ಶಿವಮೊಗ್ಗ: ಒಂದೂವರೆ ತಿಂಗಳ ಹಿಂದಷ್ಟೆ ಇಲ್ಲಿನ ಸಾಗರ ರಸ್ತೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದ್ದ ಕಿಮ್ಮನೆ ಗಾಲ್ಫ್ ಕ್ಲಬ್ ವಾರಾಂತ್ಯದಲ್ಲಿ ಕಳೆಕಟ್ಟಿತ್ತು. ಅದಕ್ಕೆ ಕಾರಣ ಬಾಲಿವುಡ್ ತಾರೆ ಜಾಕ್ವೆಲಿನ್ ಫರ್ನಾಂಡಿಸ್.

ಜಾಕ್ವೆಲಿನ್ ಎರಡು ದಿನಗಳು ಶಿವಮೊಗ್ಗದಲ್ಲೇ ಬೀಡುಬಿಟ್ಟಿದ್ದಾರೆ. ಯಾವುದೋ ಸಿನಿಮಾ ಶೂಟಿಂಗ್ ಅಂತೆ, 'ಕಿಚ್ಚ' ಸುದೀಪ್ ಅಭಿನಯದ 'ಫ್ಯಾಂಟಮ್' ಚಿತ್ರದ ವಿಶೇಷ ಹಾಡಿನ ಚಿತ್ರೀಕರಣ ನಡೆಯುತ್ತಿದೆ ಎಂಬ ಸುದ್ದಿ ಹಬ್ಬಿತ್ತು. ಗಾಲ್ಫ್ ಕ್ಲಬ್‌ನಿಂದ ಹೊರಟ ನಂತರ ಸ್ವತಃ ಅವರೇ ಶಿವಮೊಗ್ಗ ಭೇಟಿಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು ಅಪ್‌ಲೋಡ್ ಮಾಡಿದ ನಂತರವೇ ಗಾಸಿಪ್‌ಗಳಿಗೆಲ್ಲ ತೆರೆಬಿದ್ದಿದೆ. ವಾಸ್ತವ ಚಿತ್ರಣ ದೊರಕಿದೆ.

ಅಂದ ಹಾಗೆ ಶ್ರೀಲಂಕಾ ಮೂಲದ ಈ ಚೆಲುವೆ ಸ್ನೇಹಿತರ ಜತೆ ಮಲೆನಾಡಿನ ಮಡಿಲಿನ ಗಾಲ್ಫ್‌ಕ್ಲಬ್‌ಗೆ ಭೇಟಿ ನೀಡಿದ್ದು ವಾರಾಂತ್ಯದ ರಜೆ ಕಳೆಯಲು. ಎರಡು ದಿನ ಐಷಾರಾಮಿ ಕ್ಲಬ್‌ನಲ್ಲಿ ತಂಗಿದ್ದ ಅವರು ಪ್ರಕೃತಿಯ ಸೊಬಗು ಸವಿಯುತ್ತಾ ಸ್ನೇಹಿತರ ಜತೆ ಗಾಲ್ಫ್ ಆಡಿ ಸಂಭ್ರಮಿಸಿದ್ದಾರೆ. ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ‘ಬೆಸ್ಟ್ ವೀಕೆಂಡ್ ಎವರ್’ ಎಂದು ಬರೆದುಕೊಂಡಿದ್ದಾರೆ.

ಸುದೀಪ್ ‘ಫ್ಯಾಂಟಮ್’ನಲ್ಲಿ ಜಾಕ್ವೆಲಿನ್

ಜಾಕ್ವೆಲಿನ್ ಸದ್ಯ ಬಾಲಿವುಡ್‌ನ ಸಾಲುಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಜತೆ ‘ಬಚ್ಚನ್ ಪಾಂಡೆ’ಯಲ್ಲಿ ಅಭಿನಯಿಸುತ್ತಿದ್ದಾರೆ. ಅಟ್ಯಾಕ್, ಭೂತ್ ಪೊಲೀಸ್, ಸರ್ಕಸ್ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಜಾಕ್ವೆಲಿನ್ ಸುದೀಪ್ ಅಭಿನಯದ ‘ಫ್ಯಾಂಟಮ್’ ಚಿತ್ರದ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏಪ್ರಿಲ್‌ನಲ್ಲಿ ಹಾಡಿನ ಚಿತ್ರೀಕರಣ ನಡೆಯುವ ಸಾಧ್ಯತೆ ಇದೆ ಎನ್ನುವ ಸುದ್ದಿಯೂ ಜೋರಾಗಿ ಕೇಳಿಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.