ಶಿವಮೊಗ್ಗ: ಗೋಪಾಲಗೌಡ ಬಡಾವಣೆಯಲ್ಲಿ ಬೆಳಿಗ್ಗೆ ಕಾಣಿಸಿಕೊಂಡಿದ್ದ ಕರಡಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ.

ಅಲ್ಲಿನ ಡಿವಿಜಿ ಪಾರ್ಕ್ ಮುಂಭಾಗದ ಖಾಲಿ ನಿವೇಶನದಲ್ಲಿ ಕರಡಿ ಇತ್ತು.

ನಾಯಿಗಳು ಓಡಿಸಿಕೊಂಡು ಬಂದಿದ್ದರಿಂದ ಕರಡಿ ಆತಂಕಗೊಂಡಿತ್ತು. ನಾಯಿಗಳಿಂದ ತಪ್ಪಿಸಿಕೊಳ್ಳುವ ಭರದಲ್ಲಿ ತುಕಾರಾಂ ಶೆಟ್ಟಿ ಎಂಬುವವರ ಮೇಲೆ ದಾಳಿ ನಡೆಸಿದ್ದ ಕರಡಿ ಡಿವಿಜಿ ಪಾರ್ಕ್ ಎದುರಿನ ಖಾಲಿ ನಿವೇಶನದಲ್ಲಿ ಗಿಡಗಳ ಮಧ್ಯೆ ಅವಿತು ಕುಳಿತಿತ್ತು. ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯಾಧಿಕಾರಿಗಳು ‘ಆಪರೇಷನ್ ಕರಡಿ’ ಆರಂಭಿಸಿದ್ದರು. ಅರೆವಳಿಕೆ ಮದ್ದು ನೀಡಿ, ಬಲೆ ಹಾಕಿ ಕರಡಿ ಸೆರೆ ಹಿಡಿಯಲಾಗಿದೆ.

ಈ ವೇಳೆ ಕರಡಿ ಇರುವ ಜಾಗದ ಸಮೀಪಕ್ಕೆ ಜನರು ತೆರಳದಂತೆ ನಿರ್ಬಂಧ ವಿಧಿಸಿದ್ದರು. ನಿವೇಶನದ ಸುತ್ತಲು ಬಲೆ ಹಾಕಿ, ಕರಡಿ ತಪ್ಪಿಸಿಕೊಳ್ಳದಂತೆ ನೋಡಿಕೊಂಡರು. ಬಳಿಕ ಕಾರ್ಯಾಚರಣೆ ಆರಂಭಿಸಿ ಕರಡಿಯನ್ನು ಸೆರೆ ಹಿಡಿಯಲಾಯಿತು ಕರಡಿ ಹಿಡಿಯುವ ಕಾರ್ಯಾಚರಣೆ ವೀಕ್ಷಿಸಲು ದೊಡ್ಡ ಸಂಖ್ಯೆಯ ಜನರು ಸೇರಿದ್ದರು. ಕರಡಿ ಸೆರೆ ಹಿಡಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಪರವಾಗಿ ಜೈಕಾರದ ಘೋಷಣೆ ಕೂಗಿದರು. ಕಾರ್ಯಾಚರಣೆ ಎರಡು ಗಂಟೆ ಅವಧಿಯಲ್ಲಿ ಮುಕ್ತಾಯವಾಯಿತು.
.ಶಿವಮೊಗ್ಗ: ವಾಕಿಂಗ್ ಮಾಡುತ್ತಿದ್ದ ವ್ಯಕ್ತಿ ಮೇಲೆ ಕರಡಿ ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.