ತಿಪಟೂರು: ಸುಮಾರು ಒಂದು ತಿಂಗಳಿನಿಂದ ಏಳೆಂಟು ಗ್ರಾಮಸ್ಥರಿಗೆ ತೊಂದರೆ ನೀಡುತ್ತಿದ್ದ ಮೂರು-ನಾಲ್ಕು ಚಿರತೆಗಳಲ್ಲಿ ಸೋಮವಾರ ಗ್ರಾಮಸ್ಥರ ಕಾರ್ಯಾಚರಣೆಯಲ್ಲಿ ಸುಮಾರು 4 ವರ್ಷದ ಚಿರತೆ ಬೋನಿಗೆ ಬಿದ್ದಿದೆ.

ತಾಲ್ಲೂಕಿನ ಕಸಬಾ ಹೋಬಳಿಯ ಕರೀಕೆರೆ ಮಜುರೆ ಅಂಚೆಕೊಪ್ಪಲು ಗ್ರಾಮದಲ್ಲಿ ಚಿರತೆ ಸೆರೆಸಿಕ್ಕಿದೆ. ಸಿದ್ದಾಪುರ, ಬೈರಾಪುರ, ಕರೀಕೆರೆ, ಅಂಚೆಕೊಪ್ಪಲು, ಶಂಕರಿಕೊಪ್ಪಲು, ಮತ್ತಿಹಳ್ಳಿ ಗ್ರಾಮಗಳಲ್ಲಿ ಗ್ರಾಮಸ್ಥರು ಚಿರತೆ ಭಯದಿಂದ ಇರುವಂತಾಗಿತ್ತು. ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಗೆ ಸಾಕಷ್ಟು ದೂರು ಸಲ್ಲಿಸಿ ನಂತರ ಮುಖ್ಯಮಂತ್ರಿ ಕಾರ್ಯಾಲಯಕ್ಕೆ ದೂರ ಸಲ್ಲಿಸಲಾಗಿತ್ತು.

ತಾಲ್ಲೂಕಿನ ಅರಣ್ಯ ಇಲಾಖೆ ಅಧಿಕಾರಿಗಳು ಕರೀಕೆರೆ, ಬೈರಾಪುರ ಗ್ರಾಮದ ತೋಟದ ಸಾಲಿನಲ್ಲಿ ಬೋನು ಇರಿಸಿದ್ದರು. ಆದರೆ ಅಂಚೆಕೊಪ್ಪಲು ಗ್ರಾಮದ ತೋಟದ ಸಾಲಿನಲ್ಲಿದ್ದ ಬೋನ್ಗೆ ಚಿರತೆ ಸೆರೆ ಸಿಗದ ಕಾರಣ ಗ್ರಾಮಸ್ಥರು ಗ್ರಾಮದ ಒಳಗೆ ಮಂಜುನಾಥ್ ಅವರ ಮನೆ ಪಕ್ಕದಲ್ಲಿಟ್ಟು ಬೋನ್ಗೆ ಕುರಿ ಹಾಗೂ ಕೋಳಿಯನ್ನಿಟ್ಟು, ಕಳೆದ ಮೂರು ದಿನಗಳಿಂದ ರಾತ್ರಿ ಪೂರ್ತಿ ಪಹರೆ ಮಾಡಿದ್ದರು. ಸೋಮವಾರ ಬೆಳಗ್ಗೆ ಸಮಯದಲ್ಲಿ ಸೆರೆ ಸಿಕ್ಕಿದೆ.

ಚಿರತೆ ನೋಡಲು ಮುಗಿಬಿದ್ದ ಜನ: ಚಿರತೆ ಸೆರೆ ಸಿಕ್ಕಿದೆ ಎಂಬ ಸುದ್ದಿ ತಿಳಿದ ತಕ್ಷಣ ನೂರಾರು ಜನರು ಬಂದು ಚಿರತೆ ನೋಡಿ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.