ಮಂಗಳವಾರ, ಜೂನ್ 22, 2021
24 °C

‘ಹೆಲ್ತ್‌ವಾರ್‌ ರೂಂ’ ಆರಂಭ: ಸಹಾಯವಾಣಿಗೆ ಕರೆ ಮಾಡಿದರೆ ಕೋವಿಡ್‌ ಮಾಹಿತಿ

ಎಚ್.ಬಿ.ಸುಪ್ರತೀಕ್. Updated:

ಅಕ್ಷರ ಗಾತ್ರ : | |

Prajavani

ತಿಪಟೂರು: ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಜನತೆಗೆ ಅಗತ್ಯ ನೆರವು, ಮಾಹಿತಿ ನೀಡುವ ಸಲುವಾಗಿ ತಾಲ್ಲೂಕು ಆಡಳಿತದಿಂದ ಸಹಾಯವಾಣಿ (ಹೆಲ್ತ್‌ವಾರ್‌ ರೂಂ) ಪ್ರಾರಂಭಿಸಲಾಗಿದೆ.

ಸಹಾಯವಾಣಿ ಸಂಖ್ಯೆ ‘08134-251039’ಗೆ ಕರೆಮಾಡಿ ಸಾರ್ವಜನಿಕರು ಕೊರೊನಾ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೇ, ಹೆಲ್ತ್‌ವಾರ್ ರೂಂನಲ್ಲಿ 4 ಜನ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದು, ಅದರಲ್ಲಿ ಒಬ್ಬರು ಮುಖ್ಯ ವೈದ್ಯರಿರುತ್ತಾರೆ. ವಾರ್‌ರೂಂಗೆ ಬರುವ ಕರೆ ಸ್ವೀಕರಿಸಿ ಮಾತನಾಡುವ ಜೊತೆಗೆ ಕೊರೊನಾ ಸೋಂಕಿತರಾಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವವರಿಗೆ ನಿತ್ಯವೂ ಕರೆ ಮಾಡಿ ಅಗತ್ಯ ಮಾಹಿತಿ ಒದಗಿಸುವ ಜೊತೆಗೆ ಚಿಕಿತ್ಸೆ ಬಗ್ಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

ಕೋವಿಡ್‌ ಲಕ್ಷಣಗಳ ಬಗ್ಗೆ ತಾತ್ಸಾರ ಮನೋಭಾವ ಹೊಂದಿರುವ ಅನೇಕ ಸಾರ್ವಜನಿಕರು ಆಸ್ಪತ್ರೆಗೆ ಬಂದು ಪರೀಕ್ಷೆಗೆ  ಒಳಗಾಗುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಾಗ ಅವರ ಮನಸ್ಸು ಪರಿವರ್ತಿಸಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಕರೆ ತಂದಿರುವ ನಿದರ್ಶನ ನೂರಾರಿವೆ.

ಹೆಲ್ತ್‌ವಾರ್‌ರೂಂಗೆ ಶಾಸಕ ಬಿ.ಸಿ.ನಾಗೇಶ್ ದಿಢೀರ್ ಭೇಟಿ ನೀಡಿ ಕಾರ್ಯವೈಕರಿ ಪರಿಶೀಲಿಸಿದರು. ಹಲವು ರೋಗಿಗಳೊಂದಿಗೆ ಸಂಭಾಷಣೆ ನಡೆಸಿ ಧೈರ್ಯತುಂಬಿದರು. ಅಧಿಕಾರಿಗಳಿಗೆ ಗುಣಮಟ್ಟವನ್ನು ಇದೇ ರೀತಿ ಕಾಪಾಡಿಕೊಂಡು ಹೋಗುವಂತೆ ಸೂಚಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು