ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯ ಗರ್ಭಾಶಯದಿಂದ 9 ಕೆ.ಜಿ ಗೆಡ್ಡೆ ಹೊರತೆಗೆದ ವೈದ್ಯರು!

Published 10 ಏಪ್ರಿಲ್ 2024, 14:36 IST
Last Updated 10 ಏಪ್ರಿಲ್ 2024, 14:36 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರಿಗೆ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿ 9 ಕೆ.ಜಿ ತೂಕದ ಗೆಡ್ಡೆ ಹೊರತೆಗೆಯಲಾಗಿದೆ.

ಕಡೂರು ತಾಲ್ಲೂಕಿನ 49 ವರ್ಷದ ಮಹಿಳೆಯ ಗರ್ಭಾಶಯದಲ್ಲಿ ಇದ್ದ 9 ಕೆ.ಜಿ ಬೃಹತ್ ಗಾತ್ರದ ಗೆಡ್ಡೆಯನ್ನು ಏಪ್ರಿಲ್‌ 6ರಂದು ವೈದ್ಯರು ಹೊರತೆಗೆದರು. 

ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವೈದ್ಯರಾದ ಡಾ.ದೀಪಕ್ ಎಚ್.ಎಲ್ , ಡಾ.ಸಂದೇಶ್ ಕೆ.ಆರ್ (ಶಸ್ತ್ರ ಚಿಕಿತ್ಸಾ ತಜ್ಞರು) ಹಾಗೂ ಡಾ.ವಾದಿರಾಜ್ ಕುಲಕರ್ಣಿ, ಅರಿವಳಿಕೆ ತಜ್ಞ ಡಾ.ಅರ್ಜುನ್ ಭಾಗವತ್ ಹಾಗೂ ಸಿಬ್ಬಂದಿ ಚಿಕಿತ್ಸಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT