ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: 21 ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ

Last Updated 5 ಸೆಪ್ಟೆಂಬರ್ 2020, 3:54 IST
ಅಕ್ಷರ ಗಾತ್ರ

ಶಿವಮೊಗ್ಗ: ಪ್ರಸಕ್ತ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 7 ಕಿರಿಯ ಪ್ರಾಥಮಿಕ ಶಾಲೆ, 7 ಹಿರಿಯ ಪ್ರಾಥಮಿಕ ಹಾಗೂ 7‍ಪ್ರೌಢಶಾಲೆ ಶಿಕ್ಷಕರು ಸೇರಿ ಒಟ್ಟು 21 ಶಿಕ್ಷಕರು ಭಾಜನರಾಗಿದ್ದಾರೆ.

ಕಿರಿಯ ಪ್ರಾಥಮಿಕ ಶಾಲೆ ವಿಭಾಗದಿಂದ ತೀರ್ಥಹಳ್ಳಿಯ ಹೆಗಲತ್ತಿ ಶಾಲೆ ಶಿಕ್ಷಕ ಜೆ.ಎಚ್.ರಮೇಶ್, ಶಿವಮೊಗ್ಗದ ರಾಮನಗರ ಶಾಲೆ ಶಿಕ್ಷಕಿ ಎಂ.ಎನ್.ಜಬೀನ ಕೌಸರ್, ಸೊರಬ ತ್ಯಾವರಕೊಪ್ಪ ಶಾಲೆಯ ಶಿಕ್ಷಕ ಕೆ.ಬಸವಂತಪ್ಪ, ಭದ್ರಾವತಿಯ ಎ.ಕೆ. ಕಾಲೋನಿ ಶಿಕ್ಷಕ ಚಂದ್ರುಶೇಖರಪ್ಪ ಚಕ್ರಸಾಲಿ, ಹೊಸನಗರ ಹಿಲ್ಕುಂಜಿ ಶಾಲೆ ಶಿಕ್ಷಕ ಶ್ರೀನಿವಾಸ, ಸಾಗರದ ಗುಡ್ಡಹಾಲಳ್ಳಿ ಶಾಲೆಯ ಶಿಕ್ಷಕಿ ಪಿ ವೀಣಾ, ಶಿಕಾರಿಪುರದ ಹಿರೇಕವಲತ್ತಿ ಶಾಲೆ ಶಿಕ್ಷಕ ಯು.ರಾಘವೇಂದ್ರ ಆಯ್ಕೆ ಆಗಿದ್ದಾರೆ.

ಹಿರಿಯ ಪ್ರಾಥಮಿಕ ಶಾಲೆ ವಿಭಾಗದಿಂದ ಶಿಕಾರಿಪುರ ಹಿತ್ತಲ ಶಾಲೆ ಶಿಕ್ಷಕ ಲೋಕೇಶ್ ಮಕರಿ, ಸಾಗರದ ಕೋಳೂರು ಶಾಲೆಯಕೆ.‍ಪಿ. ಪರಶುರಾಮಪ್ಪ, ತೀರ್ಥಹಳ್ಳಿ ಹೆಗ್ಗೋಡು ಶಾಲೆಯ ಶಿಕ್ಷಕಿ ಕೆ.ಆರ್.ಶ್ರೀದೇವಿ, ಶಿವಮೊಗ್ಗದ ಹಾರೋಬೆನವಳ್ಳಿ ಶಾಲೆ ಶಿಕ್ಷಕ ಎಸ್‌.ಕೆ.ರಾಮಸ್ವಾಮಿ ಹಾಗೂ ಹಾಯ್ ಹೊಳೆ ಶಾಲೆ ಶಿಕ್ಷಕ ಒ.ತ್ರಿಯಂಬಕಮೂರ್ತಿ, ಭದ್ರಾವತಿ ಕಾಳಿಂಗನಹಳ್ಳಿ ಶಾಲೆಯ ಶಿಕ್ಷಕ ಬಿ.ಮಂಜಪ್ಪ ಅವರು ಆಯ್ಕೆಯಾಗಿದ್ದಾರೆ.

ಪ್ರೌಢಶಾಲಾ ವಿಭಾಗದಿಂದ ಭದ್ರಾವತಿಯ ಅರಳೀಹಳ್ಳಿ ಶಾಲೆ ಶಿಕ್ಷಕಿ ಕೆ.ಜ್ಯೋತಿ, ಸೊಬರದ ಬಿಳುವಾಣಿ ಶ್ರೀ ವೀರಭದ್ರೇಶ್ವರ ಶಾಲೆಯ ಶಿಕ್ಷಕ ಆರ್.ಹಿರಣ್ಣಪ್ಪ, ಶಿವಮೊಗ್ಗ ಮೆರಿ ಇಮ್ಯೂಕ್ಯುಲೇಟ್ ಶಾಲೆ ಶಿಕ್ಷಕಿ ಎ.ಎಸ್‌.ಆಶಾ, ತೀರ್ಥಹಳ್ಳಿ ಮೇಗರವಳ್ಳಿ ಶಾಲೆ ಶಿಕ್ಷಕ ಎಂ.ಎಸ್.‌ದಿವಾಕರ್, ಸಾಗರದ ಇಕ್ಕೇರಿ ಶಾಲೆಯ ರಾಮಚಂದ್ರ ಆರ್.ಹೆಗ್ಗಡೆ, ಶಿಕಾರಿಪುರದ ಪ್ರೌಢಶಾಲೆ ಶಿಕ್ಷಕಿ ಮೀನಾಕ್ಷಮ್ಮ ಎ.ಕೆ.ಸಿದ್ದರೂಡ, ಹೊಸನಗರದ ಕಾರಣಗಿರಿ ಶಾಲೆಯ ತಿರುಪತಿನಾಯಕ ಅವರು ಆಯ್ಕೆಯಾಗಿದ್ದಾರೆ.

ಇನ್ನು 9 ಮಂದಿ ಶಿಕ್ಷಕರಿಗೆ ವಿಶೇಷ ಪುರಸ್ಕೃತ ಶಿಕ್ಷಕ ಪ್ರಶಸ್ತಿ ಲಭಿಸಿದೆ. ಕಿರಿಯ ಪ್ರಾಥಮಿಕ ವಿಭಾಗದಿಂದ ಶಿವಮೊಗ್ಗ ತ್ಯಾವರೆಕಪ್ಪದ ಶಾಲೆಯ ಎಂ.ಸುನಿತ, ಸೊರಬದ ಹಿರೇಮಾಗಡಿತಾಂಡ ಶಾಲೆಯ ಇಬ್ರಾಹಿಂ ಎಸ್‌.ದೊಡ್ಡಮನಿ, ಹಿರಿಯ ಪ್ರಾಥಮಿಕ ವಿಭಾಗದಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹ ಶಿಕ್ಷಕಿ ಎಸ್‌.ಎನ್‌. ಲೀಲಾ ಹಾಗೂ ಗೊಂದಿಚಟ್ನಳ್ಳಿ ಶಾಲೆ ಶಿಕ್ಷ ಜಿ.ಎಸ್‌.ಚನ್ನಮಲ್ಲಪ್ಪ, ಪ್ರೌಢಶಾಲಾ ವಿಭಾಗದ ಸೊರಬ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ಶಿಕ್ಷಕ ಆರ್.ಎಸ್‌.ನೂಲಗೇರಿ, ಶಿವಮೊಗ್ಗ ಬಿ.ಎಚ್‌.ರಸ್ತೆ ಶಾಲೆಯ ಡಿ.ಚಂದ್ರಪ್ಪ ಹಾಗೂ ಗಾಡಿಕೊಪ್ಪ ಶಾಲೆ ಶಿಕ್ಷಕ ಹಾಲಯ್ಯ ಶ್ರೀ ವಿರಕ್ತಮಠ, ಸಾಗರದ ಉಳ್ಳೂರು ಶಾಲೆ ಶಿಕ್ಷಕ ನಾಗರಾಜ ಅವರು ವಿಶೇಷ ಪುರಸ್ಕೃತ ಶಿಕ್ಷಕ ಪ್ರಶಸ್ತಿಗೆ ಭಾಜನವಾರಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT