ಶಿವಮೊಗ್ಗ: ಭಾರೀ ಮಳೆಯಿಂದ ಶಿವಮೊಗ್ಗ ಜಿಲ್ಲೆಯ ನದಿ, ಹಳ್ಳ-ಕೊಳ್ಳ ಉಕ್ಕಿ ಹರಿಯುತ್ತಿವೆ. ಜಲಪಾತಗಳು ಮೈದುಂಬಿವೆ. ಅಪಾಯಕ್ಕೂ ಆಹ್ವಾನ ನೀಡುತ್ತಿವೆ. ಹೀಗಾಗಿ ನದಿಯೊಳಗೆ ಈಜಾಡುವುದು, ಜಲಪಾತಗಳ ಕೆಳಗೆ ಇಳಿಯುವುದು ಹಾಗೂ ಸೆಲ್ಫಿ ತೆಗೆದುಕೊಳ್ಳುವುದನ್ನು ಪೊಲೀಸ್ ಇಲಾಖೆ ನಿಷೇಧಿಸಿದೆ.

ಹೊಸನಗರ ತಾಲ್ಲೂಕಿನ ಹಿಂಡ್ಲುಮನೆ ಫಾಲ್ಸ್, ತಲಾಸಿ ಅಬ್ಬಿ ಫಾಲ್ಸ್, ತೀರ್ಥಹಳ್ಳಿ ಬಳಿ ತುಂಗಾ ನದಿಗೆ ಇಳಿಯುವುದನ್ನು ಮಳೆಯ ತೀವ್ರತೆ ಹಾಗೂ ನದಿಯ ಪ್ರವಾಹ ಕಡಿಮೆ ಆಗುವವರೆಗೂ ನಿಷೇಧಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಆ ಪ್ರದೇಶಗಳ ಸಮೀಪ ಸೂಚನಾ ಫಲಕಗಳ ಹಾಕಲಾಗಿದೆ.

ಅಕಸ್ಮಾತ್ ನದಿ, ಜಲಪಾತಗಳ ಬಳಿ ತೊಂದರೆಗೆ ಸಿಲುಕಿದಲ್ಲಿ ತುರ್ತು ಕರೆ ಸಂಖ್ಯೆ 112 ಗೆ ಕರೆ ಮಾಡಲು ತಿಳಿಸಲಾಗಿದೆ.

ಲಿಂಗನಮಕ್ಕಿ ಜಲಾಶಯ: ಕೊಂಚ ತಗ್ಗಿದ ಒಳಹರಿವು

ಶಿವಮೊಗ್ಗ: ಕಾರ್ಗಲ್ನ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಶನಿವಾರ ಬೆಳಿಗ್ಗೆ 6 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ 69,724 ಕ್ಯುಸೆಕ್ ದಾಖಲಾಗಿದೆ.

ಶುಕ್ರವಾರ ಬೆಳಿಗ್ಗೆ ಆ ಪ್ರಮಾಣ 87,496 ಕ್ಯುಸೆಕ್ ನೀರು ಇತ್ತು. 1819 ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1794.30 ಅಡಿ ನೀರಿನ ಸಂಗ್ರಹ ಇದೆ. ಶುಕ್ರವಾರ ಜಲಾಶಯದಲ್ಲಿ ನೀರಿನ ಮಟ್ಡ 1791.50 ಅಡಿ ಇತ್ತು. 24 ಗಂಟೆಗಳಲ್ಲಿ 3.20 ಅಡಿಯಷ್ಡು ನೀರಿನ ಸಂಗ್ರಹ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 1758.95 ಅಡಿ ನೀರು ಸಂಗ್ರಹ ಇತ್ತು.

ಕಳೆದ 24 ಗಂಟೆಗಳಲ್ಲಿ ಶರಾವತಿ ಕೊಳ್ಳದಲ್ಲಿ ಮಳೆಯ ಪ್ರಮಾಣ ಕೊಂಚ ತಗ್ಗಿದೆ. ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ಅತಿಹೆಚ್ಚು 16.7 ಸೆಂ.ಮೀ ಮಳೆ ದಾಖಲಾಗಿದೆ. ಹುಲಿಕಲ್ನಲ್ಲಿ 14.9, ಸಾವೇಹಕ್ಲು 14, ಚಕ್ರಾ 12.5, ಮಾಣಿ 10.8, ಯಡೂರಿನಲ್ಲಿ 10.5 ಸೆಂ.ಮೀ ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.