ಕೊಡಿಗೇನಹಳ್ಳಿ: ಕೊಡಿಗೇನಹಳ್ಳಿ ಹೋಬಳಿಗೆ ಹೊಂದಿಕೊಂಡಿರವ ಆಂಧ್ರ ಪ್ರದೇಶದ ಚರ್ಲಾಪಲ್ಲಿ ಮುದ್ದೇನಹಳ್ಳಿ ಗೇಟ್ ಸಮೀಪ ಕಲಬೆರಕೆ ಸೇಂದಿ ಕುಡಿದು ರಾಜ್ಯ ಮತ್ತು ಆಂಧ್ರದ 20 ಮಂದಿ ಅಸ್ವಸ್ಥಗೊಂಡಿದ್ದಾರೆ.

ಮಧುಗಿರಿ ತಾಲ್ಲೂಕಿನ ತೆರಿಯೂರು ಗ್ರಾಮದ 13, ಚಿಕ್ಕದಾಳವಟ್ಟ ಗ್ರಾಮದ ಇಬ್ಬರು ಹಾಗೂ ಆಂಧ್ರಪ್ರದೇಶದ ಚೋಳೂರು ಗ್ರಾಮದ ಐವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಆಸ್ಪತ್ರೆಗೆ ದಾಖಲಾದ ಹೆಚ್ಚಿನವರು ತಮ್ಮಷ್ಟಕ್ಕೆ ತಾವೇ ಮಾತನಾಡುವುದು, ಯಾರೋ ಬಂದಿದ್ದಾರೆ ಎಂದು ಭಯ ಪಡುವುದು, ಬಟ್ಟೆ ಕಳಚಿ ಅಸಭ್ಯವಾಗಿ ವರ್ತಿಸುವುದು, ಕುಟುಂಬಸ್ಥರ ಮೇಲೆ ಹಲ್ಲೆಗೆ ಯತ್ನಿಸುತ್ತಿದ್ದಾರೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಹಿಂದೂಪುರದಲ್ಲಿ ನಾಗರಾಜು ನಿಂಗಕ್ಕ ಚಿಕಿತ್ಸೆ ಪಡೆಯುತ್ತಿದ್ದು, ತೆರಿಯೂರು ಗ್ರಾಮದ ಮಾರಪ್ಪ ದಾಸಪ್ಪ, ಚಿಕ್ಕನರಸಿಂಹಯ್ಯ, ನಾಗರಾಜು, ಟಿ. ನಾಗರಾಜು ಬೆಂಗಳೂರಿನ ನಿಮ್ಹಾನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.