ತೀರ್ಥಹಳ್ಳಿ: ‘ವನ್ಯಜೀವಿ, ಅರಣ್ಯ ಸಂರಕ್ಷಣೆ ಕಾಯ್ದೆಗಳನ್ನು ಉಲ್ಲಂಘಿಸಿ ಕಾಳಿಂಗ ಸರ್ಪಗಳ ಕುರಿತು ಸಂಶೋಧನೆ ನಡೆಸಿಲ್ಲ. ಸಾರ್ವಜನಿಕರು, ಅರಣ್ಯ ಸಿಬ್ಬಂದಿ ಕೋರಿಕೆ ಮೇರೆಗೆ ಹಾವುಗಳನ್ನು ಹಿಡಿದು ಅರಣ್ಯ ಪ್ರದೇಶಗಳಿಗೆ ಬಿಡುತ್ತಿದ್ದೆವು’ ಎಂದು ಗುಡ್ಡೇಕೇರಿಯ ಕಾಳಿಂಗ ಸೆಂಟರ್ ಫಾರ್ ಫಾರೆಸ್ಟ್ ಎಕಾಲಜಿ ಸಂಸ್ಥಾಪಕ ಗೌರಿ ಶಂಕರ್ ಸ್ಪಷ್ಟಪಡಿಸಿದರು.

‘ಹಿಂದಿನ ನಿಯಮಗಳ ಅಡಿಯಲ್ಲಿ ಅನುಮತಿಗಳನ್ನು ಪಡೆದುಕೊಂಡಿದ್ದೆವು. ಇದೀಗ ಅರಣ್ಯ ಇಲಾಖೆ ಕೋರಿಕೊಂಡರೂ ಹಾವುಗಳನ್ನು ಹಿಡಿಯುವುದಿಲ್ಲ. ಅರಣ್ಯ ಇಲಾಖೆಯ ಅನುಮತಿ ನೀಡಿದ್ದರಿಂದಲೇ ಕಳಸದಲ್ಲಿ ಮೊಟ್ಟೆಗಳನ್ನು ಪಡೆದು ಕೃತಕವಾಗಿ ಮರಿಗಳನ್ನು ಮಾಡಲಾಗಿತ್ತು. ಅದಾದ ನಂತರ ಯಾವುದೇ ಕೃತಕ ಮರಿಗಳನ್ನು ಮಾಡಿಲ್ಲ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ವಿದೇಶಗಳಲ್ಲಿ ಜೀವ ಸಂಕುಲಗಳ ಸಂಶೋಧನೆಗೆ ವಿಶೇಷ ಸೌಕರ್ಯ ಕಲ್ಪಿಸಲಾಗುತ್ತದೆ. ಭಾರತದಲ್ಲಿ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ದೊರೆಯುತ್ತಿಲ್ಲ. ನಾವು ಸಂಶೋಧನೆಯಲ್ಲಿ ಭಾರತದ 4 ಕಾಳಿಂಗ ಪ್ರಬೇಧ ಗುರುತಿಸಿದ್ದೇವೆ. ಎಲ್ಲ ಕಾಳಿಂಗ ಪ್ರಬೇಧದ ವಿಷದ ಪ್ರತಿರೋಧಕ ಶಕ್ತಿ ಬೇರೆ ಬೇರೆ ಇದೆ. ಅವುಗಳ ಬಗ್ಗೆಯೂ ಸಂಶೋಧನೆ ನಡೆಯಬೇಕು. ಎಲ್ಲರಿಗೂ ವಿಷ ತೆಗೆಯುವ ಅವಕಾಶ ಇಲ್ಲ. ಅಲ್ಲದೇ ವಿಷ ಸಂರಕ್ಷಿಸಲು 24 ಗಂಟೆಗಳ ವಿದ್ಯುತ್ ಸಂಪರ್ಕದ ಜೊತೆಗೆ –80 ಡಿಗ್ರಿ ಸೆಲ್ಸಿಯಸ್ ತಾಪಮಾನ ಬೇಕಿದೆ. ಅವುಗಳನ್ನು ಸಾಮಾನ್ಯವಾದ ಸಂಶೋಧಕರು ಕೂಡ ನಿರ್ವಹಿಸುವುದು ಕಷ್ಟ’ ಎಂದು ತಿಳಿಸಿದರು.

‘ಕಾಳಿಂಗ ಸರ್ಪ ಪ್ರಬೇಧವನ್ನು ಜಾಗತಿಕವಾಗಿ ಪರಿಚಯಿಸುವ ಪ್ರಯತ್ನ ಮಾತ್ರ ನಮ್ಮಿಂದ ಆಗಿದೆ. ಅವುಗಳ ಬಗೆಗಿನ ಹೆಚ್ಚಿನ ಸಂಶೋಧನೆ ಸಾಧ್ಯವಾಗಿಲ್ಲ. 12 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ನಮ್ಮ ಸಂಸ್ಥೆ ಶೈಕ್ಷಣಿಕ ಉದ್ದೇಶದಿಂದ ಮಾತ್ರ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ. ಮಣಿಪಾಲದ ಮಾಹೆ ವಿಶ್ವವಿದ್ಯಾಲಯ ಸಂಸ್ಥೆಯನ್ನು ಗುರುತಿಸಿ ಅಫಿಲಿಯೇಷನ್ ನೀಡಿದೆ. ಸಂಶೋಧನಾ ವಿದ್ಯಾರ್ಥಿಗಳು ಉರಗಗಳ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ’ ಎಂದರು.

‘ವರ್ಷದಲ್ಲಿ ಕೇವಲ 22 ಹಾವುಗಳನ್ನು ಮಾತ್ರ ಹಿಡಿದು ಕಾಡಿಗೆ ಬಿಡುತ್ತಿದ್ದೆವು. ಒಂದು ಹಾವನ್ನು ಹಿಡಿಯುವಾಗ 30ಕ್ಕೂ ಹೆಚ್ಚು ಕ್ಯಾಮೆರಾಮನ್ಗಳು ನಮ್ಮೊಂದಿಗೆ ಬರುತ್ತಿದ್ದರಿಂದ ಸಾಕಷ್ಟು ಹಾವುಗಳನ್ನು ಹಿಡಿದಂತೆ ಭಾಸವಾಗುತ್ತದೆ. ಅದೆಲ್ಲವು ಫೋಟೊಗ್ರಾಫಿಕ್ ಸ್ಕಿಲ್ಗಳಿಂದ ದೃಶ್ಯ ಸೆರೆಯಾಗಿದೆ ಅಷ್ಟೇ. ಮಲೆನಾಡಿನಲ್ಲಿ ಜನ ಹಾವು ಕೊಲ್ಲುತ್ತಾರೆ ಎಂದು ಯಾವುದೇ ಸಂಶೋಧನಾ ಲೇಖನ ಪ್ರಕಟಿಸಿಲ್ಲ. ಅವೆಲ್ಲವೂ ಉದ್ದೇಶ ಪೂರಿತವಾಗಿ ಸೃಷ್ಟಿಸಿರುವ ಸುಳ್ಳು. ಪರಿಸರ ಸೂಕ್ಷ್ಮ ವಲಯಗಳಲ್ಲಿ ಕಾನೂನು ಬಾಹಿರವಾಗಿ ಯಾವುದೇ ಚಟುವಟಿಕೆ ನಡೆಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ಉರಗ ಸಂರಕ್ಷಕ ಪ್ರಶಾಂತ್, ಶ್ರೇಯಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.