ಈ ರಸ್ತೆ ಮೂಲಕ ಪ್ರತಿದಿನ ಹತ್ತಾರು ಶಾಲಾ ವಿದ್ಯಾರ್ಥಿಗಳು ವೃದ್ಧರು ಅನಾರೋಗ್ಯ ಪೀಡಿತರು ಆಸ್ಪತ್ರೆ ಕಚೇರಿಗಳಿಗೆ ತೆರಳುತ್ತಾರೆ. ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಇಲ್ಲಿನ ಜನರ ನೆಮ್ಮದಿ ಕಾಪಾಡಬೇಕು
ಕೇಶವ– ದಿನೇಶ್ ಗೌಡಕೊಪ್ಪ
ಇಂದು ಶ್ರಮದಾನದ ಮೂಲಕ ಮಾಡಿದ ರಸ್ತೆ ದುರಸ್ತಿ ನಮ್ಮ ಪ್ರತಿಭಟನೆ ಆಗಿದೆ. ಇದರಿಂದ ತಾಲ್ಲೂಕು ಆಡಳಿತ ಎಚ್ಚೆತ್ತುಕೊಳ್ಳಬೇಕು. ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ತಾಲ್ಲೂಕು ಕಚೇರಿ ಎದುರು ಧರಣಿ ನಡೆಸಲಿದ್ದೇವೆ