ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈತರ ಆರ್ಥಿಕ ಸ್ವಾವಲಂಬನೆ ಸಂಘದ ಗುರಿ

ಅಧ್ಯಕ್ಷ ಗುರುಶಕ್ತಿ ವಿದ್ಯಾಧರ್ ರಾವ್
Published : 24 ಸೆಪ್ಟೆಂಬರ್ 2024, 15:29 IST
Last Updated : 24 ಸೆಪ್ಟೆಂಬರ್ 2024, 15:29 IST
ಫಾಲೋ ಮಾಡಿ
Comments

ಹೊಸನಗರ: ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸುವುದು ಸಂಘದ ಗುರಿ ಎಂದು ತ್ರಿಣಿವೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗುರಶಕ್ತಿ ವಿದ್ಯಾಧರ ರಾವ್ ತಿಳಿಸಿದರು. 

ತ್ರಿಣಿವೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘವು 1949ರಲ್ಲಿ ಆರಂಭಗೊಂಡು ಗ್ರಾಮೀಣ ಭಾಗದ ಸಹಕಾರಿ ಸಂಸ್ಥೆಯಾಗಿ ಜಿಲ್ಲೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಷೇರುದಾರರ ನಿರಂತರ ಪ್ರೋತ್ಸಾಹ ಇದಕ್ಕೆ ಕಾರಣ ಎಂದು ಹೇಳಿದರು.

ಸಂಘವು 74 ವಸಂತಗಳನ್ನು ಪೂರೈಸಿ ಅಮೃತ ಮಹೋತ್ಸವದತ್ತ ಕಾಲಿರಿಸಿದೆ. ಕಳೆದ ಸಾಲಿನಲ್ಲಿ ₹ 1.68 ಕೋಟಿ ಠೇವಣಿ ಸಂಗ್ರಹವಾಗಿದ್ದು, ಈ ಬಾರಿ ₹ 24.21 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು.

ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷ ವಿದ್ಯಾಧರ್ ರಾವ್ ಹಾಗೂ ನಿರ್ದೇಶಕ ಜಿ.ಎನ್. ಸುಧೀರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.

ಸಿಇಒ ಕೆ.ಆರ್. ವೆಂಕಟೇಶ್ ಸಭಾ ನಡಾವಳಿ ವಾಚಿಸಿದರು. ಉಪಾಧ್ಯಕ್ಷ ಸಾಲಗೇರಿ ಲಕ್ಷ್ಮಣಗೌಡ, ನಿರ್ದೇಶಕರಾದ ಆರ್. ರಾಜಕುಮಾರ್, ನೆಲ್ಲುಂಡೆ ವರುಣ್, ಎಂ.ಎನ್. ನಟರಾಜ್, ಚಂದ್ರಶೇಖರ್, ಗೀತಾ ಜಯರಾಮ್ ಶೆಟ್ಟಿ, ಎ.ಕೆ. ಹಾಲಮ್ಮ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT