ಕೆ.ಎನ್.ರಾಜಣ್ಣ ವಜಾ ಖಂಡಿಸಿ ಮಧುಗಿರಿಯಲ್ಲಿ ಮಂಗಳವಾರ ನಡೆದ ಪ್ರತಿಭಟನೆ ಸಮಯದಲ್ಲಿ ಅವರ ಬೆಂಬಲಿಗರೊಬ್ಬರು ಕುಡಿದದ್ದು ವಿಷವೇ? ಅಥವಾ ಕೆಮ್ಮಿನ ಔಷಧಿಯೇ? ಎಂಬ ಚರ್ಚೆಗಳು ಸಾಮಾಜಿಕ ಜಾಲ ತಾಣದಲ್ಲಿ ನಡೆದಿವೆ. ಒಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದರೆ ಮತ್ತಿಬ್ಬರು ವಿಷ ಕುಡಿಯಲು ಪ್ರಯತ್ನಿಸಿದ್ದರು. ಅದರಲ್ಲಿ ವಿಷ ಕುಡಿದಿದ್ದ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಕೆಮ್ಮಿನ ಔಷಧಿಯನ್ನೇ ವಿಷ ಎಂದು ಕೆಲವರು ಹೇಳಿಕೊಂಡಿದ್ದರು. ಕೆಮ್ಮಿನ ಔಷಧಿ ಬಾಟಲಿಯಲ್ಲಿ ವಿಷ ತುಂಬಿಕೊಂಡು ಬಂದಿದ್ದರು ಎಂದು ಕೆಲವರು ವಾದ ಮಂಡಿಸಿದ್ದಾರೆ. ಒಟ್ಟಾರೆಯಾಗಿ ಸಾಮಾಜಿಕ ಜಾಲ ತಾಣದಲ್ಲಿ ವಿಷ ‘ಹೌದು– ಅಲ್ಲ’ ಎಂಬ ಚರ್ಚೆಗಳು ನಡೆದಿವೆ.