ತುಮಕೂರು: ಕೋಳಿ ಮಾಂಸ, ಮೀನು ಗಗನಮುಖಿಯಾಗಿದ್ದರೆ, ತರಕಾರಿ, ಸೊಪ್ಪಿನ ದರವೂ ಏರಿಕೆಯತ್ತ ಮುಖ ಮಾಡಿದೆ. ಹಣ್ಣು, ಬೇಳೆ ಧಾನ್ಯಗಳು ಯಥಾಸ್ಥಿತಿ ಕಾಯ್ದುಕೊಂಡಿವೆ.

ಈ ವಾರವೂ ತರಕಾರಿ ಬೆಲೆ ಏರುಗತಿಯಲ್ಲೇ ಸಾಗಿದೆ. ಗಡ್ಡೆಕೋಸು ಅಲ್ಪ ಇಳಿಕೆ ಆಗಿರುವುದನ್ನು ಹೊರತುಪಡಿಸಿದರೆ ಉಳಿದ ತರಕಾರಿಗಳು ದುಬಾರಿ ಸ್ಥಿತಿಯಲ್ಲೇ ಇವೆ. ಬೀನ್ ಕೆ.ಜಿ ₹70–80ಕ್ಕೆ ಏರಿಕೆಯಾಗಿದ್ದು, ಕ್ಯಾರೇಟ್, ಬೀಟ್ರೂಟ್ ಮತ್ತಷ್ಟು ಹೆಚ್ಚಳವಾಗಿದೆ. ಇತರೆ ತರಕಾರಿಗಳ ದರವೂ ಇದೇ ದಾರಿಯಲ್ಲಿ ಸಾಗಿದೆ. ಬೆಳ್ಳುಳ್ಳಿ, ಶುಂಠಿ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಟೆಮೆಟೊ ಧಾರಣೆ ಮಾತ್ರ ಸುಧಾರಿಸುವಂತೆ ಕಾಣುತ್ತಿಲ್ಲ. ಕೆ.ಜಿ ₹10–15ರ ನಡುವೆಯೇ ಸುತ್ತಾಡುತ್ತಿದೆ.

ಸೊಪ್ಪು: ಪಾಲಕ್ ಸೊಪ್ಪು ಸ್ವಲ್ಪ ಹೆಚ್ಚಳ ದಾಖಲಿಸಿದ್ದು, ಉಳಿದಂತೆ ಯಥಾಸ್ಥಿತಿ ಮುಂದುವರಿದಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹40–50, ಸಬ್ಬಕ್ಕಿ ಸೊಪ್ಪು ಕೆ.ಜಿ ₹40–50, ಮೆಂತ್ಯ ಸೊಪ್ಪು ಕೆ.ಜಿ ₹30–40, ಪಾಲಕ್ ಸೊಪ್ಪು (ಕಟ್ಟು) ₹50ಕ್ಕೆ ಸಿಗುತ್ತಿದೆ.

ಹಣ್ಣು ಯಥಾಸ್ಥಿತಿ: ಈ ವಾರ ಹಣ್ಣುಗಳ ಧಾರಣೆ ಯಥಾಸ್ಥಿತಿ ಕಾಯ್ದುಕೊಂಡಿದ್ದು, ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಸೇಬು ತುಸು ಏರಿಕೆಯತ್ತ ಸಾಗಿದ್ದು, ಡ್ರ್ಯಾಗನ್ ಫ್ರೂಟ್ ಅಲ್ಪ ಚೇತರಿಸಿದೆ. ಮಾವಿನ ಹಣ್ಣಿನಲ್ಲಿ ಸ್ವಲ್ಪ ಏರಿಳಿತ ಕಂಡುಬಂದಿದೆ.

ಅಡುಗೆ ಎಣ್ಣೆ: ಅಡುಗೆ ಎಣ್ಣೆಯ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ಗೋಲ್ಡ್ವಿನ್ನರ್ ಕೆ.ಜಿ ₹147–150, ಪಾಮಾಯಿಲ್ ಕೆ.ಜಿ ₹118–120, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.

ಬೇಳೆ– ಧಾನ್ಯ: ಬೇಳೆ ಕಾಳುಗಳು, ಧಾನ್ಯಗಳ ಧಾರಣೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಆದರೆ ಅಕ್ಕಿ ಬೆಲೆ ತುಸು ಕಡಿಮೆಯಾದಂತೆ ಕಾಣುತ್ತಿದೆ. ಶೇಂಗಾ, ಉರಿಗಡಲೆ ಕೊಂಚ ಇಳಿದಿದೆ.

ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳು ಏರಿಕೆಯತ್ತಲೇ ಸಾಗಿವೆ. ಗಸಗಸೆ ಬೆಲೆ ಸದ್ಯಕ್ಕೆ ಕಡಿಮೆಯಾಗುವಂತೆ ಕಾಣುತ್ತಿಲ್ಲ. ಟರ್ಕಿಯಿಂದ ಆಮದು ಪ್ರಮಾಣ ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.

ಧನ್ಯ ಕೆ.ಜಿ ₹105–120, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹200–220, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹150–160, ಹುಣಸೆಹಣ್ಣು ₹140–180, ಬೆಲ್ಲ ಕೆ.ಜಿ ₹55–60, ಕಾಳುಮೆಣಸು ಕೆ.ಜಿ ₹750–800, ಜೀರಿಗೆ ಕೆ.ಜಿ ₹270–280, ಚಕ್ಕೆ ಕೆ.ಜಿ ₹260–270, ಲವಂಗ ಕೆ.ಜಿ ₹850–880, ಗುಣಮಟ್ಟದ ಗಸಗಸೆ ಕೆ.ಜಿ ₹1,500–1,550, ಏಲಕ್ಕಿ ಕೆ.ಜಿ ₹2,800–3,000, ಬಾದಾಮಿ ಕೆ.ಜಿ ₹830–830, ಗೋಡಂಬಿ ಕೆ.ಜಿ ₹800–850, ಒಣ ದ್ರಾಕ್ಷಿ ಕೆ.ಜಿ ₹330–350ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಹೆಚ್ಚಳ: ಕೋಳಿ ಮಾಂಸದ ಬೆಲೆ ಕಳೆದ ಕೆಲ ವಾರಗಳಿಂದ ಏರುಮುಖವಾಗಿಯೇ ಸಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜಾತ್ರೆ, ಉತ್ಸವದ ಸಮಯದಲ್ಲಿ ಮಾಂಸದೂಟ ತಯಾರಿಸಲು ಹಾಗೂ ಮದುವೆ ನಂತರ ಬೀಗರ ಔತಣಕೂಟ ಏರ್ಪಡಿಸಲು ಕೋಳಿ ಮಾಂಸಕ್ಕೆ ಬೇಡಿಕೆ ಬಂದಿದೆ. ಹಾಗಾಗಿ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ.

ಬ್ರಾಯ್ಲರ್ ಕೋಳಿ ಕೆ.ಜಿ ₹130, ರೆಡಿ ಚಿಕನ್ ಕೆ.ಜಿ ₹220, ಸ್ಕಿನ್ಲೆಸ್ ಕೆ.ಜಿ ₹240, ಮೊಟ್ಟೆಕೋಳಿ (ಫಾರಂ) ಕೆ.ಜಿ ₹120ಕ್ಕೆ ಏರಿಕೆಯಾಗಿದೆ.

ಮೀನು ದುಬಾರಿ: ಮೀನಿನ ಧಾರಣೆ ಗಗನಮುಖಿಯಾಗಿದೆ. ಸಿಗಡಿ, ಏಡಿಯೂ ಅಷ್ಟೇ ದುಬಾರಿಯಾಗಿದೆ. ಮುಂಗಾರು ಮಳೆ ಸಮಯದಲ್ಲಿ ಮೀನು ಹಿಡಿಯಲು ಸಮುದ್ರಕ್ಕೆ ಇಳಿಯಲು ಅವಕಾಶ ಇರುವುದಿಲ್ಲ. ಮುಂಗಾರಿಗೆ ಮುನ್ನವೇ ಕರಾವಳಿ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಸದ್ಯ ಮೀನುಗಾರಿಕೆ ಸ್ಥಗಿತಗೊಂಡಿದೆ. ಮುಂದಿನ ದಿನಗಳಲ್ಲಿ ಮೀನಿಗೆ ಮತ್ತಷ್ಟು ಬೇಡಿಕೆ ಹೆಚ್ಚಾಗುವ ಕಾರಣಕ್ಕೆ ಇರುವ ಮೀನನ್ನು ಒಮ್ಮೆಲೆ ಮಾರಾಟ ಮಾಡಲು ಮುಂದಾಗುತ್ತಿಲ್ಲ. ಇದರಿಂದ ಬೆಲೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಬಂಗುಡೆ ಕೆ.ಜಿ ₹460, ಬೂತಾಯಿ ಕೆ.ಜಿ ₹370, ಬೊಳಿಂಜರ್ ಕೆ.ಜಿ ₹250, ಅಂಜಲ್ ಕೆ.ಜಿ ₹1,380, ಬಿಳಿಮಾಂಜಿ ಕೆ.ಜಿ ₹1,770, ಸೀಗಡಿ ಕೆ.ಜಿ ₹510–810, ಏಡಿ ಕೆ.ಜಿ ₹610ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.