ಮಂಗಳವಾರ, ಜೂನ್ 15, 2021
27 °C

ತುಮಕೂರು, ಪಾವಗಡದಲ್ಲೇ ಹೆಚ್ಚು ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕೋವಿಡ್–19ನಿಂದ ಸಾವನ್ನಪ್ಪುವವರ ಸಂಖ್ಯೆ ಮತ್ತೆ ಏರುಗತಿಯಲ್ಲೇ ಸಾಗಿದ್ದು, ಶನಿವಾರ 18 ಮಂದಿ ಮೃತಪಟ್ಟಿದ್ದಾರೆ. ಇಂದು ತುಮಕೂರು ಹಾಗೂ ಪಾವಗಡ ತಾಲ್ಲೂಕಿನಲ್ಲೇ ಹೆಚ್ಚು ಸಾವು ಸಂಭವಿಸಿವೆ.

ತುಮಕೂರು ನಗರ ಹಾಗೂ ತಾಲ್ಲೂಕಿನಲ್ಲಿ 8, ಪಾವಗಡ ತಾಲ್ಲೂಕಿ ನಲ್ಲಿ 6, ಶಿರಾ 2, ಗುಬ್ಬಿ, ತುರುವೇಕೆರೆಯಲ್ಲಿ ತಲಾ ಒಬ್ಬರು ನಿಧನರಾಗಿದ್ದಾರೆ. ಅದರಲ್ಲಿ 13 ಪುರುಷರು, 5 ಮಹಿಳೆಯರು ಸೇರಿದ್ದಾರೆ. ಶುಕ್ರವಾರ 17 ಮಂದಿ ಮೃತರಾಗಿದ್ದರು.

ತುಮಕೂರು ನಗರ ಕ್ಯಾತ್ಸಂದ್ರ 60 ವರ್ಷದ ಪುರುಷ, ದೇವರಾಯಪಟ್ಟಣದ 55 ವರ್ಷದ ಪುರುಷ, ಸದಾಶಿವನಗರದ 40 ವರ್ಷದ ಪುರುಷ, ಇದೇ ಬಡಾವಣೆಯ 36 ವರ್ಷದ ಮಹಿಳೆ, ಉಪ್ಪಾರಹಳ್ಳಿಯ 35 ವರ್ಷದ ಮಹಿಳೆ, ಹೆಗ್ಗೆರೆ 66 ವರ್ಷದ ಮಹಿಳೆ, ತಾಲ್ಲೂಕಿನ ಸೀತಕಲ್ಲು ಗ್ರಾಮದ 55 ವರ್ಷದ ಮಹಿಳೆ, ದೊಡ್ಡತಿಮ್ಮನಪಾಳ್ಯದ 56 ವರ್ಷದ ಪುರುಷ ಸಾವನ್ನಪ್ಪಿದವರು.

ಪಾವಗಡ ಪಟ್ಟಣದ 76 ಹಾಗೂ 60 ವರ್ಷದ ಪುರುಷರು, ತಾಲ್ಲೂಕು ಎಸ್.ಆರ್.ಪಾಳ್ಯದ 40 ವರ್ಷದ ಪುರುಷ, ದೇವಲಕೆರೆ 86 ವರ್ಷದ ಪುರುಷ, ಶೈಲಾಪುರದ 58 ವರ್ಷದ ಪುರುಷ, ಮರಡಿಪಾಳ್ಯದ 50 ವರ್ಷದ ಮಹಿಳೆ ಸಾವು ಕಂಡವರು. ಶಿರಾದ 60 ಹಾಗೂ 68 ವರ್ಷದ ಪುರುಷರು, ತುರುವೇಕೆರೆ ತಾಲ್ಲೂಕು ಬೆಸೆಗೆರೆಹಳ್ಳಿ 58 ವರ್ಷದ ಪುರುಷ ಮೃತಪಟ್ಟಿದ್ದಾರೆ.

ತಾಲ್ಲೂಕುವಾರು ವಿವರ: ತುಮಕೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು 702, ಚಿಕ್ಕನಾಯಕನಹಳ್ಳಿ 89, ಗುಬ್ಬಿ 189, ಕೊರಟಗೆರೆ 55, ಕುಣಿಗಲ್ 117, ಮಧುಗಿರಿ 138, ಪಾವಗಡ 107, ಶಿರಾ 249, ತಿಪಟೂರು 314, ತುರುವೇಕೆರೆ ತಾಲ್ಲೂಕಿನಲ್ಲಿ 324 ಮಂದಿಗೆ ಸೋಂಕು ದೃಢಪಟ್ಟಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.