ತುಮಕೂರು ರೈಲು ನಿಲ್ದಾಣ ರಸ್ತೆಯ ಕ್ಯಾಂಟೀನ್‌ನಲ್ಲಿ ನೀರಿನ ಕ್ಯಾನ್ ಬಳಕೆ
ಸಿಗದ ರಾಗಿ ಮುದ್ದೆ
ಇಂದಿರಾ ಕ್ಯಾಂಟೀನ್‌ಗಳಲ್ಲಿ ಆರಂಭಿಸಿದ್ದ ರಾಗಿ ಮುದ್ದೆ ಚಪಾತಿ ಊಟ ನಿಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಜಿಲ್ಲಾ ಆಸ್ಪತ್ರೆಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ್ದರು. ಆ ಸಮಯದಲ್ಲಿ ರಾಗಿ ಮುದ್ದೆ ಚಪಾತಿ ಊಟವನ್ನು ನಗರದ ಎಲ್ಲ ಕ್ಯಾಂಟೀನ್‌ಗಳಲ್ಲಿ ಆರಂಭಿಸಲಾಗಿತ್ತು. ಹದಿನೈದು ದಿನ ಮುದ್ದೆ ಊಟ ನೀಡಿ ನಂತರ ನಿಲ್ಲಿಸಲಾಗಿದೆ. ‘ಜನಪ್ರತಿನಿಧಿಗಳು ಉನ್ನತ ಮಟ್ಟದ ಅಧಿಕಾರಿಗಳು ಭೇಟಿ ನೀಡಿದ ಸಮಯದಲ್ಲಿ ಮಾತ್ರ ಮುದ್ದೆ ಕಾಣಿಸುತ್ತದೆ. ಉಳಿದ ದಿನಗಳಲ್ಲಿ ಅನ್ನ ಸಾಂಬಾರ್ ಬಿಟ್ಟರೆ ಬೇರೇನೂ ಸಿಗುವುದಿಲ್ಲ. ಸಾಂಬಾರು ರುಚಿ ಇರುವುದಿಲ್ಲ ನೀರಿನಂತೆ ಇರುತ್ತದೆ. ಸಾಂಬಾರ್‌ಗೆ ತರಕಾರಿಯನ್ನೇ ಹಾಕುವುದಿಲ್ಲ’ ಎಂದು ವಿದ್ಯಾರ್ಥಿ ರೋಹಿತ್ ಹೇಳಿದರು.