ಬುಧವಾರ, ಆಗಸ್ಟ್ 10, 2022
24 °C

ಕನ್ನಡದಲ್ಲಿ ವಿಚಾರಣೆಗೆ ಕಾರ್ಮಿಕರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಡದಿ: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ಕಾನೂನು ಬಾಹಿರವಾಗಿ ಬೀಗ ಮುದ್ರೆಯನ್ನು ಘೋಷಿಸಿ 66 ಕಾರ್ಮಿಕರ ಅಮಾನತು ಮತ್ತು 8 ಕಾರ್ಮಿಕರನ್ನು ವಜಾ ಮಾಡಿದೆ. ಅಮಾನತಾದವರ ವಿಚಾರಣೆ ಕನ್ನಡದಲ್ಲಿ ನಡೆಸಬೇಕು ಎಂದು ಕಾರ್ಮಿಕರು ಒತ್ತಾಯಿಸಿದ್ದಾರೆ.

‘ಈಗ 66 ಕಾರ್ಮಿಕರ ಆಂತರಿಕ ವಿಚಾರಣೆ ಪ್ರಾರಂಭವಾಗಿದೆ. ವಿಚಾರಣೆಯಲ್ಲಿ ದಾಖಲೆಗಳನ್ನು ಕನ್ನಡದಲ್ಲಿ ನೀಡಬೇಕು ಹಾಗೂ ವಿಚಾರಣಾ ಪ್ರಕ್ರಿಯೆಯನ್ನು ಕನ್ನಡದಲ್ಲಿ ದಾಖಲಿಸಬೇಕೆಂದು ಕೇಳಿದರೆ, ಕನ್ನಡದಲ್ಲಿ ವಿಚಾರಣೆ ಸಾಧ್ಯವಿಲ್ಲ ಎಂದು ಆಡಳಿತ ಮಂಡಳಿ ಮತ್ತು ವಿಚಾರಣಾಧಿಕಾರಿಗಳು ತಿಳಿಸಿದ್ದಾರೆ. ಇಂಗ್ಲಿಷ್‌ನಲ್ಲಿ ವಿಚಾರಣೆ ನಡೆದರೆ ಸಾಮಾನ್ಯ ಕಾರ್ಮಿಕರಿಗೆ
ಕಾನೂನಾತ್ಮಕ ಪದಗಳು ಅರ್ಥವಾಗುವುದಿಲ್ಲ ಎಂದು ಎಷ್ಟೇ ಕೇಳಿಕೊಂಡರು ಕನ್ನಡದಲ್ಲಿ ನಡಾವಳಿ ನೀಡಲು ನಿರಾಕರಿಸುತ್ತಿದ್ದಾರೆ’ ಎಂದು ಕಾರ್ಮಿಕರು ದೂರಿದ್ದಾರೆ.

ಸಂಸ್ಥೆಯ ಈ ಧೋರಣೆಯನ್ನು ಖಂಡಿಸಿ ಅಮಾನತ್ತಾದ ಕಾರ್ಮಿಕರು ಬಿಡದಿ ಕೈಗಾರಿಕಾ ಪ್ರದೇಶದ ಅಸೋಸಿಯೇಷನ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ವಿಚಾರಣೆಯನ್ನು ಕನ್ನಡದಲ್ಲಿ ನಡೆಸಬೇಕೆಂದು ಮತ್ತು ನಡಾವಳಿಯನ್ನು ಸರಳ
ಕನ್ನಡದಲ್ಲಿ ನೀಡಬೇಕೆಂದು ಒತ್ತಾಯಿಸಿದರು.

‘ಇದಕ್ಕೆ ತಪ್ಪಿದ್ದಲ್ಲಿ ಟಿಕೆಎಂ ಸಂಸ್ಥೆಯ ಕನ್ನಡ ವಿರೋಧಿ ನೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಲಾಗಿದೆ’ ಎಂದು ಕಾರ್ಮಿಕ ಸಂಘಟನೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು