ತುಮಕೂರು: ಯುವ ಸಮೂಹ ಮಹಾತ್ಮ ಗಾಂಧಿ ಅವರ ಸಂದೇಶ ಓದಿ, ಅರ್ಥ ಮಾಡಿಕೊಂಡು, ಅದರಂತೆ ನಡೆದುಕೊಳ್ಳಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಟಿ.ಆರ್.ರೇವಣ್ಣ ಸಲಹೆ ಮಾಡಿದರು.

ನಗರದಲ್ಲಿ ಭಾನುವಾರ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಉತ್ತರಾಧಿಕಾರಿಗಳ ಸಂಘ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಹಾಲಪ್ಪ ಪ್ರತಿಷ್ಠಾನದಿಂದ ಆಯೋಜಿಸಿದ್ದ 79ನೇ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ, ‘ಸ್ವಾತಂತ್ರ ಯೋಧರು, ಅವರ ವಾರಸುದಾರರಿಗೆ ಸರ್ಕಾರದ ಸೌಲಭ್ಯ ಸಿಗಬೇಕು. ವೀರ ಸೌಧಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸಬೇಕು. ಸ್ವಾತಂತ್ರ್ಯ ಹೋರಾಟಗಾರರ ಮಾಶಾಸನ ಹೆಚ್ಚಿಸಬೇಕು’ ಎಂದರು.
.ಬೀದರ್: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಿರಂಗಾ ಯಾತ್ರೆ ಸಂಭ್ರಮ.
ನಗರದ ಸ್ವತಂತ್ರ ಚೌಕದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಅಲ್ಲಿಂದ ಮಂಡಿಪೇಟೆ, ಜೆ.ಸಿ.ರಸ್ತೆಯ ಮೂಲಕ ವೀರ ಸೌಧದ ವರೆಗೆ ಮೆರವಣಿಗೆ ನಡೆಯಿತು. ಎಸ್ಬಿಐ ಅಧಿಕಾರಿ ಪ್ರೊ.ಕೆ.ಪುಟ್ಟರಂಗಪ್ಪ ಅವರ ‘ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರು’ ಕಿರು ಹೊತ್ತಿಗೆ ಬಿಡುಗಡೆಗೊಳಿಸಲಾಯಿತು.

ಮುಖಂಡರಾದ ರಾಜೇಂದ್ರ ಕಲಘಟಗಿ, ಟಿ.ಆರ್.ಕಲ್ಪನಾ, ಆಶಾ ಪ್ರಸನ್ನಕುಮಾರ್, ಬಿ.ಎಸ್.ಮಂಜುನಾಥ್, ಬಸವರಾಜ ಹಟ್ಟಿಗೌಡರ್, ಶಿವರಾಜು, ಜಗದೀಶ್, ಶಿವಯೋಗಯ್ಯ, ಪುರುಷೋತ್ತಮ್, ಟಿ.ಆರ್.ಸುದರ್ಶನ್, ಪ್ರಸನ್ನಕುಮಾರ್, ಚನ್ನಮಲ್ಲೇಗೌಡ, ಚನ್ನಕೇಶವಯ್ಯ, ಎಸ್.ಸತ್ಯ, ಕೆ.ಎಚ್.ಚಂದ್ರಶೇಖರ್, ಪ್ರೇಮಲತಾ, ಜಯಮ್ಮ ಇತರರು ಉಪಸ್ಥಿತರಿದ್ದರು.
.ಜಿಲ್ಲೆಯ ವಿವಿಧೆಡೆ ಸ್ವಾತಂತ್ಯ ಸಂಭ್ರಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.