ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ವಸತಿ ಗೃಹಕ್ಕೆ ₹5 ಸಾವಿರ ಕೋಟಿ: ಬಸವರಾಜ ಬೊಮ್ಮಾಯಿ

ಕೊರಟಗೆರೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾಹಿತಿ
Last Updated 11 ಜೂನ್ 2020, 3:50 IST
ಅಕ್ಷರ ಗಾತ್ರ

ಕೊರಟಗೆರೆ: ರಾಜ್ಯದಾದ್ಯಂತ ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಮುಂದಿನ ಐದು ವರ್ಷ
ಗಳಲ್ಲಿ 5 ಸಾವಿರ ಕೋಟಿ ವೆಚ್ಚ ಮಾಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದಲ್ಲಿ ನೂತನ ಪೊಲೀಸ್ ಠಾಣೆ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ‘ಈಗಾಗಲೇ ಶೇ 48ರಷ್ಟು ವಸತಿ ಗೃಹಗಳ ನಿರ್ಮಾಣ ಕೆಲಸ ಮುಗಿದಿದೆ. ಮುಂದಿನ ಐದು ವರ್ಷದಲ್ಲಿ ಉಳಿದ ಕೆಲಸ ಪೂರ್ಣಗೊಳಿಸಲಾಗುವುದು’ ಎಂದರು.

ಶಾಸಕ ಡಾ.ಜಿ.ಪರಮೇಶ್ವರ ಮಾತನಾಡಿ, ‘ತಾಲ್ಲೂಕಿನಲ್ಲಿ ಬಹಳ ವರ್ಷಗಳಿಂದ ಸುಮಾರು 400 ಹಳ್ಳಿಗಳಿಗೆ ಒಂದೇ ಪೊಲೀಸ್ ಠಾಣೆ ಇತ್ತು. ಇದರಿಂದಾಗಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಕಷ್ಟವಾಗಿತ್ತು. ತಾಲ್ಲೂಕಿನ ಕೋಳಾಲದಲ್ಲಿ ನೂತನ ಪೊಲೀಸ್ ಠಾಣೆ ಆರಂಭಿಸಲಾಯಿತು. ಪಟ್ಟಣದಲ್ಲಿ ಸಿಪಿಐ ಹಾಗೂ ಪಿಎಸ್ಐ ಠಾಣೆ ಪ್ರತ್ಯೇಕಿಸಿ ಮೇಲ್ದರ್ಜೆಗೆ ಏರಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಪೊಲೀಸ್ ವಸತಿ ಗೃಹ ಸೇರಿದಂತೆ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣಕ್ಕೆ ₹ 10.45
ಕೋಟಿ ಅನುದಾನ ನೀಡಲಾಯಿತು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಮುಖಂಡ ಸೊಗಡು ಶಿವಣ್ಣ, ಪೊಲೀಸ್ ಮಹಾನಿರೀಕ್ಷಕ ಪ್ರವೀಣ್‌ ಸೂದ್‌, ಪೊಲೀಸ್ ವಸತಿ ಗೃಹ ವಿಭಾಗದ ಡಿಜಿಪಿ ಆರ್.ಪಿ.ಶರ್ಮಾ, ಎಡಿಜಿಪಿ ಅಮರ್‌ ಕುಮಾರ್ ಪಾಂಡೆ, ಕೇಂದ್ರ ವಲಯ ಐಜಿಪಿ ಶರತ್‌ಚಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ, ಎಎಸ್‌ಪಿ ಟಿ.ಜೆ.ಉದೇಶ, ಮಧುಗಿರಿ ಡಿವೈಎಸ್‌ಪಿ ಎಂ.ಪ್ರವೀಣ್, ಕೊರಟಗೆರೆ ಸಿಪಿಐ ಎಫ್.ಕೆ.ನದಾಫ್, ಪಿಎಸ್‌ಐ ಎಚ್.ಮುತ್ತುರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT