ಶಿವಮೊಗ್ಗ: ಕೆಎಸ್ಆರ್ಟಿಸಿ ಬಸ್ನಿಲ್ದಾಣದಲ್ಲಿ ಊಟವಿಲ್ಲದೇ ಪರದಾಡುತ್ತಿದ್ದ ಪ್ರಾಯಾಣಿಕರಿಗೆ ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಊಟದ ವ್ಯವಸ್ಥೆ ಮಾಡುವ ಜತೆಗೆ, ದೂರದ ಪ್ರಯಾಣಕ್ಕೆ ಅಗತ್ಯ ವಾಹನದ ವ್ಯವಸ್ಥೆ ಕಲ್ಪಿಸಲಾಯಿತು.

ಬೇರೆಬೇರೆ ಭಾಗಗಳಿಂದ ಬಂದಿದ್ದ, ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಊಟ ಸಿಗದೇ ಬಳಲಿದ್ದರು. ವಿಷಯ ತಿಳಿದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಕಾರ್ಯದರ್ಶಿ ರಂಗಸ್ವಾಮಿ, ಚಂದ್ರಶೇಖರ್, ಜಗತ್, ಲಕ್ಷ್ಮಣಪ್ಪ, ಸ್ಟೆಲ್ಲಾ ಮಾರ್ಟಿನ್, ಕುಮಾರಸ್ವಾಮಿ, ಅರ್ಚನಾ, ಮಂಜುನಾಥ ಗೌಡ, ಸೌಗಂಧಿಕಾ ಮತ್ತಿತರರು ಕೆಎಸ್ಆರ್ಟಿಸಿ ಅಧಿಕಾರಿಗಳ ಜತೆ ಮಾತನಾಡಿ, ಎಲ್ಲ ಪ್ರಯಾಣಿಕರಿಗೂ ಊಟದ ವ್ಯವಸ್ಥೆ ಮಾಡಿದರು.

ಮೊದಲು ನಿಲ್ದಾಣದ ಒಳಗೆ ಇದ್ದ ಎಲ್ಲರಿಗೂ ಕೂರಿಸಿ, ಆಹಾರ ನೀಡಿದರು. ಜನರುಅಂತರಕಾಪಾಡಿಕೊಂಡು ಸಾಲಾಗಿ ಕುಳಿತು ಊಟ ಮಾಡಿದರು. ನಂತರ ಬಸ್ ಇಳಿದ ಎಲ್ಲ ಪ್ರಯಾಣಿಕರಿಗೂ ಆಹಾರದ ಪೊಟ್ಟಣ ನೀಡಲಾಯಿತು.

ಜಿಲ್ಲೆಯ ಒಳ ಪ್ರದೇಶಗಳಿಗೆ ತೆರಳಲು ವಾಹನವಿಲ್ಲದೇ ಪರದಾಡುತ್ತಿದ್ದ ಹಲವರಿಗೆ ವಾಹನದ ವ್ಯವಸ್ಥೆ ಕಲ್ಪಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.