸಭೆ ವಿಫಲವಾದದ್ದು, ಸಲಕರಣೆಗಳ ಬೆಲೆ ಏರಿಕೆ, ಜನರ ವಿರೋಧ ಸೇರಿದಂತೆ ಹಲವು ಕಾರಣಗಳಿಂದ ಮತ್ತೆ ನನೆಗುದಿಗೆ ಬಿದ್ದಿತ್ತು.

ಈಗ ಮತ್ತೆ ಎರಡನೇ ಹಂತದ ಯುಜಿಡಿ ಕಾಮಗಾರಿಯ ಮುಂದುವರೆದ ಭಾಗವಾಗಿ ರೂ. 128 ಕೋಟಿ ಅನುದಾನ ನೀಡಲು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಈಗ ಮತ್ತೆ ಯುಜಿಡಿ ಕಾಮಗಾರಿ ಆರಂಭವಾಗುವ ಲಕ್ಷಣಗಳು ಕಾಣುತ್ತಿವೆ. ಇದರ ಜೊತೆಗೆ ಇಲ್ಲಿನ ನಗರಸಭೆ ಆಡಳಿತವು ನಗರದ ಆಸುಪಾಸಿನಲ್ಲಿ ಯುಜಿಡಿಗೆ ಬೇಕಾದ ಜಮೀನು ಖರೀದಿಸಲು ತಾಲ್ಲೂಕಿನ ಕೂಡ್ಲೂರು ಬಳಿ ನಗರಸಭಾ ಹೆಸರಿನಲ್ಲಿರುವ ಮೂರು ಎಕರೆ ಜಮೀನು ಮಾರಾಟ ಮಾಡಲು ಮುಂದಾಗಿದೆ. ಈ ಎಲ್ಲಾ ಕಾರಣದಿಂದ ನಗರದ ಯುಜಿಡಿ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಎಂಬ ಆಶಾಭಾವನೆ ಮೂಡಿದೆ.

ಶಾಸಕ ಸಿ.ಪಿ.ಯೋಗೇಶ್ವರ್ ಅವರು ಈಚೆಗೆ ನಗರದ ಕೆಲವೆಡೆ ಸಂಚರಿಸಿ ಯುಜಿಡಿ ಸಮಸ್ಯೆ ವೀಕ್ಷಣೆ ಮಾಡಿದ್ದರು. ನಗರವು ದೊಡ್ಡದಾಗಿ ಬೆಳೆಯುತ್ತಿರುವ ಕಾರಣ ಹಳೆಯ ಯುಜಿಡಿ ಯೋಜನೆಯ ನೀಲನಕ್ಷೆಯನ್ನು ಬದಲಿಸಿ ಹೊಸದಾಗಿ ಯೋಜನೆ ತಯಾರಿಸುವುದಾಗಿ ತಿಳಿಸಿದ್ದರು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ರೂ. 128 ಕೋಟಿ ವೆಚ್ಚದ ವಿವರವಾದ ಯೋಜನಾ ವರದಿಯನ್ನು ಸಲ್ಲಿಸಿದ್ದರು. ಇದೀಗ ಸರ್ಕಾರ ಈ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಸುಮಾರು ಹದಿನೆಂಟು ವರ್ಷಗಳಿಂದ ಆಮೆಗತಿಯಲ್ಲಿ ಸಾಗಿದ್ದ ಯುಜಿಡಿ ಕಾಮಗಾರಿಯಿಂದ ನಗರದಲ್ಲಿ ಅನೈರ್ಮಲ್ಯ ಪರಿಸ್ಥಿತಿ ಎದುರಾಗಿತ್ತು.

ನಗರದ ಕೊಳಚೆ ನೀರು ನಗರ ವ್ಯಾಪ್ತಿಯ ಕೆಲವು ಕೆರೆಗಳಿಗೆ ಹರಿದು ಕೆರೆಗಳು ಸಹ ಕಲುಷಿತವಾಗಿದ್ದವು. ಕಳೆದ ಕೆಲವು ತಿಂಗಳುಗಳ ಹಿಂದೆ ತಾಲ್ಲೂಕಿನ ಕೆರೆಗಳನ್ನು ವೀಕ್ಷಣೆ ಮಾಡಲು ಆಗಮಿಸಿದ್ದ ರಾಜ್ಯ ಉಪ ಲೋಕಾಯುಕ್ತ ಎಂ.ಕೆ.ಫಣೀಂದ್ರ ಅವರು ನಗರ ವ್ಯಾಪ್ತಿಯ ಶೆಟ್ಟಿಹಳ್ಳಿ ಕೆರೆ ವೀಕ್ಷಣೆ ಮಾಡಿ ನಗರದ ಅನೈರ್ಮಲ್ಯ ಪರಿಸರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

ಈಗ ಎರಡನೇ ಹಂತದ ಯುಜಿಡಿ ಕಾಮಗಾರಿಯ ಮುಂದುವರೆದ ಭಾಗವಾಗಿ ರೂ. 128 ಕೋಟಿ ಅನುದಾನ ನೀಡಲು ಸರ್ಕಾರದಿಂದ ಅನುಮೋದನೆ ದೊರೆತಿದೆ. ಈ ಹಣವನ್ನು ಸದ್ಬಳಕೆ ಮಾಡಿಕೊಂಡು ಯುಜಿಡಿಗೆ ಹೊಸರೂಪ ನೀಡುವುದು ಹಾಗೂ ಯುಜಿಡಿ ಕಾಮಗಾರಿಯನ್ನು ಶೀಘ್ರ ಮುಕ್ತಾಯ ಮಾಡುವುದು ಶಾಸಕರು ಹಾಗೂ ನಗರಸಭೆಯ ಜವಾಬ್ದಾರಿಯಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

'ನಗರ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ಅಪೂರ್ಣವಾಗಿರುವ ಯುಜಿಡಿ ಕಾಮಗಾರಿಗೆ ಮರುಜೀವ ಕೊಟ್ಟು ನಗರದ ನೈರ್ಮಲ್ಯ ಕಾಪಾಡುವ ದೃಷ್ಠಿಯಿಂದ ಸರ್ಕಾರಕ್ಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗ ಸರ್ಕಾರ ರೂ. 128 ಕೋಟಿ ಅನುದಾನ ನೀಡಲು ಆಡಳಿತಾತ್ಮಕ ಅನುಮೋದನೆ ನೀಡಿದೆ. ಶೀಘ್ರ ಕಾಮಗಾರಿ ಆರಂಭಿಸಲಾಗುವುದು'.
ಸಿ.ಪಿ. ಯೋಗೇಶ್ವರ್, ಶಾಸಕ, ಚನ್ನಪಟ್ಟಣ.

ಜಮೀನು ಮಾರಾಟಕ್ಕೆ ಮುಂದಾದ ನಗರಸಭೆ:
ನಗರದ ಯುಜಿಡಿ ಸಮಸ್ಯೆ ಬಗೆಹರಿಸುವ ಸಂಬಂಧ ಅಗತ್ಯವಿರುವ ಭೂ ಸ್ವಾಧೀನಕ್ಕೆ ಹೆಚ್ಚುವರಿ ಹಣವನ್ನು ಹೊಂದಿಸಲು ನಗರಸಭೆಯಿಂದ ಖರಿದೀಸಿರುವ ಸ್ವತ್ತನ್ನು ಮಾರಾಟ ಮಾಡಲು ನಗರಸಭಾ ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡರು. ನಗರಸಭಾ ಸಭಾಂಗಣದಲ್ಲಿ ಸೋಮವಾರ ಅಧ್ಯಕ್ಷ ವಾಸಿಲ್ ಆಲಿಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸದಸ್ಯರ ವಿಶೇಷ ಸಭೆಯಲ್ಲಿ ಯುಜಿಡಿ ಯೋಜನೆ ಜಾರಿ ಸಂಬಂಧ ಅಗತ್ಯವಿರುವ ಭೂ ಸ್ವಾಧೀನಕ್ಕೆ ಅವಶ್ಯವಿರುವ ರೂ. 6 ಕೋಟಿ ಹಣವನ್ನು ಸಂಗ್ರಹಿಸುವ ಕುರಿತು ಚರ್ಚಿಸಲಾಯಿತು. ನಗರಸಭೆಯಲ್ಲಿ ಅಷ್ಟು ಹಣ ಇಲ್ಲದಿರುವ ಕಾರಣ, ಹಾಗೂ ಇತರೆ ಮೂಲಗಳಿಂದಲೂ ಹಣ ಸಂಗ್ರಹಿಸಲು ಸಾಧ್ಯವಾಗದ ಕಾರಣ ತಾಲ್ಲೂಕಿನ ಕೂಡ್ಲೂರು ಬಳಿ ಇರುವ ನಗರಸಭೆಯ ಮೂರು ಎಕರೆ ಜಾಗವನ್ನು ಮಾರಾಟ ಮಾಡಿ ಬರುವ ಹಣವನ್ನು ನಗರದ ಆಸುಪಾಸಿನಲ್ಲಿ ಯುಜಿಡಿ ಕಾಮಗಾರಿಗೆ ಅಗತ್ಯವಿರುವ ಭೂಸ್ವಾಧೀನಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಲೋಕೇಶ್, ಪೌರಾಯುಕ್ತ ಮಹೇಂದ್ರ, ನಗರಸಭಾ ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.