ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಗಂದೂರು: ಗೀತಾ ಶಿವರಾಜಕುಮಾರ್ ಭೇಟಿ

‘ಬಿ’ ಫಾರಂಗೆ ಪೂಜೆ ಸಲ್ಲಿಕೆ
Published 14 ಏಪ್ರಿಲ್ 2024, 16:32 IST
Last Updated 14 ಏಪ್ರಿಲ್ 2024, 16:32 IST
ಅಕ್ಷರ ಗಾತ್ರ

ಸಿಗಂದೂರು (ತುಮರಿ): ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಕುಟುಂಬ ಸದಸ್ಯರೊಂದಿಗೆ ಭಾನುವಾರ ಭೇಟಿ ನೀಡಿ, ‘ಬಿ’ ಫಾರಂಗೆ ಪೂಜೆ ಸಲ್ಲಿಸಿದರು.

ಗೀತಾ ಅವರು ಏ.15 ರಂದು ಬೆಳಿಗ್ಗೆ 10.30ಕ್ಕೆ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಶಕ್ತಿ ದೇವತೆ ಸಿಗಂದೂರು ಚೌಡೇಶ್ವರಿ ದೇವಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ದೇವಿ ಆಶೀರ್ವಾದ ಪಡೆದರು.

ಸಚಿವ ಎಸ್.ಮಧು ಬಂಗಾರಪ್ಪ, ನಟ ಶಿವರಾಜಕುಮಾರ್, ಶಾಸಕ ಬೇಳೂರು ಗೋಪಾಲಕೃಷ್ಣ, ಸಿಗಂದೂರು ಕ್ಷೇತ್ರದ ಧರ್ಮಾಧಿಕಾರಿ ಎಸ್. ರಾಮಪ್ಪ, ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಭಾವತಿ ಚಂದ್ರಕಾಂತ್, ಓಂಕಾರ ಮುರಕ್ಕಿ, ಗಣೇಶ ಜಾಕಿ, ರವಿ ಅಳೂರು, ವಿಜಯ ಅಡಗಳಲೆ, ದೇವರಾಜ ಕಪ್ಪದೂರು, ಶ್ರೀದೇವಿ ರಾಮಚಂದ್ರ, ಸಂದ್ಯಾ ಸಿಗಂದೂರು, ಸುಧಾಕರ ಮಾವಿನಕೈ, ಶಶಿ ಜೈನ್, ಪ್ರಶಾಂತ ಬೈನೆಮನೆ, ಪಕ್ಷದ ಹಲವು ಮುಖಂಡರು ಇದ್ದರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಸಿಗಂದೂರು ದೇವಸ್ಥಾನದಲ್ಲಿ ‘ಬಿ’ ಫಾರಂಗೆ ವಿಶೇಷ ಪೂಜೆ ಸಲ್ಲಿಸಿದರು
ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರು ಸಿಗಂದೂರು ದೇವಸ್ಥಾನದಲ್ಲಿ ‘ಬಿ’ ಫಾರಂಗೆ ವಿಶೇಷ ಪೂಜೆ ಸಲ್ಲಿಸಿದರು
ಗೀತಾ ಹಾಗೂ ಶಿವರಾಜಕುಮಾರ್
ಗೀತಾ ಹಾಗೂ ಶಿವರಾಜಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT