ಸೊರಬ: ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿ ಪ್ರಭು ಮೇಸ್ತ್ರಿ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್ನ ಶ್ರೀರಂಜನಿ ಪ್ರವೀಣಕುಮಾರ್ ಆಯ್ಕೆಯಾದರು.

ಒಟ್ಟು 12 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ನ 7 ಹಾಗೂ ಬಿಜೆಪಿಯ 5 ಸದಸ್ಯರು ಇದ್ದಾರೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಮೀಸಲಾತಿ ಪ್ರಕಾರ, ಪರಿಶಿಷ್ಟ ಪಂಗಡಕ್ಕೆ ಸೇರಿದ ಪ್ರಭು ಮೇಸ್ತ್ರಿ ಒಬ್ಬರೇ ಸದಸ್ಯ ಇದ್ದುದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು. ಇವರ ಅಧಿಕಾರಾವಾಧಿ 6 ತಿಂಗಳು ಇರಲಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಜಯಲಕ್ಷ್ಮಿ ಹಾಗೂ ಕಾಂಗ್ರೆಸ್ನಿಂದ ಶ್ರೀರಂಜನಿ ಪ್ರವೀಣಕುಮಾರ್ ಸ್ಪರ್ಧಿಸಿದ್ದರು. ಜಯಲಕ್ಷ್ಮಿ 5 ಮತಗಳನ್ನು ಪಡೆದರೆ, ಶ್ರೀರಂಜಿನಿ ಪ್ರವೀಣಕುಮಾರ್ 8 ಮತಗಳನ್ನು ಪಡೆದು 3 ಮತಗಳ ಅಂತರದಿಂದ ಗೆಲುವು ಪಡೆದರು.

ಸಚಿವ ಮಧು ಬಂಗಾರಪ್ಪ ಅವರು ಉಪಾಧ್ಯಕ್ಷ ಹುದ್ದಗೆ ಕಾಂಗ್ರೆಸ್ನಿಂದ ಸ್ಪರ್ಧಿಸಿರುವ ಶ್ರೀರಂಜಿನಿ ಪರವಾಗಿ ಮತ ಚಲಾಯಿಸಿದರು. ಆದರೆ ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಭಾಗವಹಿಸಿದ್ದರಿಂದ ಬಿಜೆಪಿಯ ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಅವರಿಗೆ ಹಕ್ಕು ಚಲಾಯಿಸಲು ಸಾಧ್ಯವಾಗಲಿಲ್ಲ.

‘ಪಕ್ಷಪಾತವಿಲ್ಲದೇ ಪಟ್ಟಣದ ಅಭಿವೃದ್ಧಿಗೆ ಮುಂದಾಗುತ್ತೇನೆ’ ಎಂದು ನೂತನ ಅಧ್ಯಕ್ಷ ಪ್ರಭು ಮೇಸ್ತ್ರಿ ಹೇಳಿದರು.

‘ಜಿಲ್ಲಾ ಉಸ್ತುವಾರಿ ಮಧು ಬಂಗಾರಪ್ಪ ಅವರ ಸಹಕಾರದಿಂದ ನಾನು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ. ನನ್ನ ಮಾವ ಡಿ.ಆರ್.ಶ್ರೀಧರ್ ಅವರು ಸತತ 6 ಬಾರಿ ಗೆದ್ದು, ಅಧ್ಯಕ್ಷರಾಗಿ ಉತ್ತಮ ಆಡಳಿತ ನಡೆಸಿದ್ದರು. ನಾನು ಕೂಡಾ ಈ ಸ್ಥಾನಕ್ಕೆ ಬರಬೇಕೆಂದು ಅವರು ಕಂಡಿದ್ದ ಕನಸು ನನಸಾಗಿದೆ. ಎಲ್ಲರ ಸಹಕಾರದಿಂದ ಶಕ್ತಿಮೀರಿ ಅಭಿವೃದ್ಧಿಗೆ ಶ್ರಮಿಸುವೆ’ ಎಂದು ಉಪಾಧ್ಯಕ್ಷೆ ಶ್ರೀರಂಜನಿ ತಿಳಿಸಿದರು.

ಸಾಗರದ ಉಪ ವಿಭಾಗಾಧಿಕಾರಿಯಾಗಿ ರಶ್ಮಿ ಎಚ್.ಕರ್ತವ್ಯ ನಿರ್ವಹಿಸಿದರು. ಸದಸ್ಯರಾದ ಎಂ.ಡಿ.ಉಮೇಶ್, ಮಧುರಾಯ್ ಶೇಟ್, ನಟರಾಜ್, ಜಯಲಕ್ಷ್ಮಿ, ಪ್ರಸನ್ನಕುಮಾರ್ ದೊಡ್ಡಮನೆ, ಅನ್ಸರ್ ಅಹಮದ್, ಆಫ್ರಿನಾ ಬಾನು, ಸುಲ್ತಾನಾ ಬೇಗಂ, ಈರೇಶಪ್ಪ, ಪ್ರೇಮಾ ಟೋಕಪ್ಪ, ಪುರಸಭೆ ಮುಖ್ಯಾಧಿಕಾರಿ ಚಂದನ್ ಸೇರಿದಂತೆ ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.