ಶುಕ್ರವಾರ, ಜುಲೈ 30, 2021
21 °C

ರಾಷ್ಟ್ರೀಯ ಪ್ರೌಢಶಾಲೆಗೆ ಅಮೃತ ಸಂಭ್ರಮ ನವೀಕೃತ ಶಾಲೆ ಇಂದು ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಸ್ವಾತಂತ್ರ್ಯ ಪೂರ್ವ ದಲ್ಲಿ ವಿದ್ಯಾಕ್ಷೇತ್ರಕ್ಕೆ ಖಾಸಗಿ ಭಾಗವಹಿಸು ವಿಕೆಯ ಮೊದಲ ಶಾಲೆಯಾಗಿ 1946ರಲ್ಲಿ ಪ್ರಾರಂಭಗೊಂಡ ನಗರದ ರಾಷ್ಟ್ರೀಯ ಪ್ರೌಢಶಾಲೆಯು ಅಮೃತ ಮಹೋತ್ಸವದ (75 ವರ್ಷಗಳ) ಸಂಭ್ರಮದಲ್ಲಿದೆ.

ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರ ಪಾತ್ರ ವಹಿಸಿದ ಶಾಲೆಯನ್ನು ಶಿವಮೊಗ್ಗ ರೋಟರಿ ಕ್ಲಬ್‍ ಅಂತರರಾಷ್ಟ್ರೀಯ ಅನುದಾನದಲ್ಲಿ ಸುಮಾರು ₹ 30 ಲಕ್ಷ ವೆಚ್ಚದಲ್ಲಿ ಸಂಪೂರ್ಣ ನವೀಕೃತಗೊಳಿಸಲಾಗಿದೆ.

ಶಾಲೆಯ ಕೊಠಡಿಗಳ ನವೀಕರಣ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಆಧುನಿಕ ಪೀಠೋಪಕರಣ, ಅತ್ಯಾಧುನಿಕ ಕಂಪ್ಯೂಟರ್ ಪ್ರಯೋಗ ಶಾಲೆ, ಆಧುನಿಕ ಸ್ಮಾರ್ಟ್‌ಕ್ಲಾಸ್‍ಗಳ ಜೋಡಣೆಯ ಜತೆಗೆ ಎಲ್ಲಾ ಆಧುನಿಕ ಉಪಕರಣಗಳ ಸಮರ್ಪಕ ಬಳಕೆ ಮತ್ತು ನಿರ್ವಹಣೆಗಾಗಿ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗಕ್ಕೆ ಅಗತ್ಯ ತರಬೇತಿ ನೀಡಲಾಗಿದೆ.

ನವೀಕೃತ ಶಾಲೆಯ ಲೋಕಾರ್ಪಣೆ ಕಾರ್ಯಕ್ರಮ ಜೂನ್ 25ರಂದು ಬೆಳಿಗ್ಗೆ 8.30ಕ್ಕೆ ಶಾಲೆಯ ಆವರಣದಲ್ಲಿ ನಡೆಯಲಿದೆ.

ರೋಟರಿ ಜಿಲ್ಲಾ ಗವರ್ನರ್‌ ರಾಜಾರಾಮ್ ಭಟ್ಟ ಅವರು ಗ್ಲೋಬಲ್ ಗ್ರಾಂಟ್‍ ಕೊಡುಗೆ ಹಸ್ತಾಂತರಿಸಲಿದ್ದಾರೆ. ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ
ಎ.ಎಸ್. ವಿಶ್ವನಾಥ, ಉಪಾಧ್ಯಕ್ಷ ಟಿ.ಆರ್. ಅಶ್ವಥ ನಾರಾಯಣಶೆಟ್ಟಿ, ಕಾರ್ಯದರ್ಶಿ ಎಸ್.ಎನ್. ನಾಗರಾಜ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎನ್‌.ಎಂ.ರಮೇಶ್ ಭಾಗವಹಿಸುವರು. ರೋಟರಿ ಕ್ಲಬ್ ಶಿವಮೊಗ್ಗದ ಅಧ್ಯಕ್ಷ ಎಚ್.ಎಸ್. ಮೋಹನ್‍ ಅಧ್ಯಕ್ಷತೆ ವಹಿಸುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.