ತುಮಕೂರು: ಕತ್ತೆ ಭಾರ ಹೊರಲು ಸೀಮಿತ, ಇದನ್ನು ಸಾಕುವುದು ವ್ಯರ್ಥ ಎಂಬ ಭಾವನೆ ತುಂಬಾ ಜನರಲ್ಲಿ ಬೇರೂರಿದೆ. ಪಿಎಚ್.ಡಿ ಪದವೀಧರ, ಸಹಾಯಕ ಪ್ರಾಧ್ಯಾಪಕರೊಬ್ಬರು ಇದನ್ನು ಸುಳ್ಳಾಗಿಸಿದ್ದಾರೆ.

ಮಧುಗಿರಿ ಪಟ್ಟಣದ ರಂಗೇಗೌಡ ಅವರು ‘ಕ್ಷೀರಸಾಗರ್ ಕತ್ತೆ ಫಾರ್ಮ್’ ಆರಂಭಿಸಿ ಯಶಸ್ಸು ಸಾಧಿಸಿದ್ದಾರೆ. ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

‘ಕತ್ತೆ ಸಾಕಾಣಿಕೆ ಹೊರೆಯಲ್ಲ, ಕತ್ತೆ ಭಾರ ಹೊರಲು ಸೀಮಿತವಲ್ಲ. ಇದರ ಹಾಲು, ಗೊಬ್ಬರ, ಗಂಜಲದಿಂದ ಒಂದು ಉದ್ಯಮ ನಡೆಸಬಹುದು. ಕತ್ತೆ ಫಾರ್ಮ್ ಒಂದು ರೀತಿಯಲ್ಲಿ ‘ಬಂಗಾರದ ಗಣಿ’ ಇದ್ದಂತೆ’ ಎನ್ನುತ್ತಾರೆ ರಂಗೇಗೌಡ.

ರಾಜ್ಯದ ಗಡಿಭಾಗ ಹೂವಿನಹಳ್ಳಿಯ 2 ಎಕರೆ ವಿಸ್ತೀರ್ಣದಲ್ಲಿ ಕತ್ತೆ ಫಾರ್ಮ್ ಆರಂಭಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಹಾಲು ಕರೆದು ಮಾರಾಟ ಮಾಡುತ್ತಿದ್ದಾರೆ. ಕೃಷಿ ಮೇಲಿನ ಒಲವಿನಿಂದ ಕತ್ತೆ ಸಾಕಾಣಿಕೆ ಆರಂಭಿಸಿದ್ದು, ಈಗ ಅದು ಉದ್ಯಮವಾಗಿ ಬದಲಾಗಿದೆ. ಪ್ರಾರಂಭದಲ್ಲಿ ರಾಜಸ್ಥಾನ, ಗುಜರಾತ್ನಿಂದ ಐದು ಕತ್ತೆ ತಂದರು. ಇದೀಗ ಫಾರ್ಮ್ನಲ್ಲಿ 20 ಮರಿ, ಹಾಲು ಕೊಡುವ 40 ಕತ್ತೆ ಸೇರಿ 120 ಕತ್ತೆಗಳಿವೆ.

ಪ್ರತಿ ದಿನ 25ರಿಂದ 30 ಲೀಟರ್ ಹಾಲು ಸಿಗುತ್ತಿದೆ. ಮಧುಗಿರಿ ತಾಲ್ಲೂಕಿನ ವೆಂಕಟಾಪುರ ಗ್ರಾಮದಲ್ಲಿ ಕತ್ತೆ ಸಾಕಾಣಿಕೆ ತರಬೇತಿ ಕೇಂದ್ರ ಪ್ರಾರಂಭಿಸಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳ ರೈತರು, ಕತ್ತೆ ಸಾಕಾಣಿಕೆ ಬಗ್ಗೆ ಆಸಕ್ತಿ ಇರುವವರು ಇಲ್ಲಿಗೆ ಭೇಟಿ ನೀಡಿ ತರಬೇತಿ ಪಡೆಯುತ್ತಿದ್ದಾರೆ.

ಕೆ.ಜಿ ಗೊಬ್ಬರಕ್ಕೆ ₹100, 1 ಲೀಟರ್ ಗಂಜಲಕ್ಕೆ ₹300 ನಿಗದಿಪಡಿಸಿದ್ದು, ಎಲ್ಲ ಕಡೆಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಈಗಾಗಲೇ ಕತ್ತೆ ಹಾಲಿನಿಂದ ನಿಂದ ಸೋಪು, ಫೇಸ್ ಕ್ರೀಮ್ ತಯಾರಿಸಿ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಮಾರುಕಟ್ಟೆಗೆ ತರುವ ಯೋಜನೆ ರೂಪಿಸಿದ್ದಾರೆ. ಇದರ ಜತೆಗೆ ಮತ್ತೆ ಹೊಸದಾಗಿ ಶಾಂಪು, ಫೇಸ್ ಕ್ರೀಮ್ ಸೇರಿ ಐದು ಸೌಂದರ್ಯ ವರ್ಧಕ ಉತ್ಪನ್ನ ತಯಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕತ್ತೆ ಹಾಲಿಗೆ ಮಾರುಕಟ್ಟೆಯಲ್ಲಿ ₹1 ಸಾವಿರದಿಂದ ₹5 ಸಾವಿರದ ವರೆಗೆ ಬೆಲೆ ಇದೆ. ಕ್ಷೀರಸಾಗರ್ ಕತ್ತೆ ಫಾರ್ಮ್ನಲ್ಲಿ ಪ್ರತಿ ಲೀಟರ್ಗೆ ₹2,500 ನಿಗದಿ ಪಡಿಸಲಾಗಿದೆ. ಇಲ್ಲಿಂದ ಬೆಂಗಳೂರು, ಹೈದರಾಬಾದ್, ಮುಂಬೈಗೆ ಹಾಲು ಕಳುಹಿಸಲಾಗುತ್ತಿದೆ.

‘ಕತ್ತೆ ಹಾಲು ತಾಯಿಯ ಎದೆ ಹಾಲಿಗೆ ಸಮ. ಈ ಹಾಲಿನಲ್ಲಿ ವಿಟಮಿನ್ ಎ, ಬಿ, ಸಿ, ಡಿ, ಇ ಅಂಶ, ಸೋಡಿಯಂ, ಪೊಟ್ಯಾಶಿಯಂ ಜತೆಗೆ ಕಬ್ಬಿಣಾಂಶ ಇರುತ್ತದೆ. ರೋಗ ನಿರೋಧಕ ಶಕ್ತಿ ವೃದ್ಧಿಗೆ ಹಾಲು ಸಹಕಾರಿಯಾಗುತ್ತದೆ. ಅನೇಕ ಕಾಯಿಲೆಗಳಿಗೆ ‘ರಾಮಬಾಣ’ದಂತೆ ಕೆಲಸ ಮಾಡುತ್ತದೆ. ಔಷಧಗಳ ತಯಾರಿಕೆಗೂ ಇದೇ ಹಾಲು ಬಳಸುತ್ತಾರೆ’ ಎಂದು ರಂಗೇಗೌಡ ಪ್ರತಿಕ್ರಿಯಿಸಿದರು.

ಲೀಟರ್ ಕತ್ತೆ ಹಾಲು ₹2,500 ಫಾರ್ಮ್ನಲ್ಲಿವೆ 120 ಕತ್ತೆ ಕೆ.ಜಿ ಗೊಬ್ಬರಕ್ಕೆ ₹100 ನಿಗದಿ

ಮಧುಗಿರಿಯಲ್ಲಿ ಹಾಲಿನ ಡೇರಿ ಜಿಲ್ಲೆಯಲ್ಲಿ ಈವರೆಗೆ ಹಾಲು ಖರೀದಿ ಮಾರಾಟಕ್ಕೆ ಯಾವುದೇ ನಿಗದಿತ ಸ್ಥಳವಿಲ್ಲ. ನಂದಿನಿ ಹಾಲಿನ ಮಾದರಿಯಲ್ಲೇ ಮಧುಗಿರಿ ಪಟ್ಟಣದಲ್ಲಿ ಒಂದು ಡೇರಿ ಶುರು ಮಾಡಿ ಕತ್ತೆ ಹಾಲು ಸಂಗ್ರಹ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲು ರಂಗೇಗೌಡ ಮುಂದಾಗಿದ್ದಾರೆ. ಕತ್ತೆ ಹಾಲು ಮಾರಾಟಕ್ಕೆ ಈಗ ಸಾಮಾಜಿಕ ಮಾಧ್ಯಮ ಅವಲಂಬಿಸಿದ್ದು ಮುಂದಿನ ದಿನಗಳಲ್ಲಿ ತಮ್ಮದೇ ಸ್ವಂತ ವೆಬ್ಸೈಟ್ ಶುರು ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗುತ್ತದೆ.

ಕತ್ತೆ ಸಂಖ್ಯೆ ಇಳಿಕೆ: ಆತಂಕ ‘1992ರ ಜಾನುವಾರು ಗಣತಿ ವರದಿ ಪ್ರಕಾರ ದೇಶದಲ್ಲಿ 9 ಲಕ್ಷ ಕತ್ತೆಗಳಿದ್ದವು 2019ರಲ್ಲಿ 1.24 ಲಕ್ಷಕ್ಕೆ ಇಳಿಕೆ ಕಂಡಿದೆ. ಈಗ ಅಂದಾಜು 50 ಸಾವಿರಕ್ಕೆ ಕುಸಿದಿದೆ’ ಎಂದು ರಂಗೇಗೌಡ ಹೇಳಿದರು. ರಾಜ್ಯದಲ್ಲೂ ಕತ್ತೆಗಳು ಕಣ್ಮರೆಯಾಗುತ್ತಿವೆ. ಗುಜರಾತ್ ಮಹಾರಾಷ್ಟ್ರ ರಾಜಸ್ಥಾನದಲ್ಲಿ ಅಲ್ಪ–ಸ್ವಲ್ಪ ಉಳಿದುಕೊಂಡಿವೆ. ಜನರಿಗೆ ಕತ್ತೆ ಸಾಕಾಣಿಕೆ ಹಾಲಿನ ಮಹತ್ವದ ಕುರಿತು ಅರಿವು ಮೂಡಿಸುವುದು ತುಂಬಾ ಅಗತ್ಯ. ಗೊಬ್ಬರ ಗಂಜಲ ಹಾಲು ಸೇರಿದಂತೆ ಹತ್ತಾರು ರೀತಿಯಲ್ಲಿ ಪ್ರಯೋಜನವಾಗುತ್ತದೆ. ಇದನ್ನು ಎಲ್ಲರು ಅರಿತುಕೊಳ್ಳಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.