ತುಮಕೂರು: ‘ಟ್ರೇಡಿಂಗ್ ಮೇಲೆ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯಬಹುದು’ ಎಂಬ ಆಮಿಷಕ್ಕೆ ಒಳಗಾಗಿ ನಗರದ ಎಸ್.ಎಸ್.ಪುರಂನ ನಿವಾಸಿ, ಪ್ರಾಧ್ಯಾಪಕ ಟಿ.ಆರ್.ಹೇಮಂತ್‌ಕುಮಾರ್ ಎಂಬುವರು ₹10.53 ಲಕ್ಷ ಕಳೆದುಕೊಂಡಿದ್ದಾರೆ.
ಸೈಬರ್ ವಂಚಕರು ಕಳುಹಿಸಿದ ಲಿಂಕ್ ಮುಖಾಂತರ ‘ಡಿ–ಮಾಟ್ ಟ್ರೇಡಿಂಗ್ ಆ್ಯಪ್’ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ವಾಟ್ಸ್ ಆ್ಯಪ್‌ನಲ್ಲಿ ಹಣ ಹೂಡಿಕೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸೈಬರ್ ಆರೋಪಿಗಳು ತಿಳಿಸಿದ ವಿವಿಧ ಬ್ಯಾಂಕ್ ಖಾತೆ ಮತ್ತು ಯುಪಿಐ ಐ.ಡಿಗಳಿಗೆ ಆ. 5ರಿಂದ 27ರ ವರೆಗೆ ಹಂತ ಹಂತವಾಗಿ ₹10.53 ವರ್ಗಾಯಿಸಿದ್ದಾರೆ.
ಹೇಮಂತ್ ಅವರಿಗೆ ಯಾವುದೇ ಹಣ ವಾಪಸ್ ಬಂದಿಲ್ಲ. ಮೋಸ ಹೋಗಿರುವುದು ಅರಿವಿಗೆ ಬಂದ ನಂತರ ಸೈಬರ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.