ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪಾಜಿ ಗೌಡರ ಸಾವು ಸರ್ಕಾರಕ್ಕೆ ಪಾಠವಾಗಲಿ: ದತ್ತ

Last Updated 5 ಸೆಪ್ಟೆಂಬರ್ 2020, 19:32 IST
ಅಕ್ಷರ ಗಾತ್ರ

ಶಿವಮೊಗ್ಗ: ಭದ್ರಾವತಿಮಾಜಿ ಶಾಸಕ ಅಪ್ಪಾಜಿಗೌಡರ ಸಾವಿನಿಂದಾದರೂ ಸರ್ಕಾರ,ಜಿಲ್ಲಾಡಳಿತ ಪಾಠಕಲಿಯಬೇಕು ಎಂದು ಜೆಡಿಎಸ್ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ. ದತ್ತಾ ಹೇಳಿದರು.

ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಗೌಡರು ಜೀವ ಕಳೆದುಕೊಂಡಿದ್ದಾರೆ. ತೀವ್ರ ಉಸಿರಾಟದ ತೊಂದರೆಗೆ ಒಳಗಾಗಿದ್ದ ಅವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನಿರಾಕರಿಸಲಾಗಿದೆ. ಹಲವು ಆಸ್ಪತ್ರೆಗಳಿಗೆ ಅಲೆದ ನಂತರ ಮೆಗ್ಗಾನ್‌ ಆಸ್ಪತ್ರೆಗೆ ತರುವಷ್ಟರಲ್ಲಿ ಜೀವ ಹೋಗಿದೆ.ಅವರ ಸಾವಿಗೆ ಜಿಲ್ಲಾಡಳಿತವೇ ಹೊಣೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.ಖಾಸಗಿ ಆಸ್ಪತ್ರೆಗಳಲ್ಲೂ ಹಾಸಿಗೆ ಮೀಸಲಾಗಿಡಬೇಕು ಎಂದು ಸರ್ಕಾರ ಆದೇಶ ಹೊರಡಿಸಬೇಕು. ಜಿಲ್ಲಾಡಳಿತ ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾ ಇಡಬೇಕು. ಸರ್ಕಾರ ಅವರ ಸಾವಿನ ನಂತರವಾದರೂ ಪಾಠ ಕಲಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಕೊರೊನಾ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಬೆಂಗಳೂರಿನಂತೆ ರಾಜ್ಯದಎಲ್ಲ ನಗರಗಳ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ದೊರೆಯಬೇಕು.ಹಾಸಿಗೆ ಇದ್ದರೂ ಗಣ್ಯರುಮುಂಗಡ ಕಾಯ್ದಿರಿಸಿದ್ದಾರೆ ಎಂಬಕಾರಣಕ್ಕೆ ಇತರರಿಗೆ ಚಿಕಿತ್ಸೆನಿರಾಕರಿಸುವುದು ಅಕ್ಷಮ್ಯ ಎಂದರು.

ಹಲವುಬಾರಿ ಕೊರೊನಾ ಪರೀಕ್ಷೆಯೇ ಗೊಂದಲ ಮೂಡಿಸುತ್ತದೆ.ಒಂದು ಕಡೆ ಪಾಸಿಟಿವ್ ಬಂದರೆ ಮತ್ತೊಂದು ಕಡೆ ನೆಗೆಟಿವ್ ಬರುತ್ತಿದೆ. ಇದು ಏಕೆ? ಖಾಸಗಿ ಆಸ್ಪತ್ರೆ, ಸರ್ಕಾರಿ ಆಸ್ಪತ್ರೆ ಮತ್ತು ಆರೋಗ್ಯಾಧಿಕಾರಿಗಳಮಧ್ಯೆಬೇರೆ ಏನೋ ಒಪ್ಪಂದವಾಗಿದೆ.ಆರೋಗ್ಯ ಸೇವೆ ದಂಧೆಯಾಗಿದೆ ಎಂದು ದೂರಿದರು.

ಸೋಂಕಿತರಿಗೆ ಸರ್ಕಾರದ ವೆಚ್ಚದಲ್ಲಿಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ.ಅಲ್ಲಿ ಒಂದು ಹೊತ್ತು ಊಟ, ಒಂದು ಮೊಟ್ಟೆ ಮತ್ತು ಒಂದಿಷ್ಟು ಸಾಮಾನ್ಯ ಮಾತ್ರೆಗಳನ್ನು ಕೊಡಲಾಗುತ್ತದೆ. ಆದರೆ, ದಿನಕ್ಕೆ ₹ 15 ಸಾವಿರಶುಲ್ಕ ವಿಧಿಸಲಾಗುತ್ತಿದೆ. ಕನಿಷ್ಠ ಒಂದು ವಾರದ ಚಿಕಿತ್ಸೆ ನೀಡಿದರೂ ₹ 1 ಲಕ್ಷ ಹಣ ತೆರಬೇಕು. ಇಲ್ಲೂಅವ್ಯವಹಾರದ ವಾಸನೆಬರುತ್ತಿದೆ. ಹಾಗಾಗಿ, ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಕಾಂತ್, ಮುಖಂಡರಾದ ಡಿ. ಆನಂದ್ ಜೆ.ಪಿ. ಯೋಗೀಶ್, ಮಣಿಶೇಖರ್, ಎಸ್. ಕುಮಾರ್, ನಾಗರಾಜ್ ಕಂಕಾರಿ, ಕರುಣಾಕರಮೂರ್ತಿಇದ್ದರು.

13ಕ್ಕೆ ಅಪ್ಪಾಜಿ ಗೌಡರ ಸ್ಮರಣೆ, ಧಾರ್ಮಿಕ ಕಾರ್ಯ

ಅಪ್ಪಾಜಿಗೌಡರ ಧಾರ್ಮಿಕ ವಿಧಿವಿಧಾನಗಳು ಸೆ.13ರಂದು ಭದ್ರಾವತಿಯ ಚರ್ಚ್ ಮೈದಾನದಲ್ಲಿ ಬೆಳಿಗ್ಗೆ11ರಿಂದ ಮಧ್ಯಾಹ್ನದವರೆಗೆ ನೆರವೇರಲಿವೆ ಎಂದು ದತ್ತಾ ಮಾಹಿತಿ ನೀಡಿದರು.

ಶಿಸ್ತುಬದ್ದವಾಗಿ, ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಇಟ್ಟುಕೊಂಡುಎಲ್ಲರೂ ಭಾಗವಹಿಸುತ್ತೇವೆ.ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಉಪಸ್ಥಿತರಿರುವರು. ಈ ಕಾರ್ಯಕ್ರಮಕ್ಕೆ ಅಗತ್ಯ ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT