ತುಮಕೂರು: ನಗರದಲ್ಲಿ ಶನಿವಾರ ರೋಟರಿ ತುಮಕೂರು ಸೆಂಟ್ರಲ್ ಹಾಗೂ ರೋಟರಿ ಈಸ್ಟ್ ವತಿಯಿಂದ ಕ್ಯಾನ್ಸರ್ ಜಾಗೃತಿ ಜಾಥಾ ನಡೆಯಿತು.

ನಗರದ ಎಸ್ಐಟಿ ಕಾಲೇಜು ಮುಂಭಾಗದಿಂದ ಆರಂಭವಾದ ಜಾಥಾ ಬಿ.ಎಚ್.ರಸ್ತೆ ಮೂಲಕ ಸಾಗಿ ವಿಶ್ವವಿದ್ಯಾಲಯ ಮುಂಭಾಗ ಮುಕ್ತಾಯಗೊಂಡಿತು. ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಕ್ಯಾನ್ಸರ್ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

ರೋಟರಿ ಜಿಲ್ಲಾ ಕಾರ್ಯದರ್ಶಿ ಬಿಳಿಗೆರೆ ಶಿವಕುಮಾರ್, ‘ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಗರ್ಭ ಕಂಠದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಕ್ಯಾನ್ಸರ್ ನಿವಾರಣೆಗೆ ವ್ಯಾಕ್ಸಿನ್ ಸಹ ಬಂದಿದೆ’ ಎಂದು ತಿಳಿಸಿದರು.

ರೋಟರಿ ಮುಖಂಡರಾದ ಆಶಾ ಪ್ರಸನ್ನಕುಮಾರ್, ‘ಗರ್ಭಕಂಠದ ಕ್ಯಾನ್ಸರ್ ನಿವಾರಣೆಗಾಗಿ ರೋಟರಿ ವತಿಯಿಂದ ಉಚಿತವಾಗಿ ವ್ಯಾಕ್ಸಿನ್ ಕೊಡಿಸಲಾಗುತ್ತಿದೆ. ಈ ವ್ಯಾಕ್ಸಿನ್ ತೆಗೆದುಕೊಂಡರೆ ಜೀವನ ಪರ್ಯಂತ ಕ್ಯಾನ್ಸರ್ ಬರುವುದಿಲ್ಲ’ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ರೋಟರಿ ಸೆಂಟ್ರಲ್ ಅಧ್ಯಕ್ಷ ರಾಮಶೇಷಗಿರಿ ರಾವ್, ರೋಟರಿ ಈಸ್ಟ್ ಅಧ್ಯಕ್ಷ ಶಶಿಧರ್, ಪ್ರಮುಖರಾದ ಚಂದ್ರಶೇಖರ್, ಸುರೇಶ್, ಶ್ರೀಹರಿ, ಮಲ್ಲೇಶಯ್ಯ, ಕಿಶೋರ್, ನಾಗರಾಜಶೆಟ್ಟಿ, ಚಿಕ್ಕೇಗೌಡ, ನಾಗರತ್ನ ಇತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.