ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಆಂಬುಲೆನ್ಸ್ ಚಾಲಕರಿಗೆ ಕ್ವಾರಂಟೈನ್

ಕುಟುಂಬದೊಂದಿಗೆ 15 ದಿನಗಳ ಕಾಲ ದೂರ ಉಳಿಯುವ ಸಿಬ್ಬಂದಿ
Last Updated 8 ಮೇ 2020, 14:39 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಮತ್ತು ಶಂಕಿತರನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯದಲ್ಲಿ ಶ್ರಮಿಸುತ್ತಿರುವ ‘108’ ಆಂಬುಲೆನ್ಸ್ ಚಾಲಕರ ಕಾರ್ಯವೈಖರಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಜಿಲ್ಲೆಯಲ್ಲಿ 35 ‘108’ ಆಂಬುಲೆನ್ಸ್‌ಗಳಿವೆ. ಇವುಗಳಲ್ಲಿ 8 ವಾಹನಗಳನ್ನು ಕೊರೊನಾ ಸೋಂಕಿತರು, ಅವರ ಕುಟುಂಬದವರನ್ನು ಕ್ವಾರಂಟೈನ್ ಮಾಡಲು, ಆಸ್ಪತ್ರೆ ಸಿಬ್ಬಂದಿಯನ್ನು ಕರೆತರಲು ಬಳಸಿಕೊಳ್ಳಲಾಗುತ್ತಿದೆ.

ಆಂಬುಲೆನ್ಸ್ ಸಿಬ್ಬಂದಿ 2 ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತಿ ವಾಹನದಲ್ಲಿ ಚಾಲಕ ಹಾಗೂ ಸಹಾಯಕ ನರ್ಸ್‍ಗಳ ಸುರಕ್ಷತೆಗಾಗಿ ಪಿಪಿಇ ಕಿಟ್, ಮಾಸ್ಕ್, ಸ್ಯಾನಿಟೈಸರ್ ಒಳಗೊಂಡಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಸೋಂಕಿತರನ್ನು ಕರೆತರುವ ಕಾರ್ಯದಲ್ಲಿ ನಿರತರಾದ ಸಿಬ್ಬಂದಿಯ ಕೆಲಸ ಮುಗಿದ ಬಳಿಕ ಅವರನ್ನು 1 ವಾರ ಪ್ರತ್ಯೇಕವಾಗಿ ಕ್ವಾರಂಟೈನ್‌ನಲ್ಲಿ ಇಡಲಾಗುತ್ತಿದೆ. ಇದರಿಂದ ಸಿಬ್ಬಂದಿ ತಮ್ಮ ಕುಟುಂಬದವರಿಂದ 15 ದಿನಗಟ್ಟಲೇ ದೂರವೇ ಉಳಿಯುವಂತಾಗಿದೆ.

ಆಂಬುಲೆನ್ಸ್ ಸಿಬ್ಬಂದಿಗೂ ವಿಶೇಷ ತರಬೇತಿ ನೀಡಲಾಗಿದೆ. ಸೋಂಕಿತರನ್ನು ಕರೆತರುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ತಮ್ಮನ್ನು ತಾವು ರಕ್ಷಣೆ ಮಾಡಿಕೊಂಡು ಸೋಂಕಿತರನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವ ಬಗ್ಗೆ ತರಬೇತಿ ನೀಡಲಾಗಿದೆ.

‘ಕರ್ತವ್ಯ ನಿರ್ವಹಣೆ ಸಮಯದಲ್ಲಿ ಸಿಬ್ಬಂದಿಗೆ ರಕ್ಷಾ ಕವಚ ನೀಡಲಾಗಿದೆ. ಕ್ವಾರಂಟೈನ್ ಸಮಯದಲ್ಲಿ ಉಳಿದುಕೊಳ್ಳಲು ಕೊಠಡಿ, ಊಟ, ಸ್ನಾನ ಇತ್ಯಾದಿ ಮೂಲಸೌಕರ್ಯ ಕಲ್ಪಿಸಲಾಗಿದೆ’ ಎಂದು ‘108’ ಸೇವೆ ನಿರ್ವಹಿಸುತ್ತಿರುವ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ರೀಸರ್ಚ್ ಇನ್‌ಸ್ಟಿಟ್ಯೂಟ್ (ಜಿವಿಕೆ–ಇಎಂಆರ್‌ಐ) ಪ್ರಾದೇಶಿಕ ವ್ಯವಸ್ಥಾಪಕ ಹಫೀಸ್ ಉಲ್ಲಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT