ಸೋಮವಾರ, ಆಗಸ್ಟ್ 15, 2022
23 °C

ತುಮಕೂರು: 189 ಮಂದಿ ಕೋವಿಡ್ ರೋಗಿಗಳು ಗುಣಮುಖ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತ 189 ಮಂದಿ ಗುರುವಾರ ಗುಣಮುಖರಾಗಿದ್ದಾರೆ. ಅಲ್ಲದೆ ಕಳೆದ 24 ಗಂಟೆಗಳಲ್ಲಿ 222 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ 4,704 ಮಂದಿ ಗುಣಮುಖರಾಗಿದ್ದು 1,778 ಸಕ್ರಿಯ ಪ್ರಕರಣಗಳು ಇವೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕಿತ 7 ಮಂದಿ ಮೃತರಾಗಿದ್ದಾರೆ. ಇವರಲ್ಲಿ ಒಬ್ಬರು ಬೇರೊಂದು ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ದಾಖಲಾದ ನಂತರ ಅವರಿಗೂ ಸೋಂಕು ತಗುಲಿತ್ತು.

ನಗರದ ಬಟವಾಡಿ 50 ವರ್ಷದ, ಗೋಕುಲ ಬಡಾವಣೆ 69 ವರ್ಷದ ಪುರುಷ, ಶ್ರೀರಾಮ ನಗರದ 61 ವರ್ಷದ ಮಹಿಳೆ, ಎಸ್‌.ಎಸ್.ಪುರಂ 83 ವರ್ಷದ, ಲಿಂಗಾಪುರ 58 ವರ್ಷದ, ಕೆ.ಆರ್.ಬಡಾವಣೆ 74 ವರ್ಷದ ಪುರುಷ, ಸಿದ್ಧಾರ್ಥ ನಗರದ 72 ವರ್ಷದ ಮಹಿಳೆ ಮೃತಪಟ್ಟಿರುವುದನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ.

ಮೃತ ಒಟ್ಟು 189 ಮಂದಿಯಲ್ಲಿ 9 ಮಂದಿ ಅನ್ಯಕಾಯಿಲೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ದಾಖಲಾದಾಗ ಕೊರೊನಾ ಸೋಂಕು ತಗುಲಿದೆ. ಉಳಿದ 180 ಮಂದಿ ಕೊರೊನಾ ಸೋಂಕಿನಿಂದ ಮೃತರಾಗಿದ್ದಾರೆ.

ತಾಲ್ಲೂಕು;ಇಂದಿನ ಸೋಂಕಿತರು (ಸೆ.3);ಒಟ್ಟು ಸೋಂಕಿತರು;ಮರಣ

ಚಿ.ನಾ.ಹಳ್ಳಿ;23;393;4

ಗುಬ್ಬಿ;13;469;9

ಕೊರಟಗೆರೆ;9;346;7

ಕುಣಿಗಲ್;21;550;14

ಮಧುಗಿರಿ;20;450;8

ಪಾವಗಡ;27;586;13

ಶಿರಾ;9;479;7

ತಿಪಟೂರು;27;543;13

ತುಮಕೂರು;57;2,451;109

ತುರುವೇಕೆರೆ;16;391;5

ಒಟ್ಟು;222;6,662;189

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು