ಶಿಕಾರಿಪುರ: ‘ಬಸವಾದಿ ಶರಣರ ಚಿಂತನೆಗಳು ಇಂದಿನ ಕಾಲಘಟ್ಟಕ್ಕೂ ಪ್ರಸ್ತುತವಾಗಿವೆ. ವಚನ ಸಾಹಿತ್ಯವನ್ನು ಪ್ರತಿಯೊಬ್ಬರೂ ಓದಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತೊಗರ್ಸಿ ಮಳೇಹಿರೇಮಠದ ಮಹಾಂತದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕ, ತಾಲ್ಲೂಕು ಆಡಳಿತದ ವತಿಯಿಂದ ಬುಧವಾರ ನಡೆದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದ ಎಲ್ಲೆಡೆ ಮೌಢ್ಯ, ಜಾತೀಯತೆ, ಮೇಲು– ಕೀಳು ತುಂಬಿರುವ ಕಾಲದಲ್ಲಿ ಬಸವಾದಿ ಶರಣರು ನಡೆಸಿದ ಕ್ರಾಂತಿ ಎಲ್ಲ ಕಾಲಕ್ಕೂ ಮಾದರಿಯಾಗುವಂತಹದ್ದು’ ಎಂದರು.

ಸಭೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಅಕ್ಕಮಹಾದೇವಿ ವೃತ್ತದಿಂದ ವೀರಗಾಸೆ, ಡೊಳ್ಳು, ಭಜನೆಯೊಂದಿಗೆ ಭಾವಚಿತ್ರ ಮೆರವಣಿಗೆ ನಡೆಯಿತು.

ವೀರಶೈವ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ಸುಧೀರ್ ಮಾರವಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿರಕ್ತಮಠದ ಚನ್ನಬಸವ ಸ್ವಾಮೀಜಿ, ಸಾಲೂರು ಹಿರೇಮಠದ ಗುರುಲಿಂಗ ಜಂಗಮ ಸ್ವಾಮೀಜಿ, ಮಾತೆ ಶರಣಾಂಬಿಕೆ, ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್, ಉಪತಹಶೀಲ್ದಾರ್ ವಿನಯ್ ಆರಾಧ್ಯ, ರವಿಕುಮಾರ್, ಕೃಷಿ ಇಲಾಖೆ ಕಿರಣ್ಕುಮಾರ್ ಹರ್ತಿ, ಪುರಸಭೆ ವ್ಯವಸ್ಥಾಪಕ ರಾಜ್ಕುಮಾರ್, ವೀರಶೈವ ಸಮಾಜದ ಮುಖಂಡರಾದ ಬಿ.ಡಿ.ಭೂಕಾಂತ್, ನಿವೇದಿತಾ ರಾಜು, ಶೈಲಾ ಯೋಗೀಶ್, ಮಮತಾ ಬಾಲಚಂದ್ರ, ಸತೀಶ್, ಸುನಿಲ್, ಹದಡಿ ಮಂಜುನಾಥ್, ಪ್ರವೀಣ್, ಆರ್.ಕೆ.ಶಂಭು, ವೀರನಗೌಡ ಇತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.