ಶನಿವಾರ, ಜನವರಿ 18, 2020
25 °C

29ಕ್ಕೆ ಮೇಯರ್, ಉಪ ಮೇಯರ್ ಚುನಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆ ಜ.29ರಂದು ನಡೆಯಲಿದೆ.

ಅಂದು 11.30ರಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗುವುದು. ಮೊದಲು ಮೇಯರ್ ಆಯ್ಕೆಯ ನಂತರ, ಉಪ ಮೇಯರ್ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಸದಸ್ಯರ ಹಾಜರಾತಿ ನಂತರ ನಾಮಪತ್ರ ಪರಿಶೀಲನೆ ನಡೆಯುವುದು. ನಾಮಪತ್ರ ಹಿಂದಕ್ಕೆ ಪಡೆಯಲು ಅವಕಾಶವಿರುತ್ತದೆ. ಅವಿರೋಧ ಆಯ್ಕೆ ಸಾಧ್ಯವಾಗದಿದ್ದರೆ ಮತಕ್ಕೆ ಹಾಕಲಾಗುವುದು. ನಂತರ ಫಲಿತಾಂಶ ಪ್ರಕಟಿಸಲಾಗುವುದು ಪಾಲಿಕೆಯ ಪರಿಷತ್ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ.

ಮೊದಲ ಅವಧಿಯ ಮೇಯರ್ ಲತಾ ಗಣೇಶ್, ಉಪ  ಮೇಯರ್ ಚನ್ನಬಸಪ್ಪ ಅವರ ಒಂದು ವರ್ಷದ ಅವಧಿ ನವೆಂಬರ್‌ಗೆ ಕೊನೆಯಾಗಿತ್ತು. ಎರಡನೇ ಅವಧಿಗೆ ಚುನಾವಣೆ ನಡೆಯುತ್ತಿದೆ. ಮೇಯರ್ ಸ್ಥಾನ ಬಿಸಿಎಂ ‘ಬಿ’ ಮಹಿಳೆ ಹಾಗೂ ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮೀಸಲಾಗಿದೆ. ಪಾಲಿಕೆಯಲ್ಲಿ ಬಿಜೆಪಿ ಸ್ವಷ್ಟಬಹುಮತ ಹೊಂದಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು