ರಾಮನಗರ: ಬಿಡದಿಯಲ್ಲಿರುವ ವಂಡರ್ ಲಾ ಮನೋರಂಜನಾ ಪಾರ್ಕ್ ವಾರದ ಏಳು ದಿನವೂ ಗ್ರಾಹಕರಿಗೆ ತೆರೆದಿರಲಿದೆ.
ಸರ್ಕಾರದ ನಿರ್ದೇಶನದ ಮೇರೆಗೆ ಕಳೆದ ಒಂದು ತಿಂಗಳಿನಿಂದ ಸುರಕ್ಷಿತ ಕೋವಿಡ್ ಮಾರ್ಗಸೂಚಿಯೊಂದಿಗೆ ಪಾರ್ಕ್ ಅನ್ನು ನಡೆಸಲಾಗುತ್ತಿದೆ. ಮೊದಲು ಗುರುವಾರದಿಂದ ಭಾನುವಾರದವರೆಗೂ ಮಾತ್ರ ತೆರೆಯಲಾಗುತ್ತಿತ್ತು. ಗ್ರಾಹಕರ ಬೇಡಿಕೆ ಹಿನ್ನೆಲೆಯಲ್ಲಿ ವಾರದ ಎಲ್ಲ ದಿನವೂ ಬೆಳಿಗ್ಗೆ 11 ರಿಂದ ತೆರೆಯಲಾಗುತ್ತದೆ. ಕೋವಿಡ್ ಹಿನ್ನೆಲೆಯಲ್ಲಿ ನಮ್ಮ ಎಲ್ಲಾ ಸಿಬ್ಬಂದಿಗೂ ಲಸಿಕೆ ಹಾಕಿಸಲಾಗಿದ್ದು, ಇಡೀ ಪಾರ್ಕ್ ಅನ್ನು ಪ್ರತಿ ದಿನ ಸ್ಟಾನಿಟೈಸ್ ಮಾಡಲಾಗುತ್ತಿದೆ ಎಂದು ವಂಡರ್‌ಲಾ ಪ್ರಕಟಣೆ ತಿಳಿಸಿದೆ.
ಮಾಹಿತಿಗೆ: 080-37230333, 080-35073966.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.