ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಶಿವಮೊಗ್ಗ ಜಿಲ್ಲೆ ಸ್ವಯಂ ಸ್ತಬ್ಧ

ಜನತಾ ಕರ್ಫೂ ಪಾಲನೆಗೆ ನಾಗರಿಕರ ಒಕ್ಕೊರಲ ಸಾಥ್
Last Updated 21 ಮಾರ್ಚ್ 2020, 13:36 IST
ಅಕ್ಷರ ಗಾತ್ರ

ಶಿವಮೊಗ್ಗ: ತುರ್ತು ಸೇವೆಗಳ ಹೊರತು ಭಾನುವಾರ ಜಿಲ್ಲೆಯಎಲ್ಲೆಡೆ ಬಹುತೇಕ ಸೇವೆಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ.

ಭಾರತದಲ್ಲೂ ಹರಡುತ್ತಿರುವ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಜನತಾ ಕರ್ಫೂಪಾಲಿಸುವಂತೆಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಗೆ ಜಿಲ್ಲೆಯಲ್ಲೂ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಸಾಮಾನ್ಯ ನಾಗರಿಕರೂ ಸೇರಿದಂತೆ ವಿವಿಧ ಸಂಘಟನೆಗಳು, ವ್ಯಾಪಾರಿಗಳು, ಬೀದಿಬದಿ ಮಾರಾಟಗಾರರು, ಉದ್ಯಮಿಗಳು ಮಾರ್ಚ್ 22ರಂದು ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಮನೆಯಿಂದ ಹೊರಬರದಿರಲು ನಿರ್ಧರಿಸಿದ್ದಾರೆ.

ಹೋಟೆಲ್‌,ಸಿನೆಮಾ ಮಂದಿರಗಳುಇರುವುದಿಲ್ಲ. ರೈಲು, ಬಸ್‌, ಆಟೋ, ಟ್ಯಾಕ್ಸಿ ಸಂಚಾರ ಕಾಣಲು ಸಾಧ್ಯವಿಲ್ಲ. ಪೆಟ್ರೋಲ್ ಬಂಕ್‌ಗಳುತೆರೆದಿರುವುದಿಲ್ಲ.ಹಾಲು, ಔಷಧ ಅಂಗಡಿಗಳು ನಿಗದಿತ ಸಮಯದಲ್ಲಷ್ಟೇ ತೆರೆದಿರುತ್ತವೆ.

ಜಿಲ್ಲೆಯಲ್ಲಿ ಈಗಾಗಲೇ ನಿಷೇಧಾಜ್ಞೆಜಾರಿಯಲ್ಲಿದೆ. ಯಾವುದೇ ಪ್ರತಿಭಟನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಗುಂಪುಸೇರುವ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲಾಗಿದೆ.ಮಸೀದಿ, ಚರ್ಚ್, ದೇವಾಲಯಗಳಲ್ಲೂ ಮುಂಜಾಗ್ರತಾಕ್ರಮ ಅನುಸರಿಸುವಂತೆ ಕೋರಲಾಗಿದೆ.

ಠಾಣೆಗಳಲ್ಲೂ ಮುನ್ನೆಚ್ಚರಿಕೆ

ಎಂತಹ ಪರಿಸ್ಥಿತಿ ಇದ್ದರೂ ಪೊಲೀಸರು ಕಾರ್ಯನಿರ್ವಹಿಸಲೇ ಬೇಕು. ಅದಕ್ಕಾಗಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲೂ ಮುನ್ನೆಚ್ಚರಿಕೆ ಕ್ರಮ ಅನುಸರಿಸಲಾಗಿದೆ. ಸುರಕ್ಷಿತೆಗೆ ಒತ್ತು ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಪೊಲೀಸರಿಗೆ ಸೂಚಿಸಿದ್ದಾರೆ. ಅಗತ್ಯ ಮಾಸ್ಕ್‌, ಸ್ವಚ್ಛತಾ ಪರಿಕರಗಳನ್ನು ನೀಡಲಾಗಿದೆ.

ಬಿಜೆಪಿಯಿಂದ ಜಾಗೃತಿ ಅಭಿಯಾನ

ಶಿವಮೊಗ್ಗ: ಬಿಜೆಪಿ ಕಾರ್ಯಕರ್ತರು ಶನಿವಾರಶಿವಪ್ಪನಾಯಕ ವೃತ್ತದಲ್ಲಿ ಕೊರೊನಾ ವಿರುದ್ಧ ಜನಜಾಗೃತಿ ಮೂಡಿಸಿದರು.

ವ್ಯಾಪಾರಸ್ಥರು, ಅಂಗಡಿಗಳು, ಹೂವಿನ ವ್ಯಾಪಾರಿಗಳು, ರಸ್ತೆಯಲ್ಲಿ ಸಂಚರಿಸುವ ವ್ಯಕ್ತಿಗಳಿಗೆ ಕೊರೊನಾ ವೈರಸ್ಹರಡದಂತೆ ತಡೆಯುವ ಮಾಹಿತಿ ಕರಪತ್ರ ಹಂಚಿದರು. ಭಾನುವಾರದ ಜನತಾ ಕರ್ಫೂ ಪಾಲಿಸುವಂತೆ ಕೋರಿದರು.

ಮೇಯರ್ ಸುವರ್ಣಾಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ಪಾಲಿಕೆ ಸದಸ್ಯೆ ಸುನೀತಾ ಅಣ್ಣಪ್ಪ, ಆಡಳಿತ ಪಕ್ಷದ ನಾಯಕ ಎಸ್.ಎನ್.ಚನ್ನಬಸಪ್ಪ, ಕುವೆಂಪು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಬಳ್ಳಕೆರೆ ಸಂತೋಷ್, ಎಂ.ಜಿ.ಬಾಲು ಜಾಗೃತಿ ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT