ಹೊಸನಗರ: ‘ತಾಲ್ಲೂಕಿನ ಆರ್ಯ ಈಡಿಗರ ಸಂಘದಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ. ಕೂಡಲೇ ಸಂಘದ ಸಭೆ ಕರೆದು ಸೂಕ್ತ ಲೆಕ್ಕಾಚಾರ ನೀಡಬೇಕು’ ಎಂದು ಒತ್ತಾಯಿಸಿ ದೀವರ (ಈಡಿಗರ) ಹಿತ ರಕ್ಷಣಾ ವೇದಿಕೆ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಈಡಿಗರ ಸಭಾಭವನದ ಎದುರು ಮಂಗಳವಾರ ಪ್ರತಿಭಟನೆ ನಡೆಸಿದ ವೇದಿಕೆ ಸದಸ್ಯರು ಸಂಘದ ಆಡಳಿತ ವಿರೋಧಿ ನಡೆಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

‘ಸಂಘವು ಕೆಲವೇ ಜನರ ಹಿಡಿತದಲ್ಲಿದೆ. ಸಂಘದ ಆಡಳಿತ ವೈಖರಿ ಹಲವಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಂಘದ ವಾರ್ಷಿಕ ಲೆಕ್ಕಪತ್ರ ಮಂಡನೆ ಆಗುತ್ತಿಲ್ಲ. ಹಣದ ವಿಚಾರದಲ್ಲಿ ಸರಿಯಾದ ಲೆಕ್ಕಾಚಾರ ನಡೆಯುತ್ತಿಲ್ಲ. ಕೆಲವು ಪ್ರಭಾವಿ ವ್ಯಕ್ತಿಗಳು ಹೇಳಿದಂತೆ ಸಂಘ ನಡೆಯುತ್ತಿದೆ. ಆಡಳಿತದಲ್ಲಿ ಪ್ರಜಾಪ್ರಭುತ್ವ ನಡೆ ಇಲ್ಲವಾಗಿದೆ. ಯುವಕರನ್ನು ದೂರ ಇಡಲಾಗಿದೆ’ ಎಂದು ದೂರಿದರು.

‘ಜನಾಂಗದ ಹಿತದೃಷ್ಟಿ ಮರೆತು ವ್ಯವಹರಿಸುತ್ತಿರುವ ಸಂಘವು ಯಾವುದೇ ಸಮಾಜಮುಖಿ ಕೆಲಸ ಮಾಡುತ್ತಿಲ್ಲ. ಯುವಕರಿಗೆ ಅವಕಾಶ ನೀಡದೇ ಸಮಾಜದ ಮುಖ್ಯ ಕಾರ್ಯದಲ್ಲಿ ತೊಡಗದೇ ಕೇವಲ ಜನಪ್ರತಿನಿಧಿಗಳಿಂದ ಹಣ, ಅನುದಾನ ತರುವ ಕೆಲಸಕ್ಕಷ್ಟೇ ಸಂಘ ಸೀಮಿತವಾಗಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.

ವೇದಿಕೆ ಪ್ರಮುಖರಾದ ನೇರ್ಲೆ ಸ್ವಾಮಿ ಮಾತನಾಡಿ, ‘ಜನಾಂಗದ ಹಿತದೃಷ್ಟಿಯಿಂದ ಈ ಕೂಡಲೇ ಸಂಘದ ಸಾಮಾನ್ಯ ಸಭೆ ಕರೆದು ಸ್ವಾತಂತ್ರ್ಯ ವಿಚಾರ ಸಮಿತಿ ರಚಿಸಿ ಸಂಘವನ್ನು ಪ್ರಜಾಪ್ರಭುತ್ವಗೊಳಿಸಬೇಕು’ ಎಂದು ಒತ್ತಾಯಿಸಿದರು.

ಎಚ್.ಆರ್. ಶ್ರೀಧರ ಹಾರೊಕೊಪ್ಪ, ಕುಮಾರ್ ಮಂಡಾನಿ, ವಾಸಪ್ಪ ಮಾಸ್ತಿಕಟ್ಟೆ, ಗಣಪತಿ ಮಾಕನಕಟ್ಟೆ, ಸೊನಲೆ ಶ್ರೀನಿವಾಸ್ ಮತ್ತಿತರರು ಇದ್ದರು.